ಮಕ್ಕಳ ಚಟುವಟಿಕೆ ಬಗ್ಗೆ ಪಾಲಕರ ಕಾಳಜಿ ಅಗತ್ಯ

Contributed by: ravi.gosavi@timesofindia.com|Vijaya Karnataka•
Vijay Karnataka
ಧಿ-ನೆಕ್ಸ್ಟ್ ಜೆನ್ ನಾರಿ ಶಕ್ತಿ ಕಾರ್ಯಕ್ರಮದಲ್ಲಿಮುಖ್ಯಶಿಕ್ಷಕಿ ಶೀಬಾ ಸಲಹೆ

ವಿಕ ಸುದ್ದಿಲೋಕ ಬೆಳಗಾವಿ
ಆಧುನಿಕ ಯುಗದಲ್ಲಿಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೆ, ಜೆನ್ -ಝೀ ಪೀಳಿಗೆಯು ಜೀವನದ ಗುರಿ ಹಾಗೂ ಸಾಧನೆಯತ್ತ ಗಮನಹರಿಸಬೇಕು. ಪಾಲಕರು ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು, ಅವರ ಚಟುವಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಎಲ್ ಎಸ್ ಎ ಹೈಸ್ಕೂಲ್ ಮುಖ್ಯಶಿಕ್ಷಕಿ ಶೀಬಾ ಎನ್ . ಹೇಳಿದರು.

ಇಲ್ಲಿನ ಶ್ರೀನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿಯಲ್ಲಿವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ವತಿಯಿಂದ ಆಯೋಜಿಸಿದ್ದ ‘ನೆಕ್ಸ್ಟ್ ಜೆನ್ ನಾರಿ ಶಕ್ತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ಜೀವನದಲ್ಲಿಸೋಲು ಸಹಜ. ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮಕ್ಕಳ ಮೊಬೈಲ್ ಬಳಕೆ ಬಗ್ಗೆ ಪಾಲಕರು ಜಾಗೃತರಾಗಿರಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಅವರ ಭವಿಷ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು,’’ ಎಂದು ಸಲಹೆ ನೀಡಿದರು.

ವಾಗ್ಮಿ ಎನ್ .ಆರ್ . ದಾಮೋದರ ಶರ್ಮಾ ಮಾತನಾಡಿ, ‘‘ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗದೆ ದೇಶದ ಆಚಾರ- ವಿಚಾರ, ಭಾಷೆ ಹಾಗೂ ಸಂಪ್ರದಾಯಗಳನ್ನು ಗೌರವಿಸಬೇಕು. ವಯೋಸಹಜ ಆಮಿಷಗಳಿಗೆ ಬಲಿಯಾಗದೆ ತಮ್ಮ ಗುರಿ ಮತ್ತು ಸಾಧನೆಯತ್ತ ಗಮನಹರಿಸಬೇಕು. ಪಾಲಕರ ತ್ಯಾಗವನ್ನು ಮಕ್ಕಳು ಎಂದಿಗೂ ಮರೆಯಬಾರದು,’’ ಎಂದು ಸಲಹೆ ನೀಡಿದರು.

ರಾಣಿ ಚೆನ್ನಮ್ಮ ಮಹಿಳಾ ಬ್ಯಾಂಕ್ ಅಧ್ಯಕ್ಷೆ ರಾಜೇಶ್ವರಿ ಎಂ. ಕವಟಗಿಮಠ, ದಿಶಾ ಭಾರತದ ಕಾರ್ಯಕರ್ತೆ ಜಯಶ್ರೀ, ವಿಜಯಾ ಆರ್ಥೋ ಆ್ಯಂಡ್ ಟ್ರಾಮಾ ಸೆಂಟರ್ ನಿರ್ದೇಶಕಿ ಸುನೀತಾ ಪಾಟೀಲ, ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಗೋವರ್ಧನ ರಾವ್ , ಶ್ರೀಕಾಂತ ಕದಂ, ಆರೆಸ್ಸೆಸ್ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಕೃಷ್ಣಾನಂದ ಕಾಮತ್ , ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಸುನೀತಾ ತಿಮ್ಮನಗೌಡರ ಹಾಗೂ ಜೆ.ಎನ್ . ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅಶ್ವಿನಿ ಅಂಗಡಿ ಸೇರಿದಂತೆ ಇತರರಿದ್ದರು. ಡಾ. ಅಶ್ವಿನಿ ಭಾಗೋಜಿ ಪ್ರಾಸ್ತಾವಿಕ ಮಾತನಾಡಿದರು. ಸ್ಫೂರ್ತಿ ಕೊಂಕಣಿ ಪ್ರಾರ್ಥಿಸಿದರು. ಶ್ವೇತಾ ಮಾಳಕ್ಕನವರ ವಂದಿಸಿದರು. ಸ್ಮಿತಾ ತಿಗಡಿ ನಿರೂಪಿಸಿದರು.

-------------

-23ರವಿಜಿ6

ಕಾರ್ಯಕ್ರಮದಲ್ಲಿಎಲ್ ಎಸ್ ಎ ಹೈಸ್ಕೂಲ್ ಮುಖ್ಯಶಿಕ್ಷಕಿ ಶೀಬಾ ಎನ್ . ಮಾತನಾಡಿದರು. ಎನ್ .ಆರ್ . ದಾಮೋದರ ಶರ್ಮಾ, ರಾಜೇಶ್ವರಿ ಕವಟಗಿಮಠ, ಜಯಶ್ರೀ, ಸುನೀತಾ ಪಾಟೀಲ ಇತರರಿದ್ದರು.