ಚಾಕುವಿನಿಂದ ಇರಿದು ಕೊಲೆಗೆ ಯತ್ನ: ಶಿಕ್ಷಕನ ಸೆರೆ

Contributed byharisha.lakshmipathy@timesgroup.com|Vijaya Karnataka

ಮೈಸೂರಿನ ಸಾಲಿಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿಕ್ಷಕನೊಬ್ಬನನ್ನು ಪ್ರಶ್ನಿಸಿದ್ದಕ್ಕೆ ತಂದೆ-ಮಗನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

knife attack school teacher charged with attempted murder

ವಿಕ ಸುದ್ದಿಲೋಕ ಮೈಸೂರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಲಾ ಶಿಕ್ಷಕನೊಬ್ಬ ತಂದೆ-ಮಗನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ. ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿಕಳೆದ ಗುರುವಾರ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ, ಕೆ.ಆರ್ .ನಗರ ಪಟ್ಟಣದ ಆಂಜನೇಯ ಬಡಾವಣೆಲ್ಲಿರುವ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಎನ್ .ಮಂಜುನಾಥ್ ಚಾಕುವಿ ನಿಂದ ಇರಿದು ಹಲ್ಲೆನಡೆಸಿದ್ದು, ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮದ ನಿವಾಸಿ ಸಿ.ಎಂ.ಗೋಪಾಲ್ , ಅವರ ಪುತ್ರ ಅಭಿಷೇಕ್ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಪಾಲ್ ಗಂಭೀರ ಸ್ಥಿತಿಯಲ್ಲಿದ್ದಾರೆ. ಐದಾರು ಮಹಿಳೆಯರು ಮನೆ ಮುಂದೆ ಮಾತನಾ ಡುತ್ತಿರುವ ವೇಳೆ ಶಿಕ್ಷಕ ಸಿ.ಎನ್ .ಮಂಜುನಾಥ್ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ಕಂಡ ಸಿ.ಎಂ.ಗೋಪಾಲ್ ಮಹಿಳೆ ಯರ ಮುಂದೆ ಈ ರೀತಿ ಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲಎಂದು ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಶಿಕ್ಷಕ ಮಂಜು ನಾಥ್ , ಗೋಪಾಲ್ ಅವರನ್ನು ನಿಂದಿಸಿದ್ದಾರೆ. ಇದನ್ನು ಗೋಪಾಲ್ ಪುತ್ರ ಅಭಿಷೇಕ್ ಪ್ರಶ್ನಿಸಿದ್ದಾರೆ. ತಕ್ಷಣವೇ ಮನೆಯಿಂದ ಚಾಕು ತಂದ ಶಿಕ್ಷಕ ಮಂಜುನಾಥ್ , ಗೋಪಾಲ್ ಅವರನ್ನು ಚಾಕುವಿ ನಿಂದ ಇರಿದಿದ್ದಾರೆ. ಬಿಡಿಸಲು ಬಂದ ಅಭಿಷೇಕ್ ಮೇಲೆಯೂ ದಾಳಿ ನಡೆಸಿದ್ದಾರೆ. ಸಾಲಿಗ್ರಾಮ ಠಾಣೆ ಪೊಲೀಸರು, ಶಿಕ್ಷಕ ಮಂಜುನಾಥ್ ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿಕ್ಷಕ ಅಮಾನತು: ಆರೋಪಿ ಶಿಕ್ಷಕ ಮಂಜುನಾಥ್ ವಿರುದ್ಧ ದೂರು ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಬಗ್ಗೆ ಪೊಲೀಸ್ ಇಲಾಖೆಯ ವರದಿ ಆಧರಿಸಿ ಡಿಡಿಪಿಐ ಡಿ.ಉದಯ್ ಕುಮಾರ್ , ಶಿಕ್ಷಕ ಮಂಜುನಾಥ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.