ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ಸೀರೆ ಶೋರೂಮ್ ಜಾಲಗಳಲ್ಲಿಒಂದಾದ ಕಲ್ಯಾಣ್ ಸಿಲ್ ್ಕ$್ಸನ ನೂತನ ಶೋರೂಂ ಮಲ್ಲೇಶ್ವರಂನಲ್ಲಿಸೋಮವಾರ ಬೆಳಗ್ಗೆ 11.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶೋರೂಂ ಉದ್ಘಾಟಿಸಲಿದ್ದಾರೆ. ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್ .ಅಶ್ವತ್ಥ ನಾರಾಯಣ ಮತ್ತು ನಟಿ ಮೇಘಾ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಇದು ಬೆಂಗಳೂರಿನಲ್ಲಿಕಲ್ಯಾಣ್ ಸಿಲ್ ್ಕ$್ಸನ 3ನೇ ಶೋರೂಮ್ ಹಾಗೂ ವಿಶ್ವದಾದ್ಯಂತದ 39ನೇ ಶೋರೂಮ್ ಆಗಿದೆ.ಬಹುಮಹಡಿ ಶಾಪಿಂಗ್ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಳಿಸಿರುವ ಹೊಸ ಮಲ್ಲೇಶ್ವರಂ ಶೋರೂಮ್ ನ ಪ್ರತಿ ಮಹಡಿಯಲ್ಲೂವಿಭಿನ್ನ ಸಂಗ್ರಹಗಳಿವೆ. ನೆಲಮಹಡಿಯಲ್ಲಿಮದುವೆಯ ಸೀರೆಗಳ ಬೃಹತ್ ಸಂಗ್ರಹವಿದೆ. ಸಾಂಪ್ರದಾಯಿಕ ಕಾಂಚೀಪುರಂ ಸೀರೆಗಳು, ಫೆದರ್ ಲೈಟ್ ಕಾಂಚೀಪುರಂ ಸಿಲ್ ್ಕಗಳು, ಡಿಸೈನರ್ ಕಾಂಚೀಪುರಂ ಡ್ರೇಪ್ ಗಳು, ಮೈಸೂರು ರೇಷ್ಮೆ ಸೀರೆಗಳು, ಬನಾರಸಿ ರೇಷ್ಮೆ ಸೀರೆಗಳು ಇದರಲ್ಲಿಸೇರಿವೆ.
ಎರಡನೇ ಮಹಡಿಯಲ್ಲಿವಧುವಿನ ಉಡುಪುಗಳ ವಿಶಾಲ ಆಯ್ಕೆ ಲಭ್ಯವಿದ್ದು, ಚೂಡಿದಾರ್ ಗಳು, ಶರಾರಾಗಳು, ಅನಾರ್ ಕಲಿಗಳು, ಡಿಸೈನರ್ ಗೌನ್ ಗಳು, ರೆಡಿಮೇಡ್ ಲೆಹೆಂಗಾಗಳು ಇದರಲ್ಲಿಸೇರಿವೆ. ಇದೇ ಮಹಡಿಯಲ್ಲಿಪುರುಷರ ಪಾರಂಪರಿಕ ಉಡುಪುಗಳ ವಿಭಾಗವೂ ಇದ್ದು, ಆಕರ್ಷಕ ಇಂಡೋ-ವೆಸ್ಟರ್ನ್ ಉಡುಪುಗಳು, ಸಾಂಪ್ರದಾಯಿಕ ಧೋತಿಗಳು ಮತ್ತು ಪ್ರೀಮಿಯಂ ರೇಷ್ಮೆ ಶರ್ಟ್ ಗಳು ಸೇರಿದಂತೆ ವೈವಿಧ್ಯಮಯ ಆಯ್ಕೆಗಳು ಲಭ್ಯವಿವೆ.
ವಿಶ್ವದ ಮೊದಲ ಬ್ರ್ಯಾಂಡೆಡ್ ರೇಷ್ಮೆ ಸೀರೆ ಎಂಬ ಹೆಗ್ಗಳಿಕೆ ಹೊಂದಿರುವ ‘ಸೌಗಂಧಿಕಾ ಸಿಲ್ ್ಕ$್ಸ‘ (ಕಲ್ಯಾಣ್ ಸಿಲ್ ್ಕ$್ಸನ ಬ್ರ್ಯಾಂಡ್ ) ಕೂಡ ಲಭ್ಯವಿವೆ.