ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿಕ್ರೈಸ್ತ ಬಾಂಧವರು ಸೆ.8ರಂದು ತೆನೆ ಹಬ್ಬ (ಕುಟುಂಬದ ಹಬ್ಬ) ಆಚರಿಸುತ್ತಿದ್ದಾರೆ. ಈ ದಿನ ಸಾರ್ವತ್ರಿಕ ರಜೆಯನ್ನಾಗಿ ಘೋಷಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸರಕಾರವನ್ನು ಆಗ್ರಹಿಸಿದ್ದಾರೆ.ವಿಧಾನ ಪರಿಷತ್ ನ ಶೂನ್ಯ ವೇಳೆಯಲ್ಲಿಈ ವಿಷಯ ಪ್ರಸ್ತಾಪಿಸಿ ಸೆ.8ರಂದು ಮಂಗಳೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಧರ್ಮ ಪ್ರಾತ್ಯಗಳಲ್ಲಿನಾನಾ ಪೂಜಾ ವಿಧಿಗಳು ನಡೆಯುತ್ತಿದೆ. ಈ ದಿನವನ್ನು ಸರಕಾರವು ನಿರ್ಬಂಧಿತ ರಜೆ (ಆರ್ .ಎಚ್ .) ಎಂದು ಪರಿಗಣಿಸಲಾಗಿದ್ದು, ಇದು ಶಾಲಾ ಶಿಕ್ಷಕರಿಗೆ, ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದ ರಾಜ್ಯ ಸರಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಐವನ್ ಅವರು ಮುಖ್ಯಮಂತ್ರಿಯವರಲ್ಲಿಪ್ರಸ್ತಾಪಿಸಿದ್ದಾರೆ.