ಬೆನ್ನಿ

Contributed byshubha.hegde@timesgroup.com|Vijaya Karnataka

ನಟಿ ನಂದಿತಾ ಶ್ವೇತಾ ಅಭಿನಯದ 'ಬೆನ್ನಿ' ಸಿನಿಮಾದ ಮಾಸ್‌ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರವು ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆ. 'ಪೆಪೆ' ಖ್ಯಾತಿಯ ನಿರ್ದೇಶಕ ಶ್ರೀಲೇಶ್‌ ಎಸ್‌ ನಾಯರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಟರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಲಿದ್ದಾರೆ. ರಾಮೇನಹಳ್ಳಿ ಜಗನ್ನಾಥ್‌ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನೀಡಿದ್ದಾರೆ.

multilingual film bennie nanditha shweta as lead

ಜಿಂಕೆಮರಿ ಶ್ವೇತಾ ಈಗ ಫುಲ್ ವೈಲೆಂಟ್

ನಟಿ ನಂದಿತಾ ಶ್ವೇತಾ ಅಭಿನಯದ ಮಹಿಳಾ ಪ್ರಧಾನ ‘ಬೆನ್ನಿ’ ಸಿನಿಮಾದ ಮಾಸ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಸಂಕ್ರಾಂತಿಗೆ ‘ಬೆನ್ನಿ’ ಸಿನಿಮಾದ ಮೋಷನ್ ಪೋಸ್ಟರ್ ಅನಾವರಣಗೊಂಡಿದ್ದು, ‘ಪೆಪೆ’ ಸಿನಿಮಾ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ‘ಬೆನ್ನಿ’ ಸಿನಿಮಾ ಮೂಲಕ ಮಹಿಳಾ ಪ್ರಧಾನ ಕಥೆಯನ್ನು ಹೇಳಲು ಹೊರಟಿದ್ದಾರೆ. ಬಹುಭಾಷಾ ನಟಿ, ಕನ್ನಡದ ಜಿಂಕೆ ಮರಿ ಖ್ಯಾತಿಯ ನಂದಿತಾ ಶ್ವೇತಾ ಈ ಚಿತ್ರದ ನಾಯಕಿ. ಇವರು ಕಂಪ್ಲೀಟ್ ವೈಲೆಂಟ್ ಲುಕ್ ನಲ್ಲಿಕಾಣಿಸಿಕೊಂಡಿದ್ದಾರೆ.

ಬೆನ್ನಿ ಚಿತ್ರದಲ್ಲಿದಕ್ಷಿಣದ ಭಾರತದ ಪ್ರಮುಖ ನಟರು ಅಭಿನಯಿಸಲಿದ್ದಾರೆ. ಕನ್ನಡ ಮಾತ್ರವಲ್ಲತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ.

ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಗುರುಪ್ರಸಾದ್ ನಾರ್ನಾಡ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಈ ಚಿತ್ರಕ್ಕೆ ಇದೆ.