ಪರಿಸರದಲ್ಲಿಪಕ್ಷಿಗಳ ಪಾತ್ರ ಪ್ರಮುಖ
ವಿಕ ಸುದ್ದಿಲೋಕ ಮುಂಡರಗಿ
ಭೂಮಿಲ್ಲಿವೈವಿಧ್ಯಮಯ ಪರಿಸರ, ಜಗತ್ತಿನ ಬೇರೆಬೇರೆ ಭಾಗಗಳಲ್ಲಿ, ಬೆಳವಣಿಗೆಯಾಗುವಲ್ಲಿಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಮಾನವ ಅಭಿವೃದ್ಧಿಯ ಹೆಸರಿನಲ್ಲಿನಿತ್ಯವೂ ಪರಿಸರ ನಾಶ ಮಾಡುತ್ತಲೆ ಇದ್ದಾನೆ ಎಂದು ಧಾರವಾಡದ ಪಕ್ಷಿ ತಜ್ಞ ಪ್ರಕಾಶಗೌಡ ಪಾಟೀಲ ಹೇಳಿದರು.
ತಾಲೂಕಿನ ಹೆಸರೂರು ಸರಕಾರಿ ಪ್ರೌಢಶಾಲೆಯಲ್ಲಿನೆರಳು ಇಕೋಕ್ಲಬ್ ಅಡಿಯಲ್ಲಿಜರುಗಿದ ಪರಿಸರ ರಕ್ಷಣೆಯಲ್ಲಿಪಕ್ಷಿಗಳ ಪಾತ್ರದ ಕುರಿತು ಮಾತನಾಡಿದರು.
ಭೂಮಿ ರಚನೆಯಲ್ಲಿಮಾನವ ರಸ್ತೆ, ಅಣೆಕಟ್ಟು ಮತ್ತು ಕೈಗಾರಿಕೆಗಳಿಗಾಗಿ ಕಾಡು ನಾಶಮಾಡಿದ್ದಾನೆ. ಅದೆ ಸಮಯದಲ್ಲಿಕೀಟಗಳು ಮತ್ತು ಪಕ್ಷಿಗಳು ಪರಿಸರದ ರಕ್ಷಣೆಗೆ ಸೈನಿಕರಂತೆ ಕೆಲಸಮಾಡುತ್ತಿದ್ದಾರೆ. ಇದು ನಮ್ಮ ಮುಂದಿನ ಪಿಳಿಗೆಗೆ ನಾವು ಪರಿಸರ ಉಳಿಸಬೇಕಾದರೆ, ಪಕ್ಷಿಗಳನ್ನು ಉಳಿಸಬೇಕು ಎಂದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ಶಾಲಾ ಪರಿಸರದ ಸೈನಿಕರೆಂದರೆ ಇಕೋಕ್ಲಬ್ ಸದಸ್ಯರು, ನೀವು ಶಾಲೆ ಸ್ವಚ್ಛತೆ, ಕಸದ ನಿರ್ವಣೆಯನ್ನು ಸರಿಯಾಗಿ ಮಾಡುತ್ತ ಶಾಲೆಯನ್ನು ಸುಂದರಗೊಳಿಸುವ ಕೆಲಸ ಮಾಬೇಕು ಎಂದರು.
ಪಾರ್ವತಿ ಹಿರೇಮಠ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಪ್ರಧಾನ ಗುರು ಮಲ್ಲಪ್ಪ ನಾಟಿಕರ್ ಅಧ್ಯಕ್ಷತೆವಹಿಸಿದ್ದರು. ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಚ್ .ಎನ್ .ಹಿರೇಮಠ ಸ್ವಾಗತಿಸಿದರು. ಮಹೇಶ ಎಸ್ .ಎಚ್ . ವಂದಿಸಿದರು.
ಪೋಟೊ ಶಿರ್ಷಿಕೆ23ಎಂಡಿಆರ್ 3
ಮುಂಡರಗಿ ತಾಲೂಕಿನ ಹೆಸರೂರು ಸರಕಾರಿ ಪ್ರೌಢಶಾಲೆಯಲ್ಲಿನಡೆದ ಪರಿಸರ ರಕ್ಷಣೆಯಲ್ಲಿಪಕ್ಷಿಗಳ ಪಾತ್ರದ ಕುರಿತು ಪ್ರಕಾಶಗೌಡ ಪಾಟೀಲ ಮಾತನಾಡಿದರು.

