Mandatory Kannada Exam Answers Released Eligible Candidates Can Verify For Irs Examination
ಕೀ ಉತ್ತರ ಪ್ರಕಟ
Contributed by: Jaya shree|Vijaya Karnataka•
ಕೀ ಉತ್ತರ ಪ್ರಕಟ
- ವಿವಿಧ ಹುದ್ದೆಗಳಿಗೆ ನಡೆದಕಡ್ಡಾಯ ಕನ್ನಡ ಪರೀಕ್ಷೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಕನ್ನಡ ಭಾಷಾ ಪರೀಕ್ಷೆಯ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ನಲ್ಲಿಪ್ರಕಟಿಸಲಾಗಿದೆ. ಪೊಲೀಸ್ ಇಲಾಖೆಯ ಕಾನ್ಸ್ ಟೇಬಲ್ , ಗ್ರಾಮ ಆಡಳಿತ ಅಧಿಕಾರಿ, ಭೂಮಾಪಕರು, ವಸತಿ ಶಾಲಾ ಶಿಕ್ಷಕರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿನ ಸೆಕ್ಷನ್ ಆಫೀಸರ್ ಹುದ್ದೆಗಳು ಹಾಗೂ ಇಲಾಖೆಗಳ ವಿವಿಧ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ಬರೆದ ಅಭ್ಯರ್ಥಿಗಳು ಉತ್ತರಗಳನ್ನು ಪರಿಶೀಲಿಸಬಹುದು ಎಂದು ಕೆಇಎ ಪ್ರಕಟಣೆಯಲ್ಲಿತಿಳಿಸಿದೆ.
ಉತ್ತರಗಳ ಕುರಿತು ಯಾವುದೇ ಆಕ್ಷೇಪಣೆಗಳಿದ್ದರೆ, ಅಭ್ಯರ್ಥಿಗಳು ಆನ್ ಲೈನ್ ಪೋರ್ಟಲ್ ಮೂಲಕ ಆಗಸ್ಟ್ 24ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆಗೆ 25 ರೂ. ಶುಲ್ಕ ನಿದಿಗೊಳಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಬರುವ ಆಕ್ಷೇಪಣೆಗಳನ್ನು ಮಾತ್ರ ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬಹುದು ಎಂದು ಕೆಇಎ ತಿಳಿಸಿದೆ.