ವಿಕ ಸುದ್ದಿಲೋಕ ಚಿತ್ರದುರ್ಗಹಿರಿಯೂರಿನಲ್ಲಿಶನಿವಾರ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್ .ಮಂಜುನಾಥ್ ಗೆ ‘ನೀನೆ ಏನೋ ಡಿಡಿಪಿಐ’ ಎಂದು ಎಲ್ಲರೆದುರಿನಲ್ಲಿಏಕ ವಚನದಲ್ಲಿಕರೆದಿರುವುದಕ್ಕೆ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂವಿಧಾನದತ್ತವಾಗಿ ಅಧಿಕಾರ ಸ್ವೀಕರಿಸಿರುವ ಡಿಡಿಪಿಐಗೆ ಅವರದೆ ಆದ ಘನತೆ ಗೌರವವಿದೆ. ಸರಕಾರಿ ನೌಕರರು, ಅಧಿಕಾರಿಗಳೆಂದರೆ ಸರಕಾರದ ಗುಲಾಮರಲ್ಲ. ಮುಖ್ಯಮಂತ್ರಿ ಪಕ್ಕದಲ್ಲಿಕುಳಿತಿದ್ದ ಸಚಿವ ಜಮೀರ್ ಅಹಮದ್ ತಮ್ಮ ಕೈಯಲ್ಲಿದ್ದ ಪೇಪರ್ ನಿಂದ ಡಿಡಿಪಿಐ ಕೈಗೆ ಎಸೆದು, ಈ ಕೆಲಸ ಆಗಬೇಕೆಂದು ಗದರಿಸಿರುವುದನ್ನು ನೋಡಿದರೆ ಇವರೇನು ಜನಪ್ರತಿನಿಧಿಗಳಾ, ಇಲ್ಲಾಗೂಂಡಾಗಳಾ ಎನ್ನುವ ಅನುಮಾನ ಕಾಡುತ್ತಿದೆ. ವೇದಿಕೆಯಲ್ಲೆಕುಳಿತಿದ್ದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಮೌನ ವಹಿಸಿದ್ದನ್ನು ನೋಡಿದರೆ ನೌಕರರ ಹಿತ ಕಾಪಾಡುವುದಕ್ಕಾಗಿದ್ದಾರೋ ಅಥವಾ ಜನಪ್ರತಿನಿಧಿಗಳ ಬಾಲಂಗೋಚಿಯೋ ಗೊತ್ತಾಗುತ್ತಿಲ್ಲ.
ಕೇವಲ ಡಿಡಿಪಿಐಗಷ್ಟೆ ಅಲ್ಲ. ಜಿಲ್ಲಾಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲೇ ವೇದಿಕೆ ಮುಂಭಾಗ ಇರ್ರಯ್ಯ ಎಂದು ಲಘುವಾಗಿ ಕರೆದಿರುವುದು ಮುಖ್ಯಮಂತ್ರಿಗಳ ಘನತೆಗೆ ಶೋಭೆಯಲ್ಲ. ರಾಜಕೀಯ ವೇದಿಕೆಗಳಲ್ಲಿಸಾರ್ವಜನಿಕರೆದುರು ಅಧಿಕಾರಿಗಳನ್ನು ಅವಮಾನಿಸಬಾರದು. ಕರ್ತವ್ಯದಲ್ಲಿಏನಾದರೂ ಲೋಪವಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.