(ವಿಕ ಫಲಶೃತಿ..) ನ.30ರಿಂದ ಬೆಂಗಳೂರು ವಿವಿ ಪಿಎಚ್ ಡಿ. ಕೋರ್ಸ್ ವರ್ಕ್ ಆರಂಭ

Contributed by: shantha.a@timesofindia.com|Vijaya Karnataka•
30
ವಿಕ ಸುದ್ದಿಲೋಕ ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ2026ನೇ ಸಾಲಿನಲ್ಲಿಪಿಎಚ್ ಡಿ. ಸಂಶೋಧನೆಗೆ ನೋಂದಾಯಿಸಿಕೊಂಡಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ನ.30ರಿಂದ ಕೋರ್ಸ್ ವರ್ಕ್ ತರಗತಿಗಳು ಆರಂಭವಾಗಲಿವೆ.
2023ನೇ ಸಾಲಿನಲ್ಲಿಪಿಎಚ್ ಡಿ ಅಧ್ಯಯನಕ್ಕೆ ನೋಂದಾಯಿಸಿಕೊಂಡಿದ್ದರೂ ಈ ಹಿಂದೆ ಕೋರ್ಸ್ ವರ್ಕ್ ತರಗತಿಗಳಿಗೆ ಹಾಜರಾಗದ ಹಾಗೂ ಪರೀಕ್ಷೆ ಬರೆಯದ ಸಂಶೋಧನಾ ವಿದ್ಯಾರ್ಥಿಗಳಿಗೂ ಕೋರ್ಸ್ ವರ್ಕ್ ತರಗತಿಗಳು ಮತ್ತು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಪ್ರವೇಶ ಪರೀಕ್ಷೆಯನ್ನು ಜು. 5ರಂದು ನಡೆಸಿತ್ತು. ಬಳಿಕ ಆ.28 ಮತ್ತು 29ರಂದು ಮೌಖಿಕ ಪರೀಕ್ಷೆ ನಡೆಸಿ, ಸೆ.5ರಂದು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸೆ.11ರಂದು ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ತಿಳಿಸಿದ್ದಾರೆ.

ಕೋರ್ಸ್ ಪ್ರವೇಶಾತಿ ಮುಗಿದ ಬಳಿಕವೂ ಕೋರ್ಸ್ ವರ್ಕ್ ಆರಂಭವಾಗದ ಕುರಿತು ಸಂಶೋಧನಾ ವಿದ್ಯಾರ್ಥಿಗಳಿಂದ ಆರೋಪ ಕೇಳಿಬಂದಿತ್ತು. ಈ ಕುರಿತು ವಿಕ ಕೂಡ ‘ಬೆಂವಿವಿ: ಪಿಎಚ್ ಡಿ ಕೋರ್ಸ್ ಗೆ ಗ್ರಹಣ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು.