ಪುಟ- 2

Contributed byveena.kumbar@timesgroup.com|Vijaya Karnataka
rangoli achieving health through art
ರಂಗೋಲಿಯಿಂದ ಆರೋಗ್ಯ ಭಾಗ್ಯ

ವೀಣಾ ವಿ. ಕುಂಬಾರ
ಘ್ಕಿvಛಿಛ್ಞಿa.k್ಠಞಚಿa್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಂಟ್ರೊ: ರಂಗೋಲಿ ಕೇವಲ ಕಲೆಯ ಅಭಿವ್ಯಕ್ತಿಯಲ್ಲ, ಅದನ್ನೂ ಮೀರಿದ ಮನೋದೈಹಿಕ ಆರೋಗ್ಯದ ಉತ್ತೇಜಕ.

ಸ್ಲಗ್ ; ಆರ್ಟ್ ಥೆರಪಿ

ರಂಗೋಲಿಗೂ ಮಹಿಳೆಗೂ ಅವಿನಾಭಾವ ನಂಟಿದೆ. ಬೆಳಗ್ಗೆ ಎದ್ದೊಡನೆ ಬಾಗಿಲು ಕಸ ಗುಡಿಸಿ, ನೀರು ಹಾಕಿ, ರಂಗೋಲಿ ಹಾಕುವುದರಿಂದಲೇ ಹೆಣ್ಣುಮಕ್ಕಳ ದಿನಚರಿ ಆರಂಭವಾಗುತ್ತದೆ. ಹಬ್ಬ, ವಿಶೇಷ ಸಂದರ್ಭಗಳಲ್ಲಿರಂಗೋಲಿ ತನ್ನದೇ ಆದ ಮಹತ್ವ ಹಾಗೂ ಭಾವನಾತ್ಮಕತೆಯನ್ನು ಹೊಂದಿದೆ. ಅಷ್ಟೇ ಅಲ್ಲ, ಇದೇ ರಂಗೋಲಿ ಹಾಕುವ ವಿಧಾನ ಆರೋಗ್ಯ ಪ್ರಯೋಜನಗಳನ್ನು ನೀಡುವ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎನ್ನುತ್ತಾರೆ ತಜ್ಞರು.

ಆರೋಗ್ಯ ಮಹತ್ವ

ರಂಗೋಲಿ ಹಾಕುವುದರಿಂದ ಸೃಜನಶೀಲತೆ ಹೊರಬರುತ್ತದೆ. ಕಲ್ಪನಾ ಶಕ್ತಿ ವೃದ್ಧಿಯಾಗುತ್ತದೆ. ರಂಗೋಲಿಯನ್ನು ಸುಂದರವಾಗಿ, ಅಚ್ಚುಕಟ್ಟಾಗಿ ಚಿತ್ರಿಸುವ ನಿಟ್ಟಿನಲ್ಲಿಗಮನವನ್ನೆಲ್ಲಕೇಂದ್ರೀಕರಿಸುವುದರಿಂದ ಏಕಾಗ್ರತೆ ಹೆಚ್ಚಾಗಿ ಮನಸ್ಸು ಶಾಂತವಾಗುತ್ತದೆ. ಒತ್ತಡ ನಿವಾರಣೆಗೆ ಹಾಗೂ ಮಿದುಳಿನ ಚುರುಕುತನಕ್ಕೂ ಸಹಕಾರಿ. ರಂಗೋಲಿ ಹಾಕುವ ಸಮಯ ಬೆಳಗಿನ ಬ್ರಾಹ್ಮೀಮುಹೂರ್ತವಾದ್ದರಿಂದ ಆಗ ವಾತಾವರಣದಲ್ಲಿಶುದ್ಧ ಆಮ್ಲಜನಕವಿರುತ್ತದೆ. ಈ ಶುದ್ಧ ಆಮ್ಲಜನಕದ ಉಸಿರಾಟದಿಂದ ದೇಹವು ಚೈತನ್ಯದಾಯಕವಾಗುತ್ತದೆ.

ಬೆಳಗ್ಗೆ ಬೇಗ ಎದ್ದು ಬರಿಗಾಲಿನಲ್ಲಿಇಡೀ ಅಂಗಳದ ಕಸ ಗುಡಿಸುವುದರಿಂದ ಪಾದಕ್ಕೆ ಸಣ್ಣ ಸಣ್ಣ ಹರಳು ಚುಚ್ಚುವುದರಿಂದ ಅಕ್ಯುಪಂಕ್ಚರ್ ಆಗಿ ಅದು ಸಹ ನರನಾಡಿಗಳಲ್ಲಿಚೈತನ್ಯ ಮೂಡಿಸುತ್ತದೆ. ಆಕರ್ಷಕ ರಂಗೋಲಿ ಹಾಕಿದಾಗ ಅದರ ಚಿತ್ರಣ ಬಹಳ ಹೊತ್ತು ಮನದಲ್ಲಿಉಳಿದು ಮನಕ್ಕೆ ಮುದ ನೀಡುತ್ತದೆ. ಹೀಗಾಗಿ ಇದು ಮಾನಸಿಕ ಆರೋಗ್ಯಕ್ಕೂ ಸಹಾಯಕಾರಿ. ನೋಡುವವರಿಗೂ ಅದರ ಸೊಗಸು ಖುಷಿ ಕೊಡುತ್ತದೆ. ಬಣ್ಣಗಳು ಹಾಗೂ ಸುಂದರ ಆಕಾರಗಳು ಮನಸ್ಸಿಗೆ ಸಕಾರಾತ್ಮಕ ಉಲ್ಲಾಸವನ್ನು ನೀಡುತ್ತವೆ. ಚಿತ್ರವೇ ಹಾಗೆ. ಅದು ಮನುಷ್ಯನ ಮನಸ್ಸನ್ನು ಅರಿವಿಲ್ಲದೇ ಬಲಗೊಳಿಸುತ್ತದೆ. ಮಾನಸಿಕ ಬಲವರ್ಧನೆಯಿಂದ ಸಹಜವಾಗಿ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಕೆಳಗೆ ಕುಳಿತು ರಂಗೋಲಿ ಬಿಡಿಸುವುದರಿಂದ ಬೆನ್ನುಮೂಳೆ ಹಾಗೂ ಕಾಲುಗಳ ಕೀಲುಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ಬೆರಳುಗಳಿಂದ ಪುಡಿ ಹಾಕಿ ವಿನ್ಯಾಸ ಮಾಡುವುದರಿಂದ ಕೈ-ಕಣ್ಣಿನ ಸಮನ್ವಯ ಸುಧಾರಿಸುತ್ತದೆ.

ಬಾಕ್ಸ್

ರಂಗೋಲಿ ಹುಟ್ಟಿದ್ದು ಹೇಗೆ?

ಗೀಚುವಿಕೆ ಮನುಷ್ಯನ ಸಹಜ ಗುಣ. ರಂಗೋಲಿ ಚಿತ್ರಕಲೆಯ ಇನ್ನೊಂದು ರೂಪ. ಚಿತ್ರಕಲೆ ಆದಿಮಾನವನ ಕಾಲದಿಂದಲೇ ಗೀಚುವ ಹವ್ಯಾಸದಿಂದ ಬೆಳೆದು ಬಂದಿತು. ಆತ ಕೈಗೆ ಸಿಕ್ಕ ಕಲ್ಲಿನಿಂದ ಗೋಡೆ ಮೇಲೆ, ಬಂಡೆ ಮೇಲೆ ಗೀಚುತ್ತಾ ಹೋದ. ಕ್ರಮೇಣ ಆತನ ಮಾನಸಿಕ ವಿಕಸನವಾದಂತೆ ತಾನು ಕಂಡ ಗಿಡ, ಮರ, ಹೂವು, ಪ್ರಾಣಿ, ಪಕ್ಷಿ, ಚಂದ್ರ, ಸೂರ್ಯರನ್ನು ಚಿತ್ರಿಸುತ್ತಾ ಹೋದ. ಇದನ್ನು ವರ್ಲಿ ಕಲೆಯಲ್ಲಿನೋಡಬಹುದು. ಗೋಡೆ ಮೇಲೆ ಬರೆಯುವ ಚಿತ್ರ ಕ್ರಮೇಣ ಬಾಗಿಲ ಮುಂದೆ ಹಾಕುವ ರೂಢಿಗೆ ಬಂದಿತು.

ಕೋಟ್

ರಂಗೋಲಿ ವ್ಯಾಪ್ತಿ ದೊಡ್ಡದು. ಇಡೀ ಭಾರತದಲ್ಲಿರಂಗೋಲಿ ಇದೆ. ಆದರೆ ಪ್ರದೇಶಕ್ಕೆ ಅನುಗುಣವಾಗಿ ಬರೆಯುವ ಶೈಲಿ ಬೇರೆ. ಬಳಸುವ ಸಾಮಗ್ರಿ ಬೇರೆ. ಚುಕ್ಕೆ, ಉದ್ದಗೆರೆ, ಅಡ್ಡಗೆರೆ, ಚೌಕ, ತ್ರಿಕೋನ, ವೃತ್ತ, ಅರೆ ವೃತ್ತ ಇವೇ ರಂಗೋಲಿಯ ಮೂಲಚಿಹ್ನೆಗಳು. ಈ ಚಿಹ್ನೆಗಳನ್ನು ಬಳಸಿಯೇ ರಂಗೋಲಿ ರೂಪ ತಾಳುತ್ತದೆ. ರಂಗೋಲಿಯನ್ನು ಭೂತ ಪ್ರೇತಗಳನ್ನು ಓಡಿಸಲೂ ರಂಗೋಲಿ ಹಾಕಲಾಗುತ್ತದೆ. ಅಷ್ಟೊಂದು ಸಾಮರ್ಥ್ಯ ರಂಗೋಲಿಗೆ ಇದೆ. ಶವಸಂಸ್ಕಾರ ವೇಳೆ ರಂಗೋಲಿಗೆ ಸುಣ್ಣ ಬಳಸುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಏನೆಂದರೆ ಸುಣ್ಣ ವೈರಸ್ ಗಳನ್ನು ಹೊರಗೆ ಹೋಗಲು ಬಿಡುವುದಿಲ್ಲ.

ವಿಜಯಲಕ್ಷ್ಮೇ ಗೇಟಿಯವರ, ಸಹಾಯಕ ಪ್ರಾಧ್ಯಾಪಕಿ, ಗೊಟಗೋಡಿ ಜಾನಪದ ವಿವಿ

ಫೋಟೊ: ರಂಗೋಲಿ