ಲೇಖಕ ರವಿ ಹಂಜ್ ವಿರುದ್ಧ ಆಕ್ರೋಶ

Contributed by: cymenashinakai@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ನೇಸರಗಿ

ಲೇಖಕ ರವಿ ಹಂಜ್ ಅವರು ‘ಬಸವ ಮಂಟಪ’ ಕೃತಿಯಲ್ಲಿಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದನ್ನು ಖಂಡಿಸಿ, ಸಮೀಪದ ಮತ್ತಿಕೊಪ್ಪ ಗ್ರಾಮದ ಬಸವ ಅಭಿಮಾನಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಮುಖಂಡ ಅಡಿವೆಪ್ಪ ಹೊಸಮನಿ ಮಾತನಾಡಿ, ‘‘12ನೇ ಶತಮಾನದಲ್ಲಿವಚನಗಳ ಮೂಲಕ ಸಮಾನತೆ ಹುಟ್ಟುಹಾಕಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತದೆ. ಅಂತಹ ಮಹಾನ್ ವ್ಯಕ್ತಿತ್ವ ಹೊಂದಿದವರನ್ನು ಕೃತಿಯಲ್ಲಿಅವಹೇಳನಕಾರಿಯಾಗಿ ಪರಿಚಯಿಸಿದ ರವಿ ಹಂಜ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು.

ಸಿಪಿಐ ಗಜಾನನ ನಾಯ್ಕ ಮನವಿ ಸ್ವೀಕರಿಸಿದರು. ಮಹಾಂತೇಶ ಮೊಹರೆ, ಶಿವಲಿಂಗಯ್ಯ ವಿರಕ್ತಮಠ, ಅರುಣ ಸಿದ್ದನ್ನವರ, ಸೋಮಪ್ಪ ತಕ್ಕುನವರ, ಪ್ರಕಾಶ ಮೊಹರೆ, ಸೋಮಪ್ಪ ಹೊಸಮನಿ, ಹಣಮಂತ ದೊಡ್ಡನ್ನವರ, ಗಂಗಪ್ಪ ಕೊಳದೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

-ಧಿ23ಎನ್ ಎಸ್ ಜಿ1

ಮತ್ತಿಕೊಪ್ಪ ಗ್ರಾಮದ ಬಸವ ಅಭಿಮಾನಿಗಳು ನೇಸರಗಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.