ವಿಕ ಸುದ್ದಿಲೋಕ ಕೊಣನೂರುಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಹಾಗೂ ದಾನಿಗಳಿಂದ ಕೊಣನೂರು-ಹಂಡ್ರಂಗಿ ಮುಖ್ಯ ರಸ್ತೆಯಲ್ಲಿರುವ ಬಿಸಿಲಹಳ್ಳಿ ಗ್ರಾಮದಲ್ಲಿ5.5 ಎಕರೆ ಪ್ರದೇಶದಲ್ಲಿನಿರ್ಮಾಣಗೊಂಡಿರುವ ಸಹಬಾಳ್ವೆ ಉದ್ಯಾನ ಲೋಕಾರ್ಪಣೆ ಕಾರ ್ಯಕ್ರಮ ನ. 26 ರ ಬೆಳಗ್ಗೆ 10.30 ಕ್ಕೆ ನಡೆಯಲಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರು, ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ತಿಳಿಸಿದರು.
ಸಮೀಪದ ಬಿಸಿಲಹಳ್ಳಿಯ ಸಹಬಾಳ್ವೆ ಉದ್ಯಾನದ ಪರಗೋಲದಲ್ಲಿವರದಿಗಾರರೊಂದಿಗೆ ಮಾತನಾಡಿ, ‘‘ಲೋಕಾರ್ಪಣೆ ಕಾರ ್ಯಕ್ರಮದಲ್ಲಿಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀÍರಾದ ಸಂತೋಷ್ ಹೆಗ್ಡೆ, ಗೋಪಾಲಗೌಡರು, ಬೆಂಗಳೂರು ಕ್ಷೇಮವನದ ಕಾರ ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಹಾಗೂ ತಾಲೂಕಿನ ಹರಗುರುಚರಮೂರ್ತಿಗಳು ಆಗಮಿಸಲಿದ್ದಾರೆ,’’ ಎಂದರು.
ನ. 25 ರಂದು ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ ್ಯಕ್ರಮ : ‘‘ಸಹಬಾಳ್ವೆ ಉದ್ಯಾನದ ಲೋಕಾರ್ಪಣೆ ಅಂಗವಾಗಿ ನ. 25 ರ ಬೆಳಗ್ಗೆಯಿಂದ ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ ್ಯಕ್ರಮಗಳನ್ನು ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು. ನ. 25 ರ ಬೆಳಗ್ಗೆ 8 ಗಂಟೆಯಿಂದ ನ. 26 ರ ರವರೆಗೆ ಪ್ರಸಾದದ ವ್ಯವಸ್ಥೆ ಇರುತ್ತದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ ,’’ ಎಂದರು.
‘‘ಪರಿಸರ ಪುನರುತ್ಥಾನ ಮತ್ತು ಜೀವವೈವಿಧ್ಯತೆ ಸಂರಕ್ಷಣೆಯ ಪ್ರಮುಖ ಉದ್ದೇಶದಿಂದ 5.5 ಎಕರೆ ಪ್ರದೇಶದಲ್ಲಿಸಹಬಾಳ್ವೆ ಉದ್ಯಾನ ನಿರ್ಮಾಣಕ್ಕೆ ನ. 26, 2025 ರಂದು ಭೂಮಿ ಪೂಜೆ ಮಾಡಲಾಗಿತ್ತು. ಈ ಜೈವಿಕ ವನದಲ್ಲಿಪಶ್ಚಿಮ ಘಟ್ಟ, ಆರೆಮಲೆನಾಡು ಹಾಗೂ ಕರ್ನಾಟಕದ ಬಯಲುಸೀಮೆ ಪ್ರದೇಶಗಳ ಅಪರೂಪದ ಸಸ್ಯ ಪ್ರಭೇದಗಳಿಗೆ ಸುರಕ್ಷಿತ ಆಶ್ರಯತಾಣ ಒದಗಿಸಲಾಗಿದೆ. ಮಳೆಗಾಲದಲ್ಲಿಉದ್ಯಾವ ಮೇಲ್ಭಾಗದಲ್ಲಿಬಿದ್ದ ಮಳೆನೀರು ಕೊಯ್ಲುಮಾಡಲು ಕಲ್ಯಾಣಿಯನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಹರಿದು ಬರುವ ನೀರು ಶುದ್ಧವಾಗಿ ಒಳಬರಲು ನೈಸರ್ಗಿಕ ಶುದ್ಧೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಯಾನÜದ ಎದುರಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬಸ್ ನಿಲ್ದಾಣ ನಿರ್ಮಿಸಲಾಗಿದ್ದು ಇದಕ್ಕೆ ಶ್ರೀ ಅರಸೀಕಟ್ಟೆ ಅಮ್ಮ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ. ಅಪರೂಪದ ಸಸ್ಯ ಪ್ರಭೇದಗಳ ಸಂರಕ್ಷಣೆ, ಸ್ಥಳೀಯ ಜೀವವೈವಿಧ್ಯದ ಪರಿಚಯ, ಪರಿಸರ ಶಿಕ್ಷಣ ಹಾಗೂ ಪ್ರಕೃತಿಯೊಂದಿಗಿನ ಸಹಬಾಳ್ವೆಯ ಮಹತ್ವವನ್ನು ಸಾರುವ ವಿಶಿಷ್ಟ ಪರಿಸರ ತಾಣವಾಗುವ ಜತೆಗೆ ವಿಶ್ರಾಂತಿ ತಾಣವಾಗಿಯೂ ಸಹಬಾಳ್ವೆ ಉದ್ಯಾನ ರೂಪುಗೊಂಡಿದೆ,’’ ಎಂದರು.
ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಪ್ರಧಾನ ಕಾರ ್ಯದರ್ಶಿ ಪರಶುರಾಮೇಗೌಡ, ಅರಸೀಕಟ್ಟೆಯಮ್ಮ ದೇವಾಲಯ ಸಮಿತಿಯ ಕಾರ ್ಯದರ್ಶಿ ಕೃಷ್ಣೇಗೌಡ, ಸಮಿತಿಯ ಸದಸ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಾಥ್ ಇದ್ದರು.
ಏಖN23ಓN್ಕ1-2 ಧಿ ಕೊಣನೂರು ಸಮೀಪದ ಬಿಸಿಲಹಳ್ಳಿಯ ಸಹಬಾಳ್ವೆ ಉದ್ಯಾನವನದ ಪರಗೋಲದಲ್ಲಿಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರು, ಮಾಜಿ ಶಾಸಕರಾದ ಡಾ. ಎ.ಟಿ. ರಾಮಸ್ವಾಮಿ ಮಾತನಾಡಿದರು.