ಕೊಪ್ಪಳ: ‘‘ಪ್ರತಿಯೊಬ್ಬರಿಗೂ ಕಾನೂನು ನೆರವು ಅಗತ್ಯ’’ ಎಂದು ಜಿಲ್ಲಾನ್ಯಾಯಾಧೀಶ ಮಧು ಎನ್ .ಆರ್ . ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಔಟ್ ಲಾವ್ ್ಡ ಫೌಂಡೆಷನ್ ನಿಂದ ನಡೆದ ಅರೆಕಾಲಿಕ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.‘‘ದೇಶದ ಪ್ರತಿ ವ್ಯಕ್ತಿಗೂ ನ್ಯಾಯ ಸಿಗಬೇಕು. ಕಾನೂನು ನೆರವು ಬೇಕು. ಕಾನೂನು ಎಲ್ಲರಿಗೂ ಸಿಗಬೇಕು ಅದಕ್ಕಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಅವಶ್ಯವಿದೆ.
ಕಾನೂನು ದುರ್ಬಲರಿಗೂ ಸಿಕ್ಕರೆ ಅದೇ ಸಾಧನೆ,’’ ಎಂದರು.
ಜಿಲ್ಲಾಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ನ್ಯಾ ಮಹಾಂತೇಶ ದರಗದ ಮಾತನಾಡಿ, ಕಾನೂನು ಪ್ರಕ್ರಿಯೆಯಲ್ಲಿಕಟ್ಟಕಡೆ ವ್ಯಕ್ತಿ ನ್ಯಾಯ ಸಿಗಬೇಕು.
ಅದಕ್ಕೆ ಅರೇಕಾಲಿಕ ಸ್ವಯಂ ಸೇವಕರು ಸೇತುವೆಯಾಗಿ ಕೆಲಸ ಮಾಡಬೇಕು. ಈ ಹಿಂದೆ ದುರ್ಬಲರಿಗೆ ನ್ಯಾಯ ಸಿಗುವುದಿಲ್ಲಎಂಬ ಮಾತಿದೆ ಅದನ್ನು ಸುಳ್ಳು ಮಾಡಬೇಕಾಗಿದೆ’’ ಎಂದರು.
ವಕೀಲರಾದ ಬಿ.ಕೆ. ಭೂತೆ ಮಾತನಾಡಿ, ಅರೆಕಾಲಿಕ ಸ್ವಯಂ ಸೇವಕರು ಗ್ರಾಮೀಣ ಮಟ್ಟದಲ್ಲಿಕಾನೂನು ಸೇವೆ ನೀಡಬೇಕು.
ವಕೀಲರು ನಿರಂತರ ಓದುಬೇಕು ಹಾಗು ತಿಳಿದುಕೊಳ್ಳಬೇಕು. ಇಂದಿನ ದಿನಗಳಲ್ಲಿಎಲ್ಲರಿಗೂ ಕಾನೂನು ಜ್ಞಾನ ಅವಶ್ಯವಿದೆ ಎಂದರು.
ಹಿರಿಯ ವಕೀಲರಾದ ಆರ್ .ಬಿ. ಪಾನಗಂಟಿ ಮತನಾಡಿದರು.
ಈ ಸಂದರ್ಭದಲ್ಲಿಮಕ್ಕಳು ಮತ್ತು ಮಹಿಳಾ ಸಹಾಯವಾಣಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಬಿ.ವಿ.ಸಜ್ಜನ, ವೆಂಕಟೇಶ, ಸಿರಿನ್ ಬಾನಿ, ಬಾಬುಹುಸೇನ ಗುಡಿಹಿಂದಲ ಇದ್ದರು.
==
24-ಕೆಪಿಎಲ್ ವಿಠ್ಠಲ ಫೊಟೊ-20
ಕೊಪ್ಪಳದಲ್ಲಿಅರೆಕಾಲಿಕ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ನಡೆಯಿತು.