ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಅರಸು

Contributed bytsdayananda@gmail.com|Vijaya Karnataka
the king who searched for a new path
ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಅರಸು

ಡಿ.ದೇವರಾಜ ಅರಸು 111ನೇ ಜನ್ಮದಿನಾಚರಣೆ ಕಾರ ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ
ವಿಕ ಸುದ್ದಿಲೋಕ ತಿಪಟೂರು

ಬಡವರು, ಹಿಂದುಳಿದವರು, ಶೋಷಿತರು ಹಾಗೂ ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಮಹಾನ್ ವ್ಯಕ್ತಿ ಡಿ.ದೇವರಾಜ ಅರಸು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಮಂಜುನಾಥನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 111ನೇ ಜನ್ಮದಿನಾಚರಣೆ ಕಾರ ್ಯಕ್ರಮ ಉದ್ಘಾಟಿಸಿದ ಅವರು, ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಸಮಾಜದ ಎಲ್ಲವರ್ಗಗಳ ಏಳಿಗೆಗಾಗಿ ಶ್ರಮಿಸಿದರು.

ಹಾಸ್ಟೆಲ್ ವಿದ್ಯಾರ್ಥಿಗಳು ತಂದೆ-ತಾಯಿ ಶ್ರಮ ಅರ್ಥಮಾಡಿಕೊಂಡು, ತಮ್ಮ ಜವಾಬ್ದಾರಿ ಅರಿತು ವಿದ್ಯಾಭ್ಯಾಸ ಮಾಡಬೇಕು ಎಂದ ಅವರು, ತಾಲೂಕಿಗೆ ವಸತಿ ಶಾಲೆ, ನಿಲಯಗಳ ಸ್ಥಾಪನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ತಾಲೂಕಿನಲ್ಲಿಸುಮಾರು 1,500 ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಬಗರ್ ಹುಕುಂ ಯೋಜನೆಯಡಿ ಸುಮಾರು 18 ಸಾವಿರ ಎಕರೆ ಭೂಮಿ ಸಾಗುವಳಿಗೆ ನೀಡಲಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ರೇಣುಕಯ್ಯ ಮಾತನಾಡಿ, ಉಳುವವನೇ ಹೊಲದ ಒಡೆಯ ಎಂಬ ಆಶಯದಡಿ ಜಾರಿಗೊಂಡ ಭೂ ಸುಧಾರಣಾ ನೀತಿ ಗ್ರಾಮೀಣ ಸಮಾಜದಲ್ಲಿಮಹತ್ತರ ಪರಿವರ್ತನೆಗೆ ಕಾರಣವಾಯಿತು ಎಂದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವುದು, ಹಿಂದುಳಿದ ಸಮುದಾಯಗಳಿಗೆ ಸರಕಾರಿ ಸೌಲಭ್ಯಗಳು ತಲುಪುವಂತೆ ಮಾಡುವುದು ಹಾಗೂ ಸಾಮಾಜಿಕ ಸಮಾನತೆ ಬೆಳೆಸುವುದು ಅವರ ಆಡಳಿತದ ಪ್ರಮುಖ ಉದ್ದೇಶಗಳಾಗಿದ್ದವು ಎಂದರು.

ಪೌರಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ಅರಸು ಆಡಳಿತದಲ್ಲಿಮೈಸೂರು ರಾಜ್ಯಕ್ಕೆ ‘ಕರ್ನಾಟಕ‘ ಎಂದು ಮರುನಾಮಕರಣ ಮಾಡಿರುವುದು ಐತಿಹಾಸಿಕ ಹೆಜ್ಜೆಯಾಗಿದೆ. ಹಾವನೂರು ಆಯೋಗದ ಶಿಪಾರಸ್ಸು, ಮಲಹೊರುವ ಪದ್ದತಿ ವಿರೋಧ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಸಮಾಜದ ದುರ್ಬಲ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲೂಮಹತ್ವದ ಕ್ರಮಕೈಗೊಂಡಿದ್ದರು ಎಂದು ಹೇಳಿದರು.

ಸವಿತಾ ಸಮಾಜದ ಗೋವಿಂದರಾಜು ಮಾತನಾಡಿ, ನೇಕಾರ, ಮಡಿವಾಳ, ಕ್ಷೌರಿಕ, ಧರ್ಜಿಗರು, ಕುಂಬಾರರು ಹಾಗೂ ಅಕ್ಕಸಾಲಿಗರು ತೊಂದರೆಯಲ್ಲಿಸಿಲುಕಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ನೆರವಿಗೆ ಮುಂದಾಗಬೇಕು ಎಂದರು.

ವಸತಿನಿಲಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಗರಸಭೆಯಿಂದ ವಸತಿ ನಿಲಯಕ್ಕೆ ಹೊದಿಕೆ ಹಾಗೂ ಹಾಸಿಗೆ ವಿತರಿಸಲಾಯಿತು. ತಾಪಂ ಇಒ ಎಚ್ .ಎಂ.ಸುದರ್ಶನ್ , ತಹಸೀಲ್ದಾರ್ ಮೋಹನ್ ಕುಮಾರ್ , ಪ್ರಾಂಶುಪಾಲ ಎಂ.ಡಿ.ಶಿವಕುಮಾರ್ , ಅಲೆಮಾರಿ ಸಮಿತಿ ಸದಸ್ಯ ತಮ್ಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ವಿಸ್ತರಣಾಧಿಕಾರಿ ರಾಜು, ತಾಲೂಕು ಮಟ್ಟದ ಅಧಿಕಾರಿಗಳು, ಕಾಡುಗೊಲ್ಲಸಮಾಜದ ತಾಲೂಕು ಅಧ್ಯಕ್ಷ ಬಾಲರಾಜು, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ನಿಜಲಿಂಗಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಚಂದ್ರೇಗೌಡ, ಯಾದವ ಸಮಾಜದ ನಾಗರಾಜು, ಪ್ರಕಾಶಯಾದವ್ , ಸವಿತಾ ಸಮಾಜದ ಗೋವಿಂದರಾಜು ಇತರರಿದ್ದರು.

ಪೋಟೊ: ತಿಪಟೂರಲ್ಲಿತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ. ದೇವರಾಜ ಅರಸು 111ನೇ ಜನ್ಮದಿನ ಆಚರಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.