ಆಸ್ಪ್ರೇಲಿಯಾ ವಿರುದ್ಧವೂ ಮಣಿದ ಭಾರತ ಹಾಕಿ ತಂಡ

Contributed bymanjunath.gowda@timesgroup.com|Vijaya Karnataka

ಭಾರತ ಪುರುಷರ ಹಾಕಿ ತಂಡ ಹೋಬರ್ಟ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಿಂದ ಸೋಲುಂಡಿತು. ಪೂರ್ಣಾವಧಿಯಲ್ಲಿ ಪಂದ್ಯ 2-2 ಗೋಲುಗಳಿಂದ ಸಮಗೊಂಡಿತ್ತು. ಅಮಿತ್ ರೋಹಿದಾಸ್ ಮತ್ತು ಜುಗ್ರಾಜ್ ಸಿಂಗ್ ಭಾರತದ ಪರ ಗೋಲು ಗಳಿಸಿದರು. ಈ ಸೋಲಿನೊಂದಿಗೆ ಭಾರತ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಖಾತೆ ತೆರೆಯಲು ವಿಫಲವಾಯಿತು. ಭಾರತದ ಮುಂದಿನ ಪಂದ್ಯ ಮಂಗಳವಾರ ಸ್ಪೇನ್ ವಿರುದ್ಧ ನಡೆಯಲಿದೆ.

indian hockey team faces tough defeat against australia australia wins in penalty shootout

ಹೋಬರ್ಟ್ : ಭಾರತ ಪುರುಷರ ಹಾಕಿ ತಂಡ ಸ್ಫೂರ್ತಿದಾಯಕ ಪ್ರದರ್ಶನ ನೀಡಿತಾದರೂ ಪ್ರಬಲ ಆಸ್ಪ್ರೇಲಿಯಾ ತಂಡದ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಹೋಬರ್ಟ್ ಎಫ್ ಐಎಚ್ ಪ್ರೊ ಲೀಗ್ ನಲ್ಲಿಖಾತೆ ತೆರೆಯಲು ಟೀಮ್ ಇಂಡಿಯಾಗೆ ಸಾಧ್ಯವಾಗಲಿಲ್ಲ. ಭಾನುವಾರ ನಡೆದ ಹಣಾಹಣಿಯ ಪೂರ್ಣಾವಧಿಯಲ್ಲಿಭಾರತ ಮತ್ತು ಆಸ್ಪ್ರೇಲಿಯಾ ತಂಡಗಳು 2-2 ಗೋಲ್ ಗಳಿಂದ ಸಮಬಲ ಸಾಧಿಸಿದವು.ನಂತರ ಫಲಿತಾಂಶಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿಆಸ್ಪ್ರೇಲಿಯಾ 5-4 ಗೋಲ್ ಗಳಿಂದ ರೋಚಕ ಗೆಲುವು ಸಾಧಿಸಿತು. ಪಂದ್ಯದ ಪೂರ್ಣಾವಧಿಯಲ್ಲಿಭಾರತ ಪರ ಅಮಿತ್ ರೋಹಿದಾಸ್ (15ನೇ ನಿ.) ಮತ್ತು ಜುಗ್ರಾಜ್ ಸಿಂಗ್ (43ನೇ ನಿ.)ಒಂದೊಂದು ಗೋಲ್ ಗಳಿಸಿದರೆ, ಆಸ್ಪ್ರೇಲಿಯಾ ತಂಡದ ಪರ ಜೋಯಲ್ ರಿಂಟಾಲಾ(47, 56ನೇ ನಿ.) ಅವಳಿ ಗೋಲ್ ಗಳಿಸಿದರು. ರೂರ್ಕೆಲಾದಲ್ಲಿನಡೆದ ತವರಿನ ನಾಲ್ಕು ಪಂದ್ಯಗಳಲ್ಲಿನ ಸೋಲು ಸೇರಿದಂತೆ ಈ ವರ್ಷದ ಎಫ್ ಐಎಚ್ ಪ್ರೊ ಲೀಗ್ ನಲ್ಲಿಸತತ ಐದು ಸೋಲುಗಳ ನಂತರ ಭಾರತ ಪುಟಿದೇಳುವ ಯತ್ನ ಮಾಡಿತು. ಅಮಿತ್ ಮತ್ತು ಜುಗ್ರಾಜ್ ತಂಡದ ಹೋರಾಟಕ್ಕೆ ಬಲ ತುಂಬಿದರು. ಆದರೆ ಪೆನಾಲ್ಟಿ ಶೌಟೌಟ್ ನಲ್ಲಿಅಲ್ಪದರಲ್ಲಿಎಡವಿದ ಭಾರತ ಮೊದಲ ಗೆಲುವಿನ ಅವಕಾಶವನ್ನು ಕೈಚೆಲ್ಲಿತು. ಭಾರತ ಹೋಬರ್ಟ್ ಲೆಗ್ ನ ತನ್ನ ಮುಂದಿನ ಪಂದ್ಯದಲ್ಲಿಮಂಗಳವಾರ ಸ್ಪೇನ್ ತಂಡವನ್ನು ಎದುರಿಸಲಿದೆ.