*** ಎಂಸಿಸಿ ಬ್ಯಾಂಕ್ ಗೆ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ

Contributed bydhanushkulal9@gmail.com|Vijaya Karnataka
mcc bank awarded achievement award a feat of comprehensive development
(ಸಾಕೇತ್ ಕುಡ್ಲ, ಕಾಸರಗೋಡು)

ವಿಕ ಸುದ್ದಿಲೋಕ ಮಂಗಳೂರು
ಪಟ್ಟಣ ಸಹಕಾರ ಬ್ಯಾಂಕ್ ಗಳ ವಿಭಾಗದಲ್ಲಿಅತ್ಯುತ್ತಮ ಸಾಧನೆಗಾಗಿ ಮಂಗಳೂರಿನ ಎಂಸಿಸಿ ಬ್ಯಾಂಕ್ ಗೆ ದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಸಹಕಾರಿ (ಎಸ್ ಸಿಡಿಸಿಸಿ) ಬ್ಯಾಂಕ್ ಪ್ರತಿಷ್ಠಿತ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2025-26 ಲಭಿಸಿದೆ. ಶನಿವಾರ ನಡೆದ ಎಸ್ ಸಿಡಿಸಿಸಿ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿಸಹಕಾರ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ . ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಎಂಸಿಸಿ ಬ್ಯಾಂಕ್ ಪರವಾಗಿ ಉಪಾಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು ಹಾಗೂ ಉಪ ಪ್ರಧಾನ ವ್ಯವಸ್ಥಾಪಕರು ಪ್ರಶಸ್ತಿ ಸ್ವೀಕರಿಸಿದರು. ಈ ಸಾಧನೆಯು ಸಹಕಾರ ರತ್ನ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರ ದೂರದೃಷ್ಟಿಯ ನಾಯಕತ್ವ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಬದ್ಧ ಪ್ರಯತ್ನ ಮತ್ತು ಗ್ರಾಹಕರು ಹಾಗೂ ಷೇರುದಾರರು ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ.

ಫೋಟೊ :

24ಅ- ಎಂಸಿಸಿ

ಎಂಸಿಸಿ ಬ್ಯಾಂಕ್ ಗೆ ಪ್ರತಿಷ್ಠಿತ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.