ಗುಲ್ಮಾರ್ಗ್ ನಲ್ಲಿ ಚಳಿಗಾಲದ ಕೂಟ

Contributed bymanjunath.gowda@timesgroup.com|Vijaya Karnataka

ಗುಲ್ಮಾರ್ಗ್‌ನಲ್ಲಿ ಆರನೇ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ ನಡೆಯಲಿದೆ. 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಗುಲ್ಮಾರ್ಗ್‌ನಲ್ಲಿ ಉತ್ತಮ ಹಿಮದ ಹೊದಿಕೆ ಇದೆ. ಹವಾಮಾನ ಸಹಕಾರ ನೀಡುವ ನಿರೀಕ್ಷೆ ಇದೆ.

winter sports festival set to unfold in gulmarg a treat for sports enthusiasts

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಚಳಿಗಾಲದ ತಾಣವಾದ ಗುಲ್ಮಾರ್ಗ್ ಆರನೇ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ (ಕೆಐಡಬ್ಲ್ಯೂಜಿ)ಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಕೂಟದಲ್ಲಿ400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಸ್ಕೀ-ರೆಸಾರ್ಟ್ ನಲ್ಲಿಸೋಮವಾರದಿಂದ ನಾಲ್ಕು ದಿನಗಳ ಕೂಟಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಟಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಸಿರು ನಿಶಾನೆ ತೋರಲಿದ್ದಾರೆ. ‘‘30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 400 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿಭಾಗವಹಿಸುತ್ತಿದ್ದಾರೆ. ಗುಲ್ಮಾರ್ಗ್ ನಲ್ಲಿಉತ್ತಮ ಹಿಮ ಹೊದಿಕೆ ಇದೆ ಮತ್ತು ಹವಾಮಾನವು ನಮ್ಮನ್ನು ಬೆಂಬಲಿಸುತ್ತದೆ ಎಂದು ನಾವು ಭಾವಿಸುತ್ತೇವೆ,’’ ಎಂದು ಗುಲ್ ಹೇಳಿದರು.