ಮುದಗಲ್ - * ಕೇಳ್ರಪ್ಪೋ ಕೇಳಿ- ಜಲಧಾರೆ ಪೈಪ್ ಲೈನ್ ಕಾಮಗಾರಿ ವಿಳಂಬ

Contributed by: dnkodihal@gmail.com|Vijaya Karnataka•
Vijay Karnataka
ಜಲಧಾರೆ ಪೈಪ್ ಲೈನ್ ಕಾಮಗಾರಿ ವಿಳಂಬ

ಮುದಗಲ್ ಸಮೀಪದ ಉಪ್ಪಾರನಂದಿಹಾಳ ಗ್ರಾಮದಿಂದ ಚಿಕ್ಕಲೆಕ್ಕಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿನಡೆಯುತ್ತಿರುವ ಜಲಧಾರೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಯನ್ನು ಕಳೆದ 1 ವಾರದಿಂದ ಮುಚ್ಚದೇ ಹಾಗೇ ಬಿಟ್ಟಿರುವ ಪರಿಣಾಮವಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಬದಿಯಲ್ಲಿಅಗೆದಿರುವ ಮಣ್ಣನ್ನು ಸಮರ್ಪಕವಾಗಿ ತೆರವುಗೊಳಿಸದಿರುವುದು ಹಾಗೂ ಕಾಮಗಾರಿ ಬಳಿಕ ರಸ್ತೆ ಅಂಚನ್ನು ಸರಿಪಡಿಸದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಅಪಾಯದ ನಡುವೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ, ರಸ್ತೆ ಬದಿಯನ್ನು ಮೊದಲಿನ ಸ್ಥಿತಿಗೆ ಮರುಸ್ಥಾಪಿಸಬೇಕು. ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು.
-ಹುಸೇನಸಾಬ್ , ಮೋನುದ್ದಿನ್ , ಬಸವರಾಜ, ದೇವಪ್ಪ, ಮಾನಪ್ಪÜ

ಉಪ್ಪಾರನಂದಿಹಾಳ ಹಾಗೂ ಚಿಕ್ಕಲೆಕ್ಕಿಹಾಳ ಗ್ರಾಮಸ್ಥರು

* ಕೋಟ್

ಉಪ್ಪಾರನಂದಿಹಾಳದಿಂದ ಚಿಕ್ಕಲೆಕ್ಕಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿಜಲಧಾರೆ ಯೋಜನೆಯ ಪೈಪ್ ಲೈನ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದು ಗಮನಕ್ಕೆ ಇಲ್ಲ. ಪರಿಶೀಲಿಸಿ, ಕೂಡಲೇ

ಕಾಮಗಾರಿ ಮುಗಿಸುವಂತೆ ಸಂಬಂಧಿತ ಅಧಿಕಾರಿಗೆ ಸೂಚಿಸಲಾಗುವುದು.

-ರಾಮಪ್ಪ ನಾಗಬೇನಾಳ, ಉಪ್ಪಾರನಂದಿಹಾಳ ಗ್ರಾಪಂ ಪಿಡಿಒ

ಪೋಟೋ(ಆರ್ .ಸಿ.ಹೆಚ್ 23ಮುದಗಲ್ 02)

ಮುದಗಲ್ ಸಮೀಪದ ಉಪ್ಪಾರನಂದಿಹಾಳ ಹಾಗೂ ಚಿಕ್ಕಲೆಕ್ಕಿಹಾಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಬದಿ ಜಲಧಾರೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅಪೂರ್ಣ ಮಾಡಿರುವುದು.