ಸೇನೆ

Contributed by: shree.vidya@timesofindia.com|Vijaya Karnataka•
new heights in india indonesia military cooperation
ರಕ್ಷಣಾ ಬಾಂಧವ್ಯ ವೃದ್ಧಿ

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸೇನಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಭಾರತದ ಆರ್ಮಿ ವಾರ್ ಕಾಲೇಜ್ ನ 55ನೇ ಆರ್ಮಿ ಹೈಯರ್ ಕಮಾಂಡ್ ಕೋರ್ಸ್ ನ ನಿಯೋಗವು ಬುಧವಾರ ಇಂಡೋನೇಷ್ಯಾದ ಜಕಾರ್ತಾದಲ್ಲಿರುವ ರಾಷ್ಟ್ರೀಯ ಸಶಸ್ತ್ರ ಪಡೆಗಳ ಅಂತಾರಾಷ್ಟ್ರೀಯ ಸಹಕಾರ ಕೇಂದ್ರಕ್ಕೆ ಭೇಟಿ ನೀಡಿದೆ. ಜಕಾರ್ತಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ಭೇಟಿಯ ವೇಳೆ ಇಂಡೋನೇಷ್ಯಾದ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಕಾರ್ಯತಂತ್ರ ಹಾಗೂ ರಾಷ್ಟ್ರ ನಿರ್ಮಾಣದಲ್ಲಿಅಲ್ಲಿನ ಸೇನೆಯ ಪಾತ್ರದ ಕುರಿತು ಭಾರತೀಯ ಅಧಿಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ಇದರೊಂದಿಗೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರದ ಭವಿಷ್ಯದ ಅವಕಾಶಗಳ ಕುರಿತು ಮಹತ್ವದ ಸಂವಾದ ನಡೆಯಿತು. ಈ ಭೇಟಿಯು ಎರಡೂ ದೇಶಗಳ ಸೇನೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವುದಲ್ಲದೆ, ಭಾರತೀಯ ಸಶಸ್ತ್ರ ಪಡೆಗಳ ಭವಿಷ್ಯದ ನಾಯಕರಿಗೆ ಇಂಡೋನೇಷ್ಯಾದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿದೆ.
ಫೈಲ್ ನೇಮ್ - ಆರ್ಮಿ