ಚಾಮರಾಜನಗರ: ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆದಲ್ಲಿರುವ ಕಡುವಿನಕಟ್ಟೆ ಹುಂಡಿ(ಕೆಕೆ ಹುಂಡಿ) ಬಳಿ ಭಾನುವಾರ ರಾತ್ರಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತವ್ಯಕ್ತಿಯನ್ನು ಕೆಎಸ್ ಆರ್ ಟಿಸಿ ಚಾಲಕ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದ ಸುಭಾಷ್ (33) ಎಂದು ಗುರುತಿಸಲಾಗಿದೆ ಎಂದು ಡಿವೈಎಸ್ಪಿ ಸ್ನೇಹಾರಾಜ್ ತಿಳಿಸಿದರು. ಸ್ಥಳಕ್ಕೆ ಎಎಸ್ಪಿ ಶಶಿಧರ್ , ಡಿವೈಎಸ್ಪಿ ಸ್ನೇಹರಾಜ್ ಸೇರಿದಂತೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಭಟನೆ: ಈ ರಸ್ತೆಯಲ್ಲಿಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು, ರಸ್ತೆ ಡುಬ್ಬ ನಿರ್ಮಾಣ ಮಾಡಬೇಕು ಎಂದು ಘಟನಾ ಸ್ಥಳದಲ್ಲೇ ಸ್ಥಳಿಯರು ಪ್ರತಿಭಟನೆ ನಡೆಸಿದರು.

