ವಿಕ ಸುದ್ದಿಲೋಕ ಎಚ್ .ಡಿ.ಕೋಟೆಕೇಂದ್ರ ಸರಕಾರದ ವಾಣಿಜ್ಯ ಮಂತ್ರಾಲಯವು ಈ ಸಾಲಿನಲ್ಲಿತಂಬಾಕು ರೈತರ ಕಲ್ಯಾಣ ನಿಧಿಯಿಂದ ಕೊಡುತ್ತಿರುವ ಹಣಕಾಸು ಸಾಲಸೌಲಭ್ಯಗಳನ್ನು ಹೆಚ್ಚುವರಿ ಮಾಡಿದೆ ಎಂದು ತಾಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆ ಅಧೀಕ್ಷ ಎಚ್ .ವಿ. ವಿಜಯಕುಮಾರ್ ತಿಳಿಸಿದ್ದಾರೆ.
ತಂಬಾಕು ರೈತರ ಹೆಣ್ಣು ಮಕ್ಕಳ ಮದುವೆ ಸಾಲ, ಬ್ಯಾರೆನ್ ಮರು ನಿರ್ಮಾಣ, ರೈತರಿಗೆ ಶಸ್ತ್ರ ಚಿಕಿತ್ಸೆ ಸಾಲ, ವಿದ್ಯಾಭ್ಯಾಸ ಸಾಲ (ಉನ್ನತ ಮಟ್ಟದ ಶಿಕ್ಷಣ-ಪದವಿ ಹಾಗೂ ಸ್ನಾತಕೋತ್ತರ)ಕ್ಕೆ ಮೊದಲು 50 ಸಾವಿರ ರೂ. ಕೊಡಲಾಗುತ್ತಿತ್ತು. ಈಗ 1 ಲಕ್ಷ ರೂ. ಕೊಡಲಾಗುತ್ತದೆ. ಸಾಲ ವಿತರಣೆ ಮಾಡಲಾದ ಮೊದಲ ವರ್ಷದಲ್ಲಿ20 ಸಾವಿರ ರೂ., ಎರಡು ಮತ್ತು ಮೂರನೇ ವರ್ಷ 40 ಸಾವಿರ ರೂ. ಮರುಪಾವತಿ ಮಾಡಬೇಕು. ಬ್ಯಾರೆನ್ ರಿಪೇರಿಗೆ 20 ಸಾವಿರ ರೂ.ಗಳಿಂದ 40 ಸಾವಿರ ರೂ.ವರೆಗೆ ಏರಿಸಿದ್ದು, ಮೊದಲ ಮತ್ತು ಎರಡನೇ ವರ್ಷದಲ್ಲಿ10 ಸಾವಿರ ರೂ. ಮತ್ತು ಮೂರನೇ ವರ್ಷದಲ್ಲಿ20 ಸಾವಿರ ರೂ. ಮರುಪಾವತಿಸಬೇಕು,’’ ಎಂದರು.
‘‘ರೈತರು ಅಪಘಾತದಲ್ಲಿಮೃತರಾದರೆ 2 ಲಕ್ಷ ರೂ. ಪರಿಹಾರ ಕೊಡಲಾಗುತ್ತದೆ. ಮೊದಲು 1 ಲಕ್ಷ ರೂ. ಕೊಡಲಾಗುತ್ತಿತ್ತು. ಯೋಜನೆ ಜುಲೈ 17, 2026ರಂದು ಚಾಲ್ತಿಗೆ ಬಂದಿದೆ. ಹಾಗೆಯೇ ವಾರ್ಷಿಕ ವಿಮೆ ಮೊತ್ತವನ್ನು 500 ರೂ.ಗಳಿಂದ 1,325 ರೂ.ಗಳಿಗೆ ಏರಿಸಲಾಗಿದೆ. ಆದ್ದರಿಂದ 2026-27ನೇ ಸಾಲಿನಲ್ಲಿಪರವಾನಗಿಯನ್ನು ನವೀಕರಿಸಿಕೊಂಡಿರುವ ರೈತರು, ಉಳಿದ 825 ರೂ.ಗಳ ವಿಮೆ ಮೊತ್ತವನ್ನು ಪಾವತಿಸಿ, ಈ ಸಾಲಿನ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬೇಕು,’’ ಎಂದರು.