ತುಳು ಆಹಾರ ಪದ್ಧತಿಯಲ್ಲಿಔಷಧೀಯ ಸತ್ವ

Contributed byvijaya.poojary@timesgroup.com|Vijaya Karnataka
tulu food tradition the root of medicinal benefits for health
ವಿಕ ಸುದ್ದಿಲೋಕ ಮಂಗಳೂರು

ಜಗತ್ತು ವಿಜ್ಞಾನದತ್ತ ಸಾಗಿದರೂ ಪರಂಪರಾನುಗತ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ತುಳುನಾಡಿನ ಆಹಾರ ಪದ್ಧತಿಯಲ್ಲಿಔಷಧೀಯ ಗುಣ ಅಡಕವಾಗಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಹೇಳಿದರು.
ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದಿಂದ ಆಯೋಜಿಸಲಾದ ಮರಿಯಲದ ತೆನಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಸ್ಯಮೂಲ ಆಹಾರ ಪದ್ಧತಿ ಮಾನವನ ಆರೋಗ್ಯ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ ಎಂದರು.

ಸೋಣದ ಮದಿಮಾಲ್ ಪಾಡ್ದನ ಹೇಳಿಕೊಂಡು ತೆಂಬರೆ ಬಾರಿಸುತ್ತಾ ನೃತ್ಯ ಮಾಡಿಕೊಂಡು ವೇದಿಕೆಗೆ ಆಗಮಿಸಿ ಸಮಾರಂಭಕ್ಕೆ ಮೆರುಗು ನೀಡಿದರು. ಮಹಿಳಾ ಸದಸ್ಯರು ತುಳುನಾಡಿನ ಮಳೆಗಾಲದ ವೈಭವವನ್ನು ಹಾಡು. ನೃತ್ಯದ ಮೂಲಕ ಪ್ರದರ್ಶನ ನೀಡಿದರು.

ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತ ಎನ್ . ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ ಪ್ರಸ್ತಾವಿಸಿದರು. ಯೂನಿಯನ್ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ , ದಯಾಮಣಿ ಕೋಟ್ಯಾನ್ ,ಖಜಾಂಚಿ ರೇವತಿ ಅಶೋಕ್ ಉಪಸ್ಥಿತರಿದ್ದರು. ಮಹಿಳಾ ಸಂಘದ ಉಪಾಧ್ಯಕ್ಷೆ ದೇವಕಿ ಉಳ್ಳಾಲ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶಕಿಲಾರಾಜ್ ನಿರೂಪಿಸಿದರು. ಮಹಿಳಾ ಸದಸ್ಯರು ತಯಾರಿಸಿದ ಮಳೆಗಾಲದ ವಿವಿಧ ರೀತಿಯ ತಿನಿಸುಗಳೊಂದಿಗೆ ಸಹಭೋಜನ ನಡೆಯಿತು.

25ಎಂಎನ್ ಜಿ-ಬಿಲ್ಲವರ ಯೂನಿಯನ್