ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಮೋಡಿ ಮಾಡೋ ಪ್ರೀತಮ್ ಗುಬ್ಬಿ ಅವರ ನಿರ್ದೇಶನದ ಹೊಸ ಸಿನಿಮಾ ‘ಮೈ ಬೇಬಿ’ ಚಿತ್ರದ ಮೊದಲ ಹಾಡು ‘ಮಾತು ನೀನೆ...’ ಬಿಡುಗಡೆ ಆಗಿದ್ದು, ಈ ರೊಮ್ಯಾಂಟಿಕ್ ಟ್ರಾಕ್ ಅನ್ನು ಸಂಗೀತ ಮಾಂತ್ರಿಕ ಎ.ಆರ್ . ರೆಹಮಾನ್ ಲಾಂಚ್ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿಸಾಧನೆ ಮಾಡಿರುವ ಮ್ಯೂಸಿಕ್ ಐಕಾನ್ ಕನ್ನಡದ ಹಾಡನ್ನು ಬಿಡುಗಡೆ ಮಾಡೀರೋದು ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ.
ಸುಂದರವಾದ ಬೆಟ್ಟ ಹಾಗೂ ಪ್ರಕೃತಿ ನಡುವೆ ಸಾಗುವ ಈ ಮಧುರವಾದ ಹಾಡಿಗೆ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ರಾಗ ಸಂಯೋಜಿಸಿದ್ದಾರೆ. ನಾಗರ್ಜುನ್ ಶರ್ಮಾ ಅವರ ಸಾಹಿತ್ಯಕ್ಕೆ ಜಸ್ಕರಣ್ ಸಿಂಗ್ ಧ್ವನಿ ನೀಡಿದ್ದಾರೆ. ಹಾಡಿನಲ್ಲಿಯುವ ಪ್ರೇಮ ಪಕ್ಷಿಗಳಾಗಿ ಕಾಣಿಸಿಕೊಂಡಿರೋ ಸುಮುಖ್ ಮತ್ತು ಇಶಾ ಲಂಕೇಶ್ ಕೆಮಿಸ್ಟ್ರಿ ತುಂಬಾ ಮುದ್ದಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.