ಧಾರ್ಮಿಕ ಕ್ಷೇತ್ರಗಳಿಂದ ಐಕ್ಯತೆ

Contributed bypaddu.thippasandara@gmail.com|Vijaya Karnataka

ಮಾಗಡಿ ಗ್ರಾಮಾಂತರದ ತೊರೆಪಾಳ್ಯ ಗ್ರಾಮದಲ್ಲಿ ಶನಿಮಹಾತ್ಮ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಿತು. ಮಾಜಿ ಶಾಸಕ ಎ.ಮಂಜುನಾಥ್‌ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಧಾರ್ಮಿಕ ಕಾರ್ಯಗಳು ಐಕ್ಯತೆ ಕಾಪಾಡುತ್ತವೆ ಎಂದರು. ಧರ್ಮ ಕೇಂದ್ರಗಳಿಗೆ ತೆರಳಿ ಅಭಿವೃದ್ಧಿ ಮಾಡೋಣ ಎಂದು ಕರೆ ನೀಡಿದರು. ಈ ಹಿಂದೆ ತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದನ್ನು ಸ್ಮರಿಸಿದರು. ಶನೇಶ್ಚರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಉತ್ಸವಗಳು ನಡೆದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

faith and unity religious activities

ಮಾಜಿ ಶಾಸಕ ಎ.ಮಂಜುನಾಥ್ ಹೇಳಿಕೆ

ವಿಕ ಸುದ್ದಿಲೋಕ ಮಾಗಡಿ ಗ್ರಾಮಾಂತರ

ಧಾರ್ಮಿಕ ಕಾರ್ಯಗಳು ನಮ್ಮ ಐಕ್ಯತೆಯನ್ನು ಕಾಪಾಡುವ ಪವಿತ್ರ ಆಚರಣೆಗಳಾಗಿವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಮಾಗಡಿಯ ಕಾಳಾರಿಕಾವಲ್ ಪಂಚಾಯತಿ ವ್ಯಾಪ್ತಿಯ ತೊರೆಪಾಳ್ಯ ಗ್ರಾಮದ ಶನಿಮಹಾತ್ಮ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿಭಾಗಿಯಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಧರ್ಮ ಕೇಂದ್ರಗಳಲ್ಲಿಶ್ರದ್ಧೆ ಭಕ್ತಿ ಮತ್ತು ನೆಮ್ಮದಿಯ ಬದುಕು ಅಡಗಿದೆ. ಹೀಗಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿ ತೆರಳೋಣ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯನ್ನು ಎಲ್ಲರೂ ಸೇರಿ ಮಾಡೋಣ. ನಮ್ಮ ಅವಧಿಯಲ್ಲಿತಾಲೂಕಿನ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡಿದ್ದೆವು ಎಂದು ಸ್ಮರಿಸಿಕೊಂಡರು.

ತೊರೆಪಾಳ್ಯ ಶನೇಶ್ಚರ ಸ್ವಾಮಿ ದೇವಸ್ಥಾನದಲ್ಲಿಶನೇಶ್ಚರ ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಕಳಶ ಪೂಜೆ ಮತ್ತು ಉತ್ಸವಗಳು ನೆರವೇರಿದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎನ್ ಮಂಜುನಾಥ್ ಹಾಗೂ ಬೆಳಗುಂಬ ಸಹಕಾರ ಸಂಘದ ರಂಗಣ್ಣ ಇತರರು ಹಾಜರಿದ್ದರು.

23ಎಸ್ ಎಲ್ ಆರ್ 4

ತೊರೆಪಾಳ್ಯ ಶನೇಶ್ಚರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿಮಾಜಿ ಶಾಸಕ ಎ.ಮಂಜುನಾಥ್ ಪೂಜೆ ಸಲ್ಲಿಸಿದರು.