ಬೆಂಗಳೂರು: ಆಚಾರ್ಯ ಬೆಂಗಳೂರು ಬಿಸಿನೆಸ್ ಸ್ಕೂಲ್ (ಎಬಿಬಿಎಸ್ ) ವತಿಯಿಂದ ನ. 2ರಿಂದ 7ರವರೆಗೆ ‘ಬದಲಾಗುತ್ತಿರುವ ಯುಗದಲ್ಲಿಮಾನವ ಸಂಪನ್ಮೂಲ ಮತ್ತು ಎಐ ನಿರ್ವಹಣೆ ’ ವಿಷಯದಡಿ ಎಐಸಿಟಿಇ-ಅಟಲ್ ಪ್ರಾಯೋಜಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಯುಟಿ ನಾಲೆಡ್ಜ್ ಪಾರ್ಟ್ ನರ್ಸ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ರಿಚಾ ಬಾಸ್ಟಿನ್ , ‘‘ಉದ್ಯೋಗಿಗಳ ನೇಮಕಾತಿ, ಕಾರ್ಯಕ್ಷಮತೆ ಹಾಗೂ ನಾಯಕತ್ವದಲ್ಲಿಕೃತಕ ಬುದ್ಧಿಮತ್ತೆಯ ಪಾತ್ರ ಹೆಚ್ಚುತ್ತಿದೆ. ಎಐ ಮಾನವ ಸಂಪನ್ಮೂಲಕ್ಕೆ ಪರ್ಯಾಯವಲ್ಲ, ಬದಲಿಗೆ ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಬೇಕು,’’ ಎಂದು ಹೇಳಿದರು.ಕಾರ್ಯಕ್ರಮದಲ್ಲಿತಜ್ಞರು ಎಐ ಆಧಾರಿತ ಮಾನವ ಸಂಪನ್ಮೂಲ ನಿರ್ವಹಣೆ, ಡಿಜಿಟಲ್ ಪರಿವರ್ತನೆ , ಮಾನವ-ಎಐ ಸಹಯೋಗ, ನೈತಿಕ ಸವಾಲುಗಳು ಹಾಗೂ ಭವಿಷ್ಯದ ಉದ್ಯೋಗ ಕ್ಷೇತ್ರದ ಕುರಿತು ಉಪನ್ಯಾಸ ಮತ್ತು ಸಂವಾದ ನಡೆಸಿದರು.
ಎಬಿಬಿಎಸ್ ನಿರ್ದೇಶಕ ಡಾ.ಎಚ್ .ಆರ್ . ವೆಂಕಟೇಶ ಮಾತನಾಡಿ, ‘‘ತಾಂತ್ರಿಕ ಬೆಳವಣಿಗೆಗಳಿಗೆ ಅನುಗುಣವಾಗಿ ನಿರ್ವಹಣಾ ಶಿಕ್ಷಣವೂ ಬದಲಾಗಬೇಕು,’’ ಎಂದರು. ಐಕ್ಯೂಎಸಿ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ.ಆರ್ . ಜಯಂತಿ ಉಪಸ್ಥಿತರಿದ್ದರು.