ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.6ರಲ್ಲಿಸಂಭ್ರಮದಿಂದ ಮಕ್ಕಳ ದಿನ ಆಚರಿಸಲಾಯಿತು.ಮಕ್ಕಳ ದಿನಾಚರಣೆ ನಿಮಿತ್ತ ಬೆಳಗಾವಿ ಮಣ್ಣೂರಿನ ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕಿ ಎಚ್ .ಡಿ.ಧರ್ಮಣ್ಣವರ ಅವರು ಶಾಲೆಯ ಎಲ್ಲವಿದ್ಯಾರ್ಥಿಗಳಿಗೆ ತಲಾ ಐದು ನೋಟ್ ಬುಕ್ , ಕಂಪಾಸ್ ಬಾಕ್ಸ್ ಸೇರಿದಂತೆ ನಾನಾ ಕಲಿಕಾ ಸಾಮಗ್ರಿ ಉಚಿತವಾಗಿ ವಿತರಿಸಿದರು. ನಂತರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಕ್ಕಳಿಗಾಗಿ ನಾನಾ ಮನರಂಜನಾ ಆಟ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಶಾಲೆಯಿಂದ
ಬಿಇಒ ಕಚೇರಿ ಪ್ರೌಢ ಶಿಕ್ಷಣ ಸಂಯೋಜಕ ಗಂಗಾಧರ ಕಾಮಕರ ಹಾಗೂ ಪ್ರಾಥಮಿಕ ಶಿಕ್ಷಣ ಸಂಯೋಜಕ ಡಿ.ಎಸ್ .ಪಾಟೀಲ ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಎನ್ .ಎಂ.ಬಡ್ಲಿಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎಂ.ಜಿ.ನದಾಫ್ ನಿರೂಪಿಸಿದರು.
ಫೊಟೋ 16ಹೆಚ್ ಟಿಪಿ1: ಬೈಲಹೊಂಗಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.6ರಲ್ಲಿಮಕ್ಕಳ ದಿನಾಚರಣೆ ನಿಮಿತ್ತ ಉಪನ್ಯಾಸಕಿ ಎಚ್ .ಡಿ.ಧರ್ಮಣ್ಣವರ ಅವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು.