ವಿಕ ಸುದ್ದಿಲೋಕ ಚನ್ನಗಿರಿದಾವಣಗೆರೆ ಡಯಟ್ ವತಿಯಿಂದ ನಡೆದ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿಚನ್ನಗಿರಿ ತಾಲೂಕಿನ ಜೋಳದಾಳ್ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಜೀವಾಭಿ’ ನಾಟಕ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
‘ಸಾಗರಗಳ ಪುನರುಜ್ಜೀವನ, ಮುಂದಿನ ಪೀಳಿಗೆಯ ಸಂರಕ್ಷಣೆ’ ಎಂಬ ಉಪವಿಷಯದಡಿ ರಚಿಸಿರುವ ನಾಟಕ ಪರಿಣಾಮಕಾರಿ ಸಂದೇಶ ಪ್ರಸ್ತುತಪಡಿಸುತ್ತದೆ. ವಿದ್ಯಾರ್ಥಿಗಳ ಸಹಜ ಹಾಗೂ ಮನಮುಟ್ಟುವ ಅಭಿನಯವು, ಪ್ರೇಕ್ಷಕರ ಮನಸನ್ನು ಗೆಲ್ಲುವುದರೊಂದಿಗೆ ಪ್ರಶಸ್ತಿಗಳಿಗೂ ಪಾತ್ರವಾಗಿದೆ.
ರಂಗ ಶಿಕ್ಷಕ ಡಾ.ಕೆ.ವೆಂಕಟೇಶ್ವರ ನಾಟಕ ರಚಿಸಿ, ನಿರ್ದೇಶನ ಮಾಡಿದ್ದು, ಇಂಸಾಫ್ ನೀನಾಸಂ ಸಂಗೀತ ನೀಡಿದ್ದಾರೆ. ಮಧುಸೂದನ್ ನೀನಾಸಂ ರಂಗ ಸಜ್ಜಿಕೆ ಹಾಗೂ ಪರಿಕರ, ಉದಯ್ ಸ್ವರಭ ಸಹ ನಿರ್ದೇಶನ ನಾಟಕಕ್ಕಿದೆ. 10ನೇ ತರಗತಿ ವಿದ್ಯಾರ್ಥಿ ಎ.ಗೌತಮ್ ಉತ್ತಮ ನಟ, 9ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಉತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಉತ್ತಮ ನಾಟಕ ರಚನೆ ಹಾಗೂ ಉತ್ತಮ ನಿರ್ದೇಶಕ ಪ್ರಶಸ್ತಿ ಡಾ.ಕೆ.ವೆಂಕಟೇಶ್ವರ ಪಾಲಾಗಿದೆ. ವಿಭಾಗ ಮಟ್ಟದ ಸ್ಪರ್ಧೆಯಲ್ಲಿದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಹಾವೇರಿ, ಕೊಪ್ಪಳ ಮತ್ತು ಮಧುಗಿರಿ ಜಿಲ್ಲೆಗಳಿಂದ ಏಳು ತಂಡಗಳು ಭಾಗವಹಿಸಿದ್ದವು. ಪೈಪೋಟಿಯಿಂದ ಕೂಡಿದ ಸ್ಪರ್ಧೆಯಲ್ಲಿಜೋಳದಾಳ್ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅದ್ಭುತ ಅಭಿನಯದಿಂದಾಗಿ ಪ್ರಥಮ ಸ್ಥಾನಕ್ಕೆ ಪಾತ್ರರಾದರು. ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲೂಜಯ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶಾಲೆ ಮುಖ್ಯ ಶಿಕ್ಷಕ, ಶಿಕ್ಷಕರು, ಸಿಬ್ಬಂದಿ, ಎಸ್ ಡಿಎಂಸಿ ಅಧ್ಯಕ್ಷ, ಪದಾಧಿಕಾರಿಗಳು ಹಾರೈಸಿದ್ದಾರೆ.
--
12ಸಿಎಚ್ ಎನ್ ಪಿ8
ದಾವಣಗೆರೆ ಡಯಟ್ ವತಿಯಿಂದ ನಡೆದ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದ ಚನ್ನಗಿರಿ ತಾಲೂಕು ಜೋಳದಾಳ್ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ.