ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸೂಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿಸ್ವಾತಂತ್ರ್ಯೋತ್ಸವದ ದಿನದಂದೇ (ಶುಕ್ರವಾರ ರಾತ್ರಿ) ನಡೆದಿರುವ ಈ ಘಟನೆ ಸೊಣ್ಣಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.ನಗರದ ಗಣೇಶ್ ನಗರದ ವಾಸಿ ಶ್ರೀನಿವಾಸರೆಡ್ಡಿ ಅವರ ಪುತ್ರಿ ಮಮತಾಶ್ರೀ(26) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಮತಾಶ್ರೀ ಅವರಿಗೆ ಸುಮಾರು 5 ವರ್ಷಗಳ ಹಿಂದೆ ಮೋಹನ್ ರೆಡ್ಡಿ ಎಂಬುವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ನಾಲ್ಕು ವರ್ಷದ ಮಗುವಿದೆ.
ವರದಕ್ಷಣೆ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಮಮತಾಶ್ರೀ ಅವರ ತಂದೆ ಶ್ರೀನಿವಾಸರೆಡ್ಡಿ ಅವರು ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆ ವಿಷಯ ತಿಳಿದ ಎಎಸ್ ಪಿ ಜಗನ್ನಾಥ ರೈ ಹಾಗೂ ನಗರ ಠಾಣೆ ಇನ್ಸ್ ಪೆಕ್ಟರ್ ವಿಜಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
15ಸಿಎಮ್ ವೈವಿ1
ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿಯಲ್ಲಿಆತ್ಮಹತ್ಯೆಗೆ ಶರಣಾಗಿರುವ ಮಮತಾಶ್ರೀ ಜತೆ ಪತಿ ಮೋಹನ್ ರೆಡ್ಡಿ.