(ಬೆಂಗಳೂರಿಗೆ) ಅಪಘಾತ: ಮಾಜಿ ಶಾಸಕ ಕೆ.ಸುರೇಶಗೌಡ ಪಾರು

Contributed bynaveena.channappa@timesofindia.com|Vijaya Karnataka

ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶಗೌಡ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬಸರಾಳು ಸಮೀಪ ಕಾರು ಸೇತುವೆಗೆ ಡಿಕ್ಕಿ ಹೊಡೆದಿದೆ. ಚಾಲಕ ಹಾಗೂ ಸುರೇಶಗೌಡ ಅವರು ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

nagamangala former mla k suresh gowda injured in accident

ಅಪಘಾತ: ಮಾಜಿ ಶಾಸಕ ಕೆ.ಸುರೇಶಗೌಡ ಪಾರು

ವಿಕ ಸುದ್ದಿಲೋಕ ಮಂಡ್ಯ

ತಾಲೂಕಿನ ಬೊಂತೆಕೊಪ್ಪಲು ಸಮೀಪ ಶನಿವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶಗೌಡ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸರಾಳು ಸಮೀಪದ ಗ್ರಾಮದಲ್ಲಿನಡೆದ ಪಕ್ಷದ ಕಾರ ್ಯಕರ್ತರ ಮದುವೆ ಆರತಕ್ಷತೆ ಕಾರ ್ಯಕ್ರಮ ಮುಗಿಸಿ ನಾಗಮಂಗಲಕ್ಕೆ ವಾಪಸ್ಸಾಗುವಾಗ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಸೇತುವೆಗೆ ಡಿಕ್ಕಿಯಾಗಿದೆ. ಈ ವೇಳೆ ಚಾಲಕ ಶೇಖರ್ ಹಾಗೂ ಕಾರಿನಲ್ಲಿಪ್ರಯಾಣಿಸುತ್ತಿದ್ದ ಸುರೇಶ್ ಗೌಡ ಅವರು ಗಾಯಗೊಂಡಿದ್ದಾರೆ.

ಪೊಲೀಸರಿಗೆ ಗನ್ ಮ್ಯಾನ್ ತಕ್ಷಣವೇ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುರೇಶಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಫೋಟೊ ಇದೆ

ಮಂಡ್ಯ ತಾಲೂಕು ಬಸರಾಳು ಸಮೀಪ ಬೊಂತೆಕೊಪ್ಪಲು ಬಳಿ ಸಂಭವಿಸಿದ ಅಪಘಾತದಲ್ಲಿಜಖಂಗೊಂಡಿರುವ ಮಾಜಿ ಶಾಸಕ ಕೆ.ಸುರೇಶಗೌಡ ಅವರು ಪ್ರಯಾಣಿಸುತ್ತಿದ್ದ ಕಾರು.

ಎಂಡಿವೈ22ಎನ್ 6

ಕೆ.ಸುರೇಶ್ ಗೌಡ, ಮಾಜಿ ಶಾಸಕ, ನಾಗಮಂಗಲ.