ಪುಣಚ - ಪರಿಯಾಲ್ತಡ್ಕದ ರಿಫಾಯಿ ದಫ್ ಕಮಿಟಿಯ 54ನೇ ವಾರ್ಷಿಕ ಹಾಗೂ ಬದ್ರಿಯಾ ಯಂಗ್ ಬಾಯ್ ್ಸನ 25 ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಧಾರ್ಮಿಕ ಪ್ರವಚನ ಹಾಗೂ ದಫ್ ರಾತೀಬು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿಶನಿವಾರ ನಡೆಯಿತು.13 ತಂಡಗಳು ಭಾಗವಹಿಸಿದ್ದ ಈ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿಕಾಪು - ಪೊಲಿಪುವಿನ ಸಯ್ಯಿದ್ ಸಂಶುದ್ದೀನ್ ದಫ್ ತಂಡ ಪ್ರಥಮ, ದೇರಳಕಟ್ಟೆ - ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ದ್ವಿತೀಯ ಹಾಗೂ ಉಳ್ಳಾಲದ ಅಲ್ ಜಝೀರಾ ದಫ್ ತಂಡ ತೃತೀಯ ಸ್ಥಾನ ಪಡೆಯಿತು. ಪೊಲಿಪು ಹಾಗೂ ರೆಂಜಾಡಿ ತಂಡವು ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಯಾಲ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್ .ಮಹಮ್ಮದ್ ಮಾತನಾಡಿ, ಇಸ್ಲಾಮಿನ ಸಾಂಸ್ಕೃತಿಕ ಕಲೆಯಾದ ದಫ್ ಕಲೆಯಲ್ಲಿ ಶಾಂತಿ, ಸೌಹಾರ್ದ, ಸಾಮರಸ್ಯ, ಮಾನವೀಯ ಸಂದೇಶ ಸಾರುವ ಮೂಲಕ ಇಂದು ದೇಶಾದ್ಯಂತ ಸರ್ವ ಧರ್ಮೀಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸ್ಥಳೀಯ ಮಸೀದಿ ಖತೀಬ್ ಹಸೈನಾರ್ ಫೈಝಿ ಉದ್ಘಾಟಿಸಿದರು. ಕಮಾಲ್ ಆ್ಯಂಡ್ ಕಂಪನಿ ಅಡ್ವಕೇಟ್ಸ್ ಪಾನ್ ಇಂಡಿಯಾದ ಸ್ಥಾಪಕ ಕಮಾಲ್ , ಸೌದಿ ಅರೇಬಿಯಾದ ರೆಲ್ಕೋ ಚೇರ್ ಮನ್ ಬಶೀರ್ ಸಂಪ್ಯ, ಯೂಸುಫ್ ಗೌಸಿಯಾ, ಸಾಮಾಜಿಕ ಕಾರ್ಯಕರ್ತ ಶಾಕಿರ್ ಅಳಕೆಮಜಲು, ಪುತ್ತೂರು ಪುರಸಭೆ ಸದಸ್ಯ ರಿಯಾಝ್ ಪರ್ಲಡ್ಕ, ಎ.ಪಿ.ಎನ್ . ವೆಲ್ಫೇರ್ ಅಸೋಸಿಯೇಷನ್ ಯುಎಇಯ ಅಧ್ಯಕ್ಷ ಅಬೂಬಕ್ಕರ್ ಅಜ್ಜಿನಡ್ಕ, ದ.ಕ. ಮತ್ತು ಉಡುಪಿ ಜಿಲ್ಲಾದಫ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳ ಕಟ್ಟೆ ಭಾಗವಹಿಸಿದ್ದರು.
ಧಾರ್ಮಿಕ ಪ್ರವಚನ:
ರಿಫಾಯಿ ದಫ್ ಕಮಿಟಿ ಅಧ್ಯಕ್ಷ ಕಮರುದ್ದೀನ್ ಅಧ್ಯಕ್ಷತೆಯಲ್ಲಿ,ಅಕ್ಕರಂಗಡಿ ಮಸೀದಿ ಖತೀಬ್ ಝುಬೈರ್ ದಾರಿಮಿ ನೇತೃತ್ವದಲ್ಲಿದಫ್ ರಾತೀಬು, ಕೇರಳ - ಕೊಲ್ಲಂನ ಶಫೀಕ್ ಬದ್ರಿ ಅಲ್ ಬಾಖವಿ ಮತ್ತು ಕೊಡಗು ಅಯ್ಯಂಗೇರಿಯ ರಾಫೀ ಹಿಮಮಿ ಖಾಮಿಲ್ ಸಖಾಫಿ ಅವರಿಂದ ಧಾರ್ಮಿಕ ಪ್ರವಚನ ಹಾಗೂ ಮೌಲೀದ್ ಪಾರಾಯಣ ನಡೆಯಿತು.
ಬದ್ರಿಯಾ ಯಂಗ್ ಬಾಯ್ ್ಸ ಅಧ್ಯಕ್ಷ ಉಮ್ಮರ್ ಫಾರೂಕ್ , ಪರಿಯಾಲ್ತಡ್ಕ ಎಂಜೆಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ , ಅಬ್ದುಲ್ಲಾಹಾಜಿ, ಅಬೂಬಕ್ಕರ್ ಸಿದ್ದೀಕ್ ರಝ್ವಿ ಅಲ್ ಫುರ್ಖಾನಿ, ಸಯ್ಯಿದ್ ಸುಹೈಲ್ ಸುರೈಜಿ ಅಲ್ ಫಾಲಿಲಿ, ಮುಹಮ್ಮದ್ ನಿಝಾರ್ ಫೈಝಿ ಅಲ್ ಮಹ್ ಬರಿ, ಪುಣಚ ಮಸೀದಿ ಖತೀಬ್ ಮುಹಮ್ಮದ್ ದಾರಿಮಿ, ಸುಫ್ಯಾನ್ ಮದನಿ ಅಜ್ಜಿನಡ್ಕ, ಅಬ್ದುಲ್ ಸಲಾಂ ಫೈಝಿ ಮಹ್ ಬರಿ ನೀರ್ಕಜೆ, ಯೂಸುಫ್ ಮಿಸ್ಬಾಹಿ ಪರಿಯಾಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಪೈಸಾರಿ ಸ್ವಾಗತಿಸಿದರು. ಹಾಶಿರ್ ನಝೀರ್ ಸಖಾಫಿ ಕಿರಾಅತ್ ಪಠಿಸಿದರು. ಶಾಫಿ ದಾರಿಮಿ ಪರಿಯಾಲ್ತಡ್ಕ ವಂದಿಸಿದರು. ನೌಫಲ್ ಕುಡ್ತಮುಗೇರು ಮತ್ತು ಸುಹೈಬ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.