ಹೊಸದಿಲ್ಲಿ: ರಾಷ್ಟ್ರರಾಜಧಾನಿಯ 11ನೇ ಹೊಧಿಸಧಿದಿಧಿಲ್ಲಿಮ್ಯಾರಥಾನ್ ಗೆದ್ದ ಕಾರ್ತಿಕ್ ಕರ್ಕೇರ ಸೇರಿದಂತೆ ಮೂವರು ಈ ವರ್ಷದ ಏಷ್ಯನ್ ಗೇಮ್ಸ್ ಗೆ ನಿಗದಿಪಡಿಸಿಧಿರುವ ಅರ್ಹತಾ ಮಾನದಂಡವನ್ನು ಪೂರೈಸಿ ಗಮನ ಸೆಳೆದದ್ದಾರೆ. ಭಾನುವಾರ ನಡೆದ ಪುರುಷರ ವಿಭಾಗದ ಫುಲ್ ಮ್ಯಾರಥಾನ್ ಸ್ಪರ್ಧೆಯಲ್ಲಿಕರ್ಕೇರ(2:13: 10) ಮೊದಲಿಗರಾಗಿ ಗುರಿ ತಲುಪಿದರು. ಮುಂಬಯಿನಲ್ಲಿನೆಲೆಸಿರುವ ಕರ್ನಾಟಕದ ಮೂಲಕ ಕರ್ಕೇರ, ಜಪಾನ್ ನಲ್ಲಿಈ ವರ್ಷಾಂತ್ಯದಲ್ಲಿನಡೆಯಲಿರುವ ಏಷ್ಯನ್ ಗೇಮ್ಸ್ ಗೆ ನಿಗದಿಪಡಿಸಲಾದ ಅರ್ಹತಾ ಮಾನದಂಡವನ್ನು ಪೂರೈಸಿದರು. ವೃತ್ತಿಯಲ್ಲಿವೈದ್ಯರಾಗಿರುವ 28 ವರ್ಷದ ಕರ್ಕೇರ, ಪೋಡಿಯಂನಲ್ಲಿಮೊದಲ ಸ್ಥಾನ ಪಡೆಯಲು ಗೋಪಿ ಥೋನಕಲ್ (2:13.12) ಮತ್ತು ಮಾನ್ ಸಿಂಗ್ (2: 13.15) ಅವರಿಂದ ತುರುಸಿನ ಪೈಪೋಟಿ ಎದುರಿಸಿದರು. ಇವರಿಬ್ಬರೂ ಕ್ರಮವಾಗಿ 2 ಮತ್ತು ಮೂರನೇ ಸ್ಥಾನ ಗಳಿಸಿದರು. ಸೆಪ್ಟೆಂಬರ್ ನಲ್ಲಿನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಅರ್ಹತೆ ಪಡೆಯಲು ಪುರುಷರ ವಿಭಾಗದಲ್ಲಿ2:15.04 ಅರ್ಹತಾ ಮಾನದಂಡವನ್ನು ನಿಗದಿಪಡಿಸಧಿಲಾಗಿದೆ. ಆದರೆ ಮಹಿಳೆಯರ ವಿಭಾಗದ ಫುಲ್ ಮ್ಯಾರಥಾನ್ ಸ್ಪರ್ಧೆಧಿಯಲ್ಲಿಯಾರೊಬ್ಬರೂ ಏಷ್ಯನ್ ಗೇಮ್ಸ್ ಅರ್ಹತೆ (2:31.52) ದಾಟಲು ಸಾಧ್ಯವಾಗಧಿಧಿಲಿಲ್ಲ. ಠಾಕೋರ್ ನಿರ್ಮಾಬೆನ್ ಭಾರತಜೀ (2:41:15); ಭಾಗೀರಥಿ (2:43:28) ಮತ್ತು ಅಶ್ವಿನಿ ಮದನ್ ಜಾಧವ್ (2:56:59) ಕ್ರಮವಾಗಿ ಮೊದಲ 3 ಸ್ಥಾನ ಹಂಚಿಕೊಂಡರು.

