ಮತಪಟ್ಟಿ ಆಕ್ಷೇಪಣೆಗೆ ಸೆ.23 ಕೊನೆದಿನ

Contributed bykogalurkumar@gmail.com|Vijaya Karnataka
last date for voter list objection is september 23 important guidelines
ಮತಪಟ್ಟಿ ಆಕ್ಷೇಪಣೆಗೆ ಸೆ.23 ಕೊನೆದಿನ

ಹಿರೇಕೋಗಲೂರು: ಕರಡು ಮತದಾರರ ಪಟ್ಟಿಯಲ್ಲಿಹೆಸರು ಸೇರಿಸುವುದಕ್ಕೆ ಆಕ್ಷೇಪಣೆ ಇದ್ದರೆ ಬಿಎಲ್ ಒಗಳಿಂದ ಅರ್ಜಿ ಪಡೆದು, ನಿಗದಿತ ಸಮಯದೊಳಗೆ ಸಲ್ಲಿಸಬೇಕು ಎಂದು ಗ್ರಾಪಂ ಆಡಳಿತಾಧಿಕಾರಿ ಎಸ್ .ಜಿ. ಪುನೀತ್ ಶಂಕರ್ ಹೇಳಿದರು.
ಚನ್ನಗಿರಿ ತಾಲೂಕು ಹಿರೇಕೋಗಲೂರು ಗ್ರಾಪಂ ಕಚೇರಿಯಲ್ಲಿಸೋಮವಾರ ನಡೆದ ಗ್ರಾಮಸಭೆಯಲ್ಲಿಮಾತನಾಡಿದರು,

ಅಕ್ಟೋಬರ್ 1, 2026 ಮತದಾರರ ಪಟ್ಟಿ ತಯಾರಿಕೆಗೆ ಅರ್ಹತಾ ದಿನವಾಗಿದೆ. ಆಕ್ಷೇಪಣೆ ಸಲ್ಲಿಸಲು ಆ.24ರಿಂದ ಸೆಪ್ಟಂಬರ್ 23ರವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ, ನಮೂನೆ 6, 7, 8ರಲ್ಲಿಸಲ್ಲಿಸಬೇಕು ಎಂದರು.

ಈ ವೇಳೆ ಪಿಡಿಒ ಹೊನ್ನಕ್ಕ , ಕಾರ್ಯದರ್ಶಿ ಲಕ್ಷಿತ್ರ್ಮೕಶೇಖರ್ , ಗ್ರಾಮದ ಮುಖಂಡರಾದ ಬಿ.ಜಿ. ಸ್ವಾಮಿ, ಪ್ರಕಾಶ್ ಎಚ್ ., ಬಿಎಲ್ ಒ ರಂಗಸ್ವಾಮಿ, ವಾಣಿ, ಶಿಲ್ಪಾ, ಅಲ್ಲಾಭಕ್ಷಿ, ನಜೀರ್ , ವಾಣಿಶ್ರೀ, ಗ್ರಾಮಸ್ಥರು ಇದ್ದರು.

-----

24ಎಚ್ಕೆಜೆಎಲ್ 02

ಹಿರೇಕೋಗಲೂರು ಗ್ರಾಪಂ ಆವರಣದಲ್ಲಿಸೋಮವಾರ ನಡೆದ ಕರಡು ಮತದಾರರ ಪಟ್ಟಿ ಆಕ್ಷೇಪಣೆ ಕುರಿತ ಗ್ರಾಮಸಭೆಯಲ್ಲಿಆಡಳಿತಾಧಿಕಾರಿ ಎಸ್ .ಜಿ. ಪುನೀತ್ ಶಂಕರ್ ಮಾತನಾಡಿದರು.