ಸ್ಪಂದನ ಆರೋಗ್ಯ ನಿಧಿ ಯೋಜನೆಯಡಿ ನೆರವು

Contributed by: prashantha.n17@gmail.com|Vijaya Karnataka•
support received under spandana health fund scheme
ವಿಕ ಸುದ್ದಿಲೋಕ ನೆಲ್ಯಾಡಿ

ಬೆಂಗಳೂರು ಸ್ಪಂದನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಾರಿಗೊಳಿಸಲಾಗಿರುವ ಸ್ಪಂದನ ಆರೋಗ್ಯ ನಿಧಿ ಯೋಜನೆಯಡಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೂವರು ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಸೇವಾ ಕಾರ್ಯ ನಡೆಸಲಾಯಿತು.
ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಪಾಶ್ರ್ವವಾಯುವಿನಿಂದಾಗಿ ದೇಹದ ಎಡಭಾಗದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಲಕ್ಷ್ಮಿ, ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ದಂಬೆತ್ತಿಮಾರು ನಿವಾಸಿ ಚಂದ್ರಹಾಸ ಪೂಜಾರಿ ಹಾಗೂ ಗಾರ್ಡಡಿ ಗ್ರಾಮದ ಪ್ರಜ್ಞಾ ಕೆ. ಅವರಿಗೆ ಟ್ರಸ್ಟ್ ವತಿಯಿಂದ ತಲಾ 25 ಸಾವಿರ ರೂ.ಮೊತ್ತದ ಚೆಕ್ ವಿತರಿಸಲಾಯಿತು.

ಇದರೊಂದಿಗೆ ಕೊೖಲದ ಎಂಡೋಸಲ್ಫಾನ್ ಪೀಡಿತರ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಟ್ರಸ್ಟ್ ಸದಸ್ಯರು ಅಲ್ಲಿನ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮ ಹಂಚಿಕೊಂಡರು.

ಬೆಂಗಳೂರು ಸ್ಪಂದನ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ಚಿದಾನಂದ, ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮ್ಯಾನೇಜರ್ ಸೆಬಾಸ್ಟಿನ್ ವಿ.ಜೆ., ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಿಲವೂರು, ಕುಡ್ತಾಜೆ ದೇವಸ್ಥಾನ ಸಮಿತಿ ಸದಸ್ಯ ಮಾಧವ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದೇರಿ ಒಕ್ಕೂಟದ ಅಧ್ಯಕ್ಷ ಜಿ. ವರ್ಗೀಸ್ , ಮಾದೇರಿ ನಂದಗೋಕುಲ ಭಜನಾ ಮಂಡಳಿಯ ಕಾರ್ಯದರ್ಶಿ ಭವ್ಯ ವಿನಯ್ ಹಾಗೂ ಸದಸ್ಯೆ ಹೇಮಾವತಿ ಜೆ. ಉಪಸ್ಥಿತರಿದ್ದರು

ಫೋಟೋ :11ಕೆಎನ್ ಸ್ಪಂದನ

.ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಲಕ್ಷ್ಮಿ ಅವರಿಗೆ ಟ್ರಸ್ಟ್ ವತಿಯಿಂದ ಚೆಕ್ ವಿತರಿಸಲಾಯಿತು.