ಕೂಡ್ಲಿಗಿ ಪುಟ ಜಾಹೀರಾತು
ಕೂಡ್ಲಿಗಿಯ ಕಾನಹೊಸಹಳ್ಳಿಯ ಮಾನವೀಯ ಅಂತಃಕರಣದ ನಾಯಕ, ಬಡವರ ಬಂಧು ಎಂಬ ಹೆಸರಿಗೆ ಭಾಜನ (ಕಿಕ್ಕರ್ )
ಅಪ್ರತಿಮ ಸಮಾಜ ಸೇವಕ ಯು.ನಾಗೇಶ್
ಯಾವುದೇ ಜಾತಿ, ಧರ್ಮ, ಪಕ್ಷ, ಭೇದವಿಲ್ಲದಂತೆ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ಗುಣ, ಕ್ರಿಯಾಶೀಲ ವ್ಯಕ್ತಿತ್ವ, ಸ್ವಾಸ್ಥತ್ರ್ಯ ಸಮಾಜದ ಹಂಬಲ, ಪ್ರಕೃತಿ ಮಾತೆಯ ಸಮೃದ್ಧಿಗೆ ಸಸಿಗಳನ್ನು ನೆಡುವ ಕಾಳಜಿ, ಕೃಷಿ, ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಪ್ರತಿ ಕ್ಷೇತ್ರಕ್ಕೂ ತಮ್ಮ ಕೈಲಾದ ಮಟ್ಟಿಗೆ ಸದ್ದಿಲ್ಲದೇ ಪ್ರೋತ್ಸಾಹ ನೀಡುತ್ತಾ ಬಂದಿರುವ ವಿಜಯನಗರ ಜಿಲ್ಲೆಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಯು.ನಾಗೇಶ್ (ರಾಜು) ಅವರು ಸಮಾಜ ಸೇವೆಯಲ್ಲಿಸೈ ಎನಿಸಿಕೊಂಡಿದ್ದಾರೆ.
‘ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತದೆ’ ಎಂಬ ಹಿರಿಯರ ಅನುಭವದ ಮಾತು ಕಾನಹೊಸಹಳ್ಳಿಯ ಯು.ನಾಗೇಶ್ (ರಾಜು) ಅವರಿಗೆ ಹೊಂದುವಂತಿದೆ. ಯಾರಿಗೂ, ಯಾವಾಗಲೂ ಕೆಟ್ಟದ್ದು ಬಯಸದೇ ತನ್ನ ಕೈಲಾದರೆ ಒಳ್ಳೆಯದು ಮಾಡುವುದು, ಇಲ್ಲವಾದರೆ ಸುಮ್ಮನಿರೋದು ಎಂಬಂತೆ ನಡೆದುಕೊಳ್ಳುವ ಯು.ನಾಗೇಶ್ ಅವರು, ಕಳೆದ 7-8 ವರ್ಷಗಳಿಂದ ಯಾರೂ ಊಹಿಸದ ರೀತಿಯಲ್ಲಿಬೆಳೆದು ಮಿಂಚಿದ್ದಾರೆ. ಸಾಕಷ್ಟು ಶ್ರೀಮಂತಿಕೆ ಇದ್ದರೂ ಯಾವತ್ತೂ ಹಮ್ಮು, ಬಿಮ್ಮು ತೋರದೆ ಸಾಧಾರಣ ವ್ಯಕ್ತಿಯೆಂಬಂತೆ ನಡೆದುಕೊಳ್ಳುವುದು, ಕೋವಿಡ್ ನಂಥ ಸಂದರ್ಭದಲ್ಲಿಸಾರ್ವಜನಿಕರಿಗೆ ಆಹಾರದ ಕಿಟ್ ವಿತರಣೆ, ಮಾಸ್ಕ್ ವಿತರಣೆ ಸೇರಿ ಸಮಾಜಮುಖಿಯಾಗಿ ಕೆಲಸ ಮಾಡಿದ ಅವರ ವ್ಯಕ್ತಿತ್ವ ಎಲ್ಲರೂ ಇಷ್ಟಪಡುವಂತಿದೆ.
ಬದುಕಿನ ಫೀಡ್ ಬ್ಯಾಕ್ :
ಕಾನಹೊಸಹಳ್ಳಿಯ ನೇಕಾರ ಸಮುದಾಯದ ಸುಸಂಸ್ಕೃತ ಮನೆತನದ ಯು.ಸಿದ್ಧರಾಮಪ್ಪ ಮತ್ತು ಯು.ಎಸ್ .ಮಾಯಮ್ಮ ದಂಪತಿ ಪುತ್ರರಾಗಿ 1978ರ ಮೇ 21ರಂದು ಜನಿಸಿದ ಯು.ನಾಗೇಶ್ ಅವರು, ಬಾಲ್ಯದಿಂದಲೂ ಕ್ರಿಯಾಶೀಲತೆ ಮೈಗೂಡಿಸಿಕೊಂಡಿದ್ದವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರು ಕಾನಹೊಸಹಳ್ಳಿಯಲ್ಲಿಪೂರೈಸಿದ್ದು, ಕಾಲೇಜು ಮತ್ತು ಬಿಎ (ಹಿಂದಿ) ಜಗಳೂರಿನಲ್ಲಿಮುಗಿಸಿದ್ದಾರೆ. ತಮ್ಮ ತಂದೆ ಸಿದ್ಧರಾಮಪ್ಪ ಮಾಡುತ್ತಿದ್ದ ಕಿರಾಣಿ ವ್ಯಾಪಾರದ ಜ್ಞಾನವನ್ನು ಬಾಲ್ಯದಿಂದ ಅರಿತಿದ್ದ ಯು.ನಾಗೇಶ್ ಅವರು ಸಹ ಕಿರಾಣಿ ಅಂಗಡಿ ಮುನ್ನಡೆಸುತ್ತಿದ್ದರು. ಆ ವೇಳೆಯಲ್ಲಿಸಾಹಿತ್ಯ, ಸಂಘಟನೆಗೆ ಸದಾ ತೊಡಗಿಸಿಕೊಳ್ಳುವ ಮೂಲಕ ಜನರಲ್ಲಿಪ್ರೀತಿಯ ‘ರಾಜಣ್ಣ’ ಎಂದೇ ಹೆಸರಾಗಿದ್ದರು.
ಪದ್ಮಾವತಿ ಚಾರಿಟಬಲ್ ಟ್ರಸ್ಟ್ ನಿಂದ ಜನಸೇವೆ:
ಕಾನಹೊಸಹಳ್ಳಿಯ ಯು.ನಾಗೇಶ್ (ರಾಜು) ಅವರು ಬಳ್ಳಾರಿ ಜಿಲ್ಲಾಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ- ಕರ್ನಾಟಕ ಸಂಘಟನೆ ಜಿಲ್ಲಾಸಲಹಾ ಸಮಿತಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಕಾರ್ಯದರ್ಶಿ, ನ್ಯೂ ಸೆಂಚುರಿ ರೋಟರಿ ಕ್ಲಬ್ ಅಧ್ಯಕ್ಷರು ಸೇರಿ ನಾನಾ ಸಂಘ, ಸಂಸ್ಥೆಗಳಲ್ಲಿಕ್ರಿಯಾ ಶೀಲವಾಗಿ ತೊಡಗಿಸಿಕೊಂಡು ಹೆಸರು ಗಳಿಸಿದ್ದಾರೆ. ಅಲ್ಲದೆ, ಸದಾ ಜನರೊಂದಿಗೆ ಬೆರೆಯುವ ಗುಣವುಳ್ಳವರು. ಸಮಾಜಕ್ಕೆ ಏನಾದರೊಂದು ಸೇವೆ ಸಲ್ಲಿಸಬೇಕೆಂಬ ತುಡಿತದೊಂದಿಗೆ ‘ಪದ್ಮಾವತಿ ಚಾರಿಟಬಲ್ ಟ್ರಸ್ಟ್ ’ ಸ್ಥಾಪಿಸಿ ಮಹಾಮಾರಿ ಕೋವಿಡ್ ಸಂದರ್ಭದಲ್ಲಿಸಾಕಷ್ಟು ಜನರಿಗೆ ಮಾಸ್ಕ್ , ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ್ದಾರೆ. ಇದಲ್ಲದೆ, ಇದೀಗ, ಚಿತ್ರದುರ್ಗದಲ್ಲಿ‘ರಾಜು ಫೌಂಡೇಷನ್ ’ ಸ್ಥಾಪಿಸಿಕೊಂಡು ಬಡವರಿಗೆ ಆಸರೆಯಾಗುವಂಥ ಆರೋಗ್ಯ ಉಚಿತ ತಪಾಸಣೆ, ಪ್ರಕೃತಿ ಉಳಿಸುವ ನಿಟ್ಟಿನಲ್ಲಿಸಸಿ ನೆಡುವುದು, ಪರಿಸರ ಜಾಗೃತಿ ಮೂಡಿಸುವುದು ಸೇರಿ ನಾನಾ ಜನಮುಖಿ ಕಾರ್ಯ ಕೈಗೆತ್ತಿಕೊಂಡಿರುವುದು ಅವರ ಸಮಾಜಮುಖಿ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
‘ಆರ್ ’ ಗ್ರೂಪ್ ಮಾಲೀಕರೆಂಬ ಖ್ಯಾತಿಗೆ ಭಾಜನ:
ದೊಡ್ಡ ದೊಡ್ಡ ನಗರಗಳಲ್ಲಿಉದ್ಯಮಿಗಳು ತಮ್ಮದೇ ಆದ ಗ್ರೂಪ್ ಗಳನ್ನು ಸ್ಥಾಪಿಸಿಕೊಂಡು ಹೆಸರು ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಕಾನಹೊಸಹಳ್ಳಿಯೆಂಬ ಹೋಬಳಿ ಕೇಂದ್ರದಲ್ಲಿಯು.ನಾಗೇಶ್ (ರಾಜು) ಅವರು ‘ಆರ್ ’ ಗ್ರೂಪ್ ಮಾಡಿಕೊಂಡು ಅದರ ಮಾಲೀಕರೆಂಬ ಖ್ಯಾತಿಯನ್ನು ಎಲ್ಲೆಡೆ ಮೊಳಗಿಸಿದ್ದಾರೆ. ಇದೀಗ, ತಮ್ಮ ‘ಆರ್ ’ ಗ್ರೂಪ್ ನಿಂದಾಗಿ ಸಾಕಷ್ಟು ಜನರಿಗೆ ಉದ್ಯೋಗದಾತರೂ ಆಗಿದ್ದಾರೆ.
ಬಾಕ್ಸ್
ನೆಚ್ಚಿನ ನವಿಲುಗರಿ ಫಾಮ್ ರ್ :
ಕಾನಹೊಸಹಳ್ಳಿಯ ಯು.ನಾಗೇಶ್ (ರಾಜು) ಅವರು, ಕೇವಲ ಉದ್ಯಮ ಕ್ಷೇತ್ರಕ್ಕೆ ಸೀಮಿತವಾಗದೇ ಕೃಷಿಯೆಡೆಗೆ ಇಟ್ಟುಕೊಂಡಿರುವ ಪ್ರೀತಿಯಿಂದಾಗಿ ಬಯಲುತುಂಬರಗುದ್ದಿ ಬಳಿಯೇ ಇರುವ ನೆಚ್ಚಿನ ‘ನವಿಲುಗರಿ ಫಾಮ್ ರ್ ’ ಸಾಕ್ಷಿಯಾಗಿದೆ. ತಾವು ಕೃಷಿಗೆ ಇಳಿಯದಿದ್ದರೂ, ತಮ್ಮ ಜಮೀನಿನಲ್ಲಿಕೃಷಿ ಬೆಳೆ ಬೆಳೆಯಲು ಉತ್ಸುಕತೆ ತೋರಿದ್ದರಿಂದ ಬೇರೆಯವರಿಂದ ಪಪ್ಪಾಯ, ದಾಳಿಂಬೆ ಸೇರಿ ನಾನಾ ಬೆಳೆ ಬೆಳೆಯುತ್ತಿದ್ದಾರೆ. ಕಳೆದ 6 ತಿಂಗಳಿಂದ ಬೆಳೆ ಇಲ್ಲವಾದರೂ, ಕೃಷಿ ಸಮೃದ್ಧಿಯೊಂದಿಗೆ ಆ ನವಿಲುಗರಿ ಫಾಮ್ ರ್ ಅನ್ನು ಅಚ್ಚುಮೆಚ್ಚಿನ ತಾಣವಾಗಿ ಮಾಡುವ ನಿಟ್ಟಿನಲ್ಲಿಎಲ್ಲಾತಯಾರಿಯನ್ನೂ ಯು.ನಾಗೇಶ್ ಅವರು ನಡೆಸಿದ್ದಾರೆ.
ಬಾಕ್ಸ್
‘ವಿಕ ಎಕ್ಸಲೆನ್ಸ್ ‘ ಪ್ರಶಸ್ತಿ ಸೇವೆಗೆ ಗೌರವ:
ಕಾನಹೊಸಹಳ್ಳಿಯ ಯು.ನಾಗೇಶ್ ಅವರು ಜನಮುಖಿಯಾಗಿ ಸಾಗಿದ ಅವರ ಸಾಧನೆಯನ್ನು ಗುರುತಿಸಿದ ‘ವಿಜಯ ಕರ್ನಾಟಕ’ ‘ವಿಕ ಎಕ್ಸಲೆನ್ಸ್ ಹಾಗೂ ಹಾನರ್ ’ನಲ್ಲಿಉತ್ತರ ಕರ್ನಾಟಕದ ‘ಉತ್ತಮ ಸಮಾಜ ಸೇವಕ’ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿಇತ್ತೀಚೆಗೆ ಪ್ರದಾನ ಮಾಡಿರುವುದು ಅವರ ಸೇವೆಗೆ ಸಂದ ಗೌರವವಾಗಿದೆ.
ಹೊಸದಿಲ್ಲಿಯಲ್ಲಿಡಾ.ಅಬ್ದುಲ್ ಕಲಾಂ ರಾಷ್ಟ್ರೀಯ ಸೇವಾ ಪುರಸ್ಕಾರ, ಕೇರಳದ ಕಾಸರಗೋಡಿನಲ್ಲಿಸುವರ್ಣ ಕನ್ನಡಿಗ ಅಂತಾರಾಜ್ಯ ಪ್ರಶಸ್ತಿ, ಬೆಳಗಾವಿಯಲ್ಲಿಕರುನಾಡಿನ ಹೆಮ್ಮೆಯ ರತ್ನ ಪ್ರಶಸ್ತಿ, ಗದಗದಲ್ಲಿಹುಯಿಲಗೋಳ ನಾರಾಯಣ ರಾವ್ ಸಾಹಿತ್ಯ ಪುರಸ್ಕಾರ, ಸ್ವಾಮಿ ವಿವೇಕಾನಂದ ರಾಜ್ಯಮಟ್ಟದ ಪ್ರಶಸ್ತಿ, ಯುವಕವಿ ಗೌರವ ಪ್ರಶಸ್ತಿ, ಶ್ರೇಷ್ಠ ಸಮಾಜ ಸೇವಾ ಸಾಧಕ ರಾಜ್ಯ ಪ್ರಶಸ್ತಿ, ಬುದ್ಧ ಭಾರತ ರಾಷ್ಟ್ರೀಯ ಪ್ರಶಸ್ತಿ, ದಾಸಿಮಯ್ಯ ಪ್ರಶಸ್ತಿ ಸೇರಿ 20ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು, ಇತರರಿಗೆ ಪ್ರೇರಣೆ ನೀಡಿದೆ.
ಬಾಕ್ಸ್
ಸಾಧಕ ಯು.ನಾಗೇಶ್ ಹಿಂದಿನ ಪ್ರೇರಕ ಶಕ್ತಿ:
ಕಾನಹೊಸಹಳ್ಳಿಯ ಯು.ನಾಗೇಶ್ (ರಾಜು) ಅವರ ಸಾಧನೆ, ಸಮಾಜಮುಖಿ ಕಾರ್ಯಗಳ ಹಿಂದೆ ಪ್ರೇರಕ ಶಕ್ತಿಯಾಗಿರುವುದು ಅವರ ತಾಯಿ ಯು.ಎಸ್ .ಮಾಯಮ್ಮ ಅವರ ಆಶೀರ್ವಾದ ಹಾಗೂ ಪತ್ನಿ ಶಿಲ್ಪಾ ನಾಗೇಶ್ , ಮಕ್ಕಳಾದ ಯು.ಎನ್ .ತೇಜಸ್ವಿನಿ, ಯು.ಎನ್ .ಬಾಲಾಜಿ, ಯು.ಎನ್ . ಜೀವನ್ ಹಾಗೂ ಯು.ಎನ್ .ಐಸಿರಿಯವರ ಸಹಕಾರವೇ ಕಾರಣವಾಗಿದೆ. ಯು.ನಾಗೇಶ್ ಅವರ ಪ್ರತಿ ಕಾರ್ಯದಲ್ಲೂಕುಟುಂಬದವರು ಪ್ರೋತ್ಸಾಹಿಸುವುದರಿಂದ ಅವರ ಸಾಧನೆಯ ಹಾದಿಯು ಹೂವಿನ ಹಾಸಿಗೆಯಂತಾಗಿದೆ ಎಂಬುದು ಅವರನ್ನು ಬಲ್ಲಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಬಾಕ್ಸ್
ಮಕ್ಕಳ ಓದಿಗೆ ಮಹತ್ವ ನೀಡಿದ ಯು.ನಾಗೇಶ್ :
ಕಾನಹಸೊಹಳ್ಳಿಯ ಯು.ನಾಗೇಶ್ ಅವರು ಮೊದಲಿಂದಲೂ ವ್ಯಾಪಾರ- ವಹಿವಾಟಿನಲ್ಲಿತೊಡಗಿದ್ದರೂ ತಮ್ಮ ಮಕ್ಕಳ ಓದಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಹೀಗಾಗಿ ತಮ್ಮ ಹಿರಿಯ ಪುತ್ರಿ ಯು.ಎನ್ .ತೇಜಸ್ವಿನಿ ಅವರು ಬಿ.ಎ.ಎಂ.ಎಸ್ ಪದವಿ ಪೂರೈಸಿ ವೈದ್ಯೆಯಾಗಿದ್ದು, ಇದೀಗ, ಎಂ.ಡಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನೊಬ್ಬ ಪುತ್ರ ಯು.ಎನ್ .ಬಾಲಾಜಿಯವರು ಎಂಜಿನಿಯರಿಂಗ್ ಕೋರ್ಸ್ ಮುಗಿಸಿ ಚಿತ್ರರಂಗದ ಎಡಿಟಿಂಗ್ ವಿಭಾಗದಲ್ಲಿಉತ್ತಮ ಕೌಶಲ ಹೊಂದಿ ಹೆಸರುಗಳಿಸಿದ್ದಾರೆ. ಮತ್ತೊಬ್ಬ ಮಗ ಯು.ಎನ್ .ಜೀವನ್ ಅವರು ಬೆಂಗಳೂರಿನಲ್ಲಿಬಿ.ಎಸ್ಸಿ ವೆಟರ್ನರಿ ಕೋರ್ಸ್ ಓದುತ್ತಿದ್ದು, ಕೊನೆಯ ಮಗಳು ಐಸಿರಿ ಪ್ರಾಥಮಿಕ ಶಿಕ್ಷಣ ಕಲಿಯುತ್ತಿದ್ದಾಳೆ. ಹೀಗೆ, ವ್ಯಾಪಾರ ಕುಟುಂಬವಾದ ಯು.ನಾಗೇಶ್ , ಶಿಲ್ಪಾ ದಂಪತಿಯ ಪುತ್ರರು ಮಾತ್ರ ಉನ್ನತ ವ್ಯಾಸಂಗದಲ್ಲಿತೊಡಗಿ ಕೀರ್ತಿ ಗಳಿಸಿದ್ದಾರೆಂಬುದು ಅವರ ಬಂಧುಗಳು ಸೇರಿ ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಬಾಕ್ಸ್
ಸಾಹಿತ್ಯ ಕ್ಷೇತ್ರದಲ್ಲಿಛಾಪು:
ಕಾನಹೊಸಹಳ್ಳಿಯ ಯು.ನಾಗೇಶ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವುದಲ್ಲದೆ, ಉತ್ತಮ ಸಂಘಟಕರಾಗಿಯೂ ಹೆಸರು ಗಳಿಸಿದ್ದಾರೆ. ತಮ್ಮದೇ ಸ್ವಂತ ಬಾಲಾಜಿ ಪ್ರಕಾಶನ ಸ್ಥಾಪಿಸಿ, ಅದರ ಮೂಲಕ ತಮ್ಮ ರಚನೆಯ ಮನದ ಮಾತು (ಕವನ ಸಂಕಲನ), ನಿಸರ್ಗದ ಸ್ವರ್ಗ ಸಿಂಹಳ (ಪ್ರವಾಸ ಕಥನ), ಮುಗಿಲ ಮಲ್ಲಿಗೆ (ಹನಿಗವನ ಸಂಕಲನ), ತನ್ನ ತಾ ತಿಳಿದ ಮೇಲೆ, ಮಮತಾಮಯಿ (ವ್ಯಕ್ತಿತ್ವ ವಿಕಸನ), ಮಾತು ಮಾಣಿಕ್ಯ (ನುಡಿಮುತ್ತುಗಳ ಭಂಡಾರ) ಸೇರಿ 10ಕ್ಕೂ ಹೆಚ್ಚು ಪ್ರಕಟಿತ ಕೃತಿಗಳನ್ನು ಹೊರ ತಂದಿದ್ದಾರೆ. 8ಕ್ಕೂ ಹೆಚ್ಚು ಅಪ್ರಕಟಿತ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯದಲ್ಲೂಕೃಷಿ ಮಾಡಿ ಸೈಎನಿಸಿಕೊಂಡಿದ್ದಾರೆ.
ಬಾಕ್ಸ್
ಅಪರೂಪದ ನಾಣ್ಯ, ನೋಟು ಸಂಗ್ರಹಕಾರ:
ಕಾನಹೊಸಳ್ಳಿಯ ಯು.ನಾಗೇಶ್ ಅವರು ಕರ್ನಾಟಕ ಸೇರಿ ದೇಶದ ನಾನಾ ಭಾಗದಲ್ಲಿಪ್ರವಾಸ ನಡೆಸಿದ್ದಲ್ಲದೆ, ಕೊಲೊಂಬೊ, ಸಿಂಗಾಪುರ, ಮಲೇಷ್ಯಿಯಾ, ಬಹರೇನ್ , ದುಬೈ, ಅಬುದಾಬಿ, ಶಾರ್ಜಾ, ಕತಾರ್ , ಮಾಲ್ಡೀವ್ ್ಸ ಹಾಗೂ ಶ್ರೀಲಂಕಾ ದೇಶಗಳಲ್ಲೂತಮ್ಮ ಪ್ರವಾಸ ನಡೆಸಿ, ಅಲ್ಲಿನ ಅನುಭವವನ್ನು ಪುಸ್ತಕ ರೂಪದಲ್ಲಿಕಟ್ಟಿಕೊಡುವಂಥ ಆಸಕ್ತಿ ಇರುವ ವ್ಯಕ್ತಿತ್ವದವರು. ಹೀಗಾಗಿ ಬಾಲ್ಯದಿಂದಲೂ ಅಪರೂಪದ ನಾಣ್ಯ, ನೋಟುಗಳು, ವಿಶೇಷ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿರುವ ಯು.ನಾಗೇಶ್ ಅವರು ‘ಅಪರೂಪದ ನಾಣ್ಯ ಸಂಗ್ರಹಕಾರ’, ನಾಗೇಶ್ ಮನೆಯೇ ಮ್ಯೂಸಿಯಂ’ ಎಂದು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿಮಿಂಚಿರುವುದು ಇವರ ಹೆಗ್ಗಳಿಕೆಯಾಗಿದೆ.
ಬಾಕ್ಸ್
ವಿದೇಶ ಪ್ರವಾಸದ ಕಥನ:
ಕಾನಹೊಸಹಳ್ಳಿಯ ಯು.ನಾಗೇಶ್ ಅವರು ಕರ್ನಾಟಕ ಸೇರಿ ದೇಶದ ನಾನಾ ಭಾಗದ ಪ್ರವಾಸ ನಡೆಸಿದ್ದಲ್ಲದೆ, ಕೊಲೊಂಬೊ, ಸಿಂಗಾಪುರ, ಮಲೇಷ್ಯಿಯಾ, ಬಹರೇನ್ , ದುಬೈ, ಅಬುದಾಬಿ, ಶಾರ್ಜಾ, ಕತಾರ್ , ಮಾಲ್ಡೀವ್ ್ಸ ಹಾಗೂ ಶ್ರೀಲಂಕಾ ದೇಶಗಳಲ್ಲೂತಮ್ಮ ಪ್ರವಾಸ ನಡೆಸಿ, ಅಲ್ಲಿನ ಅನುಭವವನ್ನು ಪುಸ್ತಕ ರೂಪದಲ್ಲಿಹೊರ ತಂದಿರುವುದು ಅವರ ಸಾಹಿತ್ಯ ಕ್ಷೇತ್ರದ ಆಸಕ್ತಿಗೆ ಸಾಕ್ಷಿಯಾಗಿದೆ.
ಫೋಟೋಗಳು
23 ಕೂಡ್ಲಿಗಿ ಎಒಕೆ 01ರಿಂದ 15ರವರೆಗೆ

