ಫಿಲ್ಮ್ ಫೇರ್ ಕೋಟ್ಸ್

Contributed bybabitha.salian@timesgroup.com|Vijaya Karnataka

ಫಿಲ್ಮ್‌ಫೇರ್ ಪ್ರಶಸ್ತಿಗಳು ಹಲವು ಕನ್ನಡ ಸಿನಿಮಾಗಳಿಗೆ ಲಭಿಸಿವೆ. 'ಬಘೀರ' ತಂಡಕ್ಕೆ ಇದು ಸಂತಸ ತಂದಿದೆ. 'ಕೋಳಿ ಎಸ್ರು' ಚಿತ್ರಕ್ಕೆ ಪ್ರಶಸ್ತಿ ದೊರೆತಿರುವುದು ನಟ ಅಕ್ಷತಾ ಪಾಂಡವಪುರ ಅವರಿಗೆ ಖುಷಿ ನೀಡಿದೆ. ನಿರ್ದೇಶಕಿ ಚಂಪಾ ಶೆಟ್ಟಿಯವರಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದು ಅವರು ಹಾರೈಸಿದ್ದಾರೆ. 'ಶಾಖಾಹಾರಿ' ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಂದಿರುವುದು ನಿರ್ದೇಶಕ ಸಂದೀಪ್ ಸುಂಕದ್ ಅವರಿಗೆ ಅಚ್ಚರಿ ತಂದಿದೆ.

celebrating successes in filmfare awards

ಯಾವುದೇ ಸಿನಿಮಾವಾದರೂ ನಾವೆಲ್ಲಾಅದಕ್ಕೆ ಶ್ರಮ ಹಾಕೇ ಹಾಕುತ್ತೇವೆ. ಆ ಶ್ರಮಕ್ಕೆ ಇಂಥ ಗೌರವಗಳು ಸಿಕ್ಕಿದಾಗ ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡಲು ಸ್ಫೂರ್ತಿಯಾಗುತ್ತದೆ. ‘ಬಘೀರ’ ಇಡೀ ತಂಡದ ಶ್ರಮವಾಗಿತ್ತು. ಈ ಸಿನಿಮಾಗೆ ಫಿಲ್ಮ್ ಫೇರ್ ಪಡೆಯುತ್ತಿರುವುದು ನನಗೆ ಹಾಗೂ ನನ್ನ ಸಿನಿಮಾ ತಂಡಕ್ಕೆ ಖುಷಿ ಕೊಟ್ಟಿದೆ.

ಶ್ರೀಮುರಳಿ

‘ಕೋಳಿ ಎಸ್ರು’ ಎಂಬ ಅಪ್ಪಟ ಕಲಾತ್ಮಕ ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸವಿದೆ. ನನ್ನ ನಟನೆಯನ್ನು ಪ್ರೋತ್ಸಾಹಿಸಿದ ಪಾತ್ರವರ್ಗ, ತಾಂತ್ರಿಕ ವರ್ಗಕ್ಕೆ ನಾನೆಷ್ಟು ಕೃತಜ್ಞತೆ ಹೇಳಿದರೂ ಸಾಲದು. ಈ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿಯವರಿಗೆ ಇನ್ನಷ್ಟು ಸಿನಿಮಾ ನಿರ್ದೇಶಿಸುವ ಅವಕಾಶ ಸಿಗಲಿ.

ಅಕ್ಷತಾ ಪಾಂಡವಪುರ

ಯಾವುದೇ ನಿರೀಕ್ಷೆ ಇಲ್ಲದೆ, ಯಾರನ್ನೂ ಮೆಚ್ಚಿಸುವ ಉದ್ದೇಶವಿಲ್ಲದೆ ಮಾಡಿದ ಸಿನಿಮಾಗೆ ಸಿಗುತ್ತಿರುವ ಪ್ರಶಸ್ತಿಗಳು ಹೊಸ ನಿರ್ದೇಶಕನಿಗೆ ಜವಾಬ್ದಾರಿ ಹೆಚ್ಚಿಸುವ ಜತೆಗೆ ತಂಡದ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ. 10 ದಿನಗಳ ಹಿಂದಷ್ಟೇ ಫಿಲ್ಮ್ ಫೇರ್ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಶಾಖಾಹಾರಿ’ಗೆ ಬಂದಿರುವುದಾಗಿ ತಿಳಿದಾಗ ನನಗೂ ಅಚ್ಚರಿಯಾಗಿತ್ತು.

ಸಂದೀಪ್ ಸುಂಕದ್ | ನಿರ್ದೇಶಕ