ಕಾರ್ಕಳ: ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಿನ್ಸಿಪಾಲರಾಗಿ ಡಾ. ರೋಷನ್ ಫನಾಂರ್ ಡಿಸ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಮಂಗಳೂರಿನವರಾದ ಅವರು ಮಣಿಪಾಲ ಎಂಐಟಿಯಲ್ಲಿಬಿ.ಇ. ಪೂರೈಸಿದ್ದು, ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿಎಂ.ಟೆಕ್ ನಲ್ಲಿಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿದ್ದು, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಪಿ.ಎಚ್ ಡಿ ಮಾಡಿದ್ದಾರೆ.ಕಳೆದ 22 ವರ್ಷಗಳಿಂದ ನಿಟ್ಟೆ ಎಂಜಿಯರಿಂಗ್ ಕಾಲೇಜಿನಲ್ಲಿಕಂಪ್ಯೂಟರ್ ಸೈನ್ಸ್ , ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಉಡುಪಿ ಮತ್ತು ದ.ಕ. ಜಿಲ್ಲೆಯ ನಾನಾ ಕಡೆ ಸೈಬರ್ ಕೈ್ರಮ್ ಕಾರ್ಯಾಗಾರಗಳಲ್ಲಿಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ. ಅವರು ಕೆಇಎ ನಡೆಸಿದ ಪರೀಕ್ಷೆಯಲ್ಲಿ71ನೇ ರಾರ ಯಂಕ್ ನೊಂದಿಗೆ ಪ್ರಿನ್ಸಿಪಾಲ್ ಹುದ್ದೆಗೆ ನೇಮಕಗೊಂಡಿರುತ್ತಾರೆ.