ಕಾಬೂಲ್ : ಪಾಕಿಸ್ತಾನದಲ್ಲಿಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಗಳ ಸರಣಿಗೆ ಪ್ರತೀಕಾರವಾಗಿ, ಪಾಕಿಸ್ತಾನ ಸೇನೆಯು ಅಫಘಾನಿಸ್ತಾನದ ಗಡಿ ಭಾಗಗಳಲ್ಲಿಇರುವ ಉಗ್ರರ ಅಡಗುದಾಣಗಳ ಮೇಲೆ ವಾಯುದಾಳಿ ನಡೆಸಿರುವುದನ್ನು ಪಾಕಿಸ್ತಾನ ಭಾನುವಾರ ಖಚಿತಪಡಿಸಿದೆ. ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗುಪ್ತಚರ ಮಾಹಿತಿ ಆಧರಿಸಿ, ಸೇನೆಯು ಆಯ್ದ ಸ್ಥಳಗಳಲ್ಲಿಕಾರ್ಯಾಚರಣೆಗಳನ್ನು ನಡೆಸಿ, ತೆಹ್ರಿಕ್ -ಎ-ತಾಲಿಬಾನ್ ಪಾಕಿಸ್ತಾನ್ ಹಾಗೂ ಅದಕ್ಕೆ ಸಂಬಂಧಿಸಿದ ಏಳು ಶಿಬಿರಗಳ ಮೇಲೆ ದಾಳಿ ಮಾಡಿದೆ. ಐಸಿಸ್ ಗುಂಪಿನ ಅಂಗಸಂಸ್ಥೆಯನ್ನೂ ಗಡಿ ಪ್ರದೇಶದಲ್ಲಿಗುರಿ ಮಾಡಿ ದಾಳಿ ಮಾಡಲಾಗಿದೆ ಎಂದಿದ್ದಾರೆ. ರಂಜಾನ್ ತಿಂಗಳಲ್ಲಿಇಸ್ಲಾಮಾಬಾದ್ , ಬಜೌರ್ ಹಾಗೂ ಬನ್ನು ಎಂಬಲ್ಲಿನಡೆದ ಆತ್ಮಾಹುತಿ ದಾಳಿಗಳಿಗೆ ಪ್ರತೀಕಾರ
ವಾಗಿ ಪಾಕ್ ಸೇನೆ ಈ ದಾಳಿ ನಡೆಸಿವೆ. ಬಜೌರ್ ನಲ್ಲಿ
ಆತ್ಮಾಹುತಿ ಬಾಂಬರ್ ವಾಹನವನ್ನು ಠಾಣೆಗೆ ಡಿಕ್ಕಿ ಹೊಡೆಸಿದ್ದರಿಂದ 11 ಸೈನಿಕರು ಮೃತಪಟ್ಟಿದ್ದರು. ಘಟನೆಯಲ್ಲಿಒಂದು ಮಗು ಕೂಡ ಮೃತಪಟ್ಟಿತ್ತು. ದಾಳಿ ಮಾಡಿದಾತ ಅಫಘಾನಿಸ್ತಾನದ ಪ್ರಜೆಯಾಗಿದ್ದ ಎಂದು ವರದಿಯಾಗಿದೆ.

