ಪ್ರೊ. ಬಿ.ಎ. ವಿವೇಕ ರೈ ಬೆನ್ನಿದ ಪನಿ ದೊಂಪ ಸಾಹಿತ್ಯ ಸಂಭ್ರಮ

Contributed bydhanushkulal9@gmail.com|Vijaya Karnataka
penida pani dompa literary celebration prof ba vivek rai closing event
ವಿಕ ಸುದ್ದಿಲೋಕ ಮಂಗಳೂರು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ತುಳುವ ಲೋಕೊಡು ಪ್ರೊ. ಬಿ.ಎ. ವಿವೇಕ ರೈ : ಬೆನ್ನಿದ ಪನಿ ದೊಂಪ’ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಶನಿವಾರ ನಗರದ ತುಳು ಭವನದಲ್ಲಿನಡೆಯಿತು.
ಹಿರಿಯ ಸಂಶೋಧಕ ಡಾ. ಪಾದೆಕಲ್ಲುವಿಷ್ಣು ಭಟ್ ಅವರು ಪ್ರೊ. ಬಿ.ಎ. ವಿವೇಕ ರೈ ಅವರ ತುಳುವ ಜಾಲ ಪೊಲಿ ಹಾಗೂ ನಾಲಾಯಿಡ್ ್ದ ನಾಲೂರುಗು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಆಧುನಿಕತೆಯ ವೇಗದ ನಡುವೆಯೂ ತುಳು ಭಾಷೆಯ ಅಸ್ಮಿತೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅದರ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅನ್ಯಭಾಷೆಗಳ ಪದಗಳ ಅತಿಯಾದ ಬಳಕೆಯಿಂದ ತುಳುವಿನ ಹಲವು ಮೂಲ ಪದಗಳು ಮರೆಯಾಗುವ ಆತಂಕವಿದೆ. ತುಳು ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಕರಾವಳಿಯ ಜನಜೀವನ, ಆಚರಣೆ, ನಂಬಿಕೆ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡ ಜೀವಂತ ಭಾಷೆಯಾಗಿದೆ ಎಂದರು.

ಹಿರಿಯ ಸಂಶೋಧಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ.ಎ. ವಿವೇಕ ರೈ ಮಾತನಾಡಿ, ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿಕೈಜೋಡಿಸಬೇಕು. ಭಾಷೆಯನ್ನು ಕಟ್ಟುವ ಮಹತ್ವದ ಕೆಲಸವನ್ನು ಅಕಾಡೆಮಿಯ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ., ನಿವೃತ್ತ ಪ್ರಿನ್ಸಿಪಾಲ್ ಗುಣಪಾಲ ಕಡಂಬ ಸೇರಿದಂತೆ ಸಾಹಿತ್ಯಾಸಕ್ತರು, ಕಲಾವಿದರು, ಭಾಷಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಸದಸ್ಯ ಸಂಚಾಲಕ ಬಾಬು ಕೊರಗ ಪಾಂಗಾಳ ವಂದಿಸಿದರು. ಅಕ್ಷಯ ಆರ್ . ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್ :

ವಿವೇಕ ರೈ ಸಾಹಿತ್ಯ ಸಾಧನೆ ಕುರಿತು ವಿಚಾರಗೋಷ್ಠಿ :

ಕಾರ್ಯಕ್ರಮದ ಅಂಗವಾಗಿ ಬಳಿಕ ಬರವು ಸರವುದ ತುಲಿಪು ಹಾಗೂ ವಿಚಾರಕೂಟ ನಡೆಯಿತು. ಪ್ರೊ. ಬಿ.ಎ. ವಿವೇಕ ರೈ ಅವರ ಸಾಹಿತ್ಯ, ಸಂಶೋಧನೆ ಹಾಗೂ ಸಾಧನೆಗಳ ಕುರಿತು ಮೂರು ಪ್ರಮುಖ ವಿಚಾರಗೋಷ್ಠಿಗಳು ನಡೆದವು. ತುಳು ಅಕಾಡೆಮಿ ಅಧ್ಯಕ್ಷೆರಾದ್ ವಿವೇಕ ರೈಕುಲು ವಿಷಯದ ಕುರಿತು ನಿವೃತ್ತ ಪ್ರಿನ್ಸಿಪಾಲ್ ಗುಣಪಾಲ ಕಡಂಬ, ವಿವೇಕ ರೈಕುಲೆನ ತುಳು ಸಾಹಿತ್ಯ ಸಂಶೋಧನೆವಿಷಯದ ಕುರಿತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಉಡುಪಿಯ ಪ್ರಿನ್ಸಿಪಾಲ್ ಡಾ. ನಿಕೇತನ ಮಾತನಾಡಿದರು. ವಿವೇಕ ರೈಕುಲೆನೊಟ್ಟಿಗೆ ಪಾತೆರಕತೆ ಕಾರ್ಯಕ್ರಮವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟವಾಳದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ ಹಾಗೂ ಪ್ರಜಾವಾಣಿ ಬಳಗದ ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ನಡೆಸಿಕೊಟ್ಟರು. ತುಳು ಸಾಹಿತ್ಯ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆಯಿತು.

ಸಮಾರೋಪಕ್ಕೆ ನೆಂಪುದ ಪನಿ ಬರ್ಸ ಸ್ಪರ್ಶ :

ಸಮಾರೋಪ ಸಮಾರಂಭ ನೆಂಪುದ ಪನಿ ಬರ್ಸ ನೆನಪಿನೊಂದಿಗೆ ತೆರೆಕಂಡಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಸಮಾರೋಪ ನುಡಿಗಳನ್ನಾಡಿದರು. ಹಿರಿಯ ತುಳು ಜಾನಪದ ಸಂಶೋಧಕ ಡಾ. ಪೂವಪ್ಪ ಕಣಿಯೂರು ಅವರು ಪ್ರೊ. ವಿವೇಕ ರೈ ಅವರೊಂದಿಗಿನ ತಮ್ಮ ಒಡನಾಟ ಹಾಗೂ ನೆನಪುಗಳನ್ನು ಹಂಚಿಕೊಂಡರು.

ಫೊಟೋ :

22ಅ-ವಿವೇಕ

ತುಳುವ ಜಾಲ ಪೊಲಿ ಹಾಗೂ ನಾಲಾಯಿಡ್ ್ದ ನಾಲೂರುಗು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.