Northeast Railways Commitment To Green Energy Initiative
ಈಶಾನ್ಯ
Contributed by: Shrividya Rao|Vijaya Karnataka•
ಹಸಿರು ಇಂಧನದತ್ತ ಈಶಾನ್ಯ ಗಡಿ ರೈಲ್ವೇ
ಪರಿಸರ ಸ್ನೇಹಿ ಮತ್ತು ಹಸಿರು ಇಂಧನ ಬಳಕೆಗೆ ಒತ್ತು ನೀಡುತ್ತಿರುವ ಈಶಾನ್ಯ ಗಡಿ ರೈಲ್ವೆ ಸೌರ ವಿದ್ಯುತ್ ಉತ್ಪಾದನೆಯಲ್ಲಿಮಹತ್ವದ ಸಾಧನೆ ಮಾಡಿದೆ. 2026ರ ಜನವರಿಯಿಂದ ಜುಲೈ ಅವಧಿಧಿಯಲ್ಲಿ 23.7 ಋWp ಸೌರಶಕ್ತಿ ಸಾಮರ್ಥ್ಯವನ್ನು ಹೊಸದಾಗಿ ಅಳವಡಿಸಲಾಗಿದ್ದು, ಇದು ಭಾರತೀಯ ರೈಲ್ವೆಯ ಎಲ್ಲಾ ವಲಯಗಳಿಗಿಂತ ಅತ್ಯಂತ ಹೆಚ್ಚಿನ ಸಾಧನೆಯಾಗಿದೆ. 2011ರಲ್ಲಿಪ್ರಾರಂಭವಾದ ಸೌರೀಕರಣ ಅಭಿಯಾನದಿಂದ ಹಿಡಿದು 2026ರ ಜುಲೈ ವೇಳೆಗೆ, ಎನ್ ಎಫ್ ಆರ್ ಒಟ್ಟು ಸ್ಥಾಪಿತ ಸೌರ ಸಾಮರ್ಥ್ಯವು 42.1 ಮೆಗಾವ್ಯಾಟ್ ಪೀಕ್ (ಋWp)ಗೆ ತಲುಪಿದೆ. ಸುಮಾರು 114 ಲಕ್ಷ ಯೂನಿಟ್ ಸೌರ ವಿದ್ಯುತ್ ಉತ್ಪಾದನೆಯಾಗಿದ್ದು, ಇದರಿಂದ 8.6 ಕೋಟಿ ರೂ. ಉಳಿತಾಯವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 90ರಷ್ಟು ಅಧಿಧಿಕ ವಿದ್ಯುತ್ ಉತ್ಪಾದನೆ ಮತ್ತು ಶೇ. 95.45ರಷ್ಟು ಆರ್ಥಿಕ ಉಳಿತಾಯವನ್ನು ದಾಖಲಿಸಿದೆ. ಇಲಾಖೆಯ ಪರಿಸರ ಸ್ನೇಹಿ ಕಾರ್ಯತಂತ್ರದ ಭಾಗವಾಗಿ ಮುಂಬರುವ ದಿನಗಳಲ್ಲಿಮತ್ತಷ್ಟು ಸಾಮರ್ಥ್ಯ ವೃದ್ಧಿಸಲು ಒಟ್ಟು 9 ಋWp ಹೆಚ್ಚುವರಿ ಸೌರ ವಿದ್ಯುತ್ ಯೋಜನೆಗಳು ವಿವಿಧ ಹಂತಗಳಲ್ಲಿಅನುಷ್ಠಾನಗೊಳ್ಳುತ್ತಿವೆ.ಫೈಲ್ ನೇಮ್ - ರೈಲ್ವೇ