ಕೊಚ್ಚಿಯಲ್ಲಿಕನ್ನಡಿಗರ ಕಲರವ
-70ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಂಭ್ರಮ
ಬ್ಲರ್
ಮೂರು ಪ್ರಶಸ್ತಿ ಬಾಚಿಕೊಂಡ ‘ಕೃಷ್ಣಂ ಪ್ರಣಯ ಸಖಿ’
‘ಶಾಖಾಹಾರಿ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಗರಿ
‘ಬಘೀರ’ ಶ್ರೀಮುರಳಿ ಬೆಸ್ಟ್ ಹೀರೊ
ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ
ಲವಲವಿಕೆ ಸುದ್ದಿಲೋಕ
ಕೇರಳದ ಕೊಚ್ಚಿಯಲ್ಲಿಕೇರಳ ಪ್ರವಾಸೋದ್ಯಮದ ಸಹಯೋಗದಲ್ಲಿನಡೆದ 70ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ದಿಗ್ಗಜ ತಾರೆಯರ ಉಪಸ್ಥಿತಿ, ವೈಭವೋಪೇತ ರೆಡ್ ಕಾರ್ಪೆಟ್ , ಕಣ್ಣು ಕೊರೈಸುವ ಅದ್ಭುತ ಪ್ರದರ್ಶನಗಳು ರಂಗೇರಿದ್ದವು. ಕೇರಳದ ಜನಪ್ರಿಯ ನೃತ್ಯ ಕಥಕ್ಕಳಿ ಮೂಲಕ ಆರಂಭವಾದ ಈ ವರ್ಣರಂಜಿತ ಕಾರ್ಯಕ್ರಮವನ್ನು ಆರ್ ಜೆ ಮಿಥುನ್ , ವಿಷ್ಣು ವಾರಿಯರ್ ಹಾಗೂ ರಂಜಿನಿ ಹರಿದಾಸ್ ನಿರೂಪಿಸಿದರು. ನಟಿಯರಾದ ಸಾನ್ಯಾ ಮಲ್ಹೋತ್ರಾ, ಪ್ರಣೀತಾ ಸುಭಾಷ್ , ನಿಧಿ ಅಗರ್ವಾಲ್ , ಅಪರ್ಣಾ ಬಾಲಮುರಳಿ, ತ್ರಿಶಾ ಶೆಟ್ಟಿ ಡಾನ್ಸ್ ಪರ್ಫಾರ್ಮೆನ್ಸ್ ಗಳು ಇಡೀ ಸಮಾರಂಭಕ್ಕೆ ಹೊಸ ಮೆರುಗು ನೀಡಿದವು.
ಕಮರ್ ಫಿಲ್ಮ್ ಫ್ಯಾಕ್ಟರಿ ಸಹಕಾರದೊಂದಿಗೆ ಟಿಟಿಕೆ ಪ್ರೆಸ್ಟೀಜ್ , ಸೆನ್ಸೊಡೆಂಟ್ ಡಿಎಸ್ ಪಿ, ಡಿಎನ್ ಎ-ಡಿಸೈನ್ಸ್ ನೆವರ್ ಅಗೇನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ , ಡ್ಯಾಝ್ಲರ್ ಕಾಸ್ಮೆಟಿಕ್ಸ್ , ಡಬಲ್ ಬುಲ್ಸ್ , ಆಚಿ ಮಸಾಲ ಹಾಗೂ ಅರುಣ್ ಐಸ್ ಕ್ರೀಮ್ ಸಹ ಪ್ರಯೋಜಕತ್ವದಲ್ಲಿನಡೆದ 70ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭದ ರೆಡ್ ಕಾರ್ಪೆಟ್ ನಲ್ಲಿಸಾಯಿ ಪಲ್ಲವಿ, ಸುಹಾಸಿನಿ, ಜಿ.ವಿ. ಪ್ರಕಾಶ್ , ಕಾಜಲ್ ಅಗರ್ವಾಲ್ , ಅಲ್ಲುಅರ್ಜುನ್ , ಶಿವ ಕಾರ್ತಿಕೇಯನ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ಇದರಲ್ಲಿ‘ಪುಷ್ಪ-2’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ ಅಲ್ಲುಅರ್ಜುನ್ ಸತತ ಮೂರನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದರು. ಶಿವಕಾರ್ತಿಕೇಯನ್ ‘ಅಮರನ್ ’ ಸಿನಿಮಾಗಾಗಿ ಉತ್ತಮ ನಟ ಪ್ರಶಸ್ತಿ ಗಳಿಸದರು. ಮಲಯಾಳಂನ ‘ಬ್ರಹ್ಮಯುಗಂ’ ಸಿನಿಮಾದ ನಟನೆಗಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸುವ ಮೂಲಕ 16ನೇ ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸಿದರು. ‘ಕಲ್ಕಿ 2898 ಎಡಿ’ ಚಿತ್ರದ ನಟನೆಗಾಗಿ ಅಮಿತಾಭ್ ಬಚ್ಚನ್ ತೆಲುಗಿನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ತಮಿಳಿನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ನಟಿ ಪಾರ್ವತಿ ತಿರುವೊತ್ತು ಸ್ವೀಕರಿಸಿದರು. ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ರಚಿಸಿರುವ ಶ್ರೀಕುಮಾರನ್ ತಂಪಿ ಹಾಗೂ ಶ್ರೀವಾಸನ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.
ಬಾಕ್ಸ್
ಕನ್ನಡದ ಫಿಲ್ಮ್ ಫೇರ್ ವಿಜೇತರು
ಅತ್ಯುತ್ತಮ ನಟ: ಶ್ರೀಮುರಳಿ (ಬಘೀರ)
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಕೋಳಿ ಎಸ್ರು)
ಅತ್ಯುತ್ತಮ ಸಿನಿಮಾ: ಶಾಖಾಹಾರಿ
ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೊಣನೂರು (ಹದಿನೇಳೆಂಟು)
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ (ಬ್ಲಿಂಕ್ )
ಅತ್ಯುತ್ತಮ ಪೋಷಕ ನಟಿ: ಪ್ರಿಯಾ ಷಟಮರ್ಶನ್ (ಭೀಮ)
ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ ಕರಣ್ ಸಿಂಗ್ (ಕೃಷ್ಣಂ ಪ್ರಣಯ ಸಖಿ-ದ್ವಾಪರಾ ದಾಟುತಾ)
ಅತ್ಯುತ್ತಮ ಹಿನ್ನೆಲೆ ಗಾಯಕ: ಶ್ರುತಿ ಪ್ರಹ್ಲಾದ್ (ಕರಟಕ ದಮನಕ-ಹಿತ್ತಲಕ ಕರಿಬ್ಯಾಡ)
ಅತ್ಯುತ್ತಮ ಗೀತರಚನೆ: ಡಾ. ವಿ. ನಾಗೇಂದ್ರ ಪ್ರಸಾದ್ (ಕೃಷ್ಣಂ ಪ್ರಣಯ ಸಖಿ-ದ್ವಾಪರಾ ದಾಟುತಾ)
ಅತ್ಯುತ್ತಮ ನವನಟ: ಸಮರ್ಜಿತ್ ಲಂಕೇಶ್ (ಗೌರಿ)
ಅತ್ಯುತ್ತಮ ನವನಟಿ: ಬಿಂದು ಶಿವರಾಮ್ (ಕೆರೆಬೇಟೆ)
ಬಾಕ್ಸ್
ತೀರ್ಪುಗಾರರ ಆಯ್ಕೆ ಪ್ರಶಸ್ತಿ
ಅತ್ಯುತ್ತಮ ಸಿನಿಮಾ: ಬ್ಲಿಂಕ್
ಅತ್ಯುತ್ತಮ ನಟ: ಗೌರಿಶಂಕರ್ (ಕೆರೆಬೇಟೆ)
ಅತ್ಯುತ್ತಮ ನಟಿ: ಅಂಕಿತಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

