ಭತ್ತದ ತಳಿ ಸಂರಕ್ಷಣೆಗಾಗಿ ರಾಷ್ಟ್ರೀಯ ಪುರಸ್ಕಾರ

Contributed by: vkkarkala@gmail.com|Vijaya Karnataka•
new steps in agriculture simultaneously awarded national recognition
ವಿಕ ಸುದ್ದಿಲೋಕ ಕಾರ್ಕಳ

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿಯ ಆಸ್ಮಾ ಬಾನು ಅವರು, ಕೇಂದ್ರ ಸರಕಾರದ ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರಿಕಗ್ನೇಶನ್ ರಾಷ್ಟ್ರೀಯ ಪ್ರಶಸ್ತಿಯನ್ನು ಹೊಸದಿಲ್ಲಿಯಲ್ಲಿಗುರುವಾರ ಸ್ವೀಕರಿಸಿದ್ದಾರೆ.
ಕಾರ್ಕಳ ಪೆರ್ವಾಜೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ತನ್ನ ವೃತ್ತಿಯ ಜತೆಗೆ ಕೃಷಿ ಕ್ಷೇತ್ರದಲ್ಲೂಆಸಕ್ತಿ ವಹಿಸಿದ್ದಾರೆ. ಪತಿ ಅಬೂಬಕ್ಕರ್ ಸಹಕಾರದೊಂದಿಗೆ ಅಪರೂಪದ ಭತ್ತದ ತಳಿಗಳು ಸಂರಕ್ಷಣೆಯಲ್ಲಿತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರಲ್ಲಿ1580ಕ್ಕೂ ಹೆಚ್ಚು ನಾನಾ ಭತ್ತದ ತಳಿಗಳು ಲಭ್ಯವಿದ್ದು, ಭತ್ತದ ಕೃಷಿಯಲ್ಲೂಆಸಕ್ತರಾಗಿದ್ದಾರೆ. ಪಾಳುಬಿದ್ದ ಭೂಮಿಯನ್ನು ಗುತ್ತಿಗೆ ಪಡೆದು ಸಾವಯವ ಕೃಷಿ ಮೂಲಕ ಗಮನ ಸೆಳೆದಿದ್ದು, ಅವರ ಸಾಧನೆಗಾಗಿ ಈ ಪುರಸ್ಕಾರ ಲಭಿಸಿದೆ.

(ಫೊಟೋ:12ಕೆವಿ-ಡಿಡಿಬಿ)