ವಿಕ ಸುದ್ದಿಲೋಕ ಹುಮನಾಬಾದ್ ಭೂಮಿ ಪೂಜೆ ಮಾಡಿದ ನಿರ್ಮಾಣ ಕಾಮಾಗಾರಿಗೆ ಮತ್ತೊಮ್ಮೆ ಭೂಮಿ ಪೂಜೆ ಮಾಡುವ ಮೂಲಕ ಜಿಲ್ಲಾಉಸ್ತುವಾರಿ ಸಚಿವರು ನಿಯಮವನ್ನು ಗಾಳಿಗೆ ತೂರಿದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಆರೋಪಿಸಿದರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಹಿಪ್ಪರಗಾ ಕ್ರಾಸ್ ಹತ್ತಿರದಲ್ಲಿಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಾಮಗಾರಿಗೆ ಜಿಲ್ಲಾಉಸ್ತುವಾರಿ ಸಚಿವರು ಸೋಮವಾರ ಭೂಮಿ ಪೂಜೆ ನಡೆಸಿದಕ್ಕೆ ವಿರೋಧ ವ್ಯಕ್ತಪಡಿಸಿ, ಪಟ್ಟಣದಲ್ಲಿರುವ ಗೃಹ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದರು. 2025-26 ನೇ ಸಾಲಿನಲ್ಲಿ ಕ್ರೈಸ್ ಇಲಾಖೆಯ ಅಡಿಯಲ್ಲಿಹುಮನಾಬಾದ್ ಮತ ಕ್ಷೇತ್ರದ ತಾಳಮಡಗಿ ಗ್ರಾಮದಲ್ಲಿಪಜಾ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲು ಕಳೆದ ಫೆ.2ರಂದು ಕ್ರೈಸ್ತ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಸದರಿ ಕಾರ್ಯಕ್ರಮವನ್ನು ಫೆ. 9ರಂದು ನಿಯಮಪ್ರಕಾರ ಆಯೋಜಿಸಿಲು ಸೂಚಿಸಿ ಭೂಮಿ ಪೂಜೆ ನೆರವೇರಿಸಿದ್ದೇನೆ. ಈ ಕುರಿತು ಅಧಿಕಾರಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ ಶಾಸಕ ಡಾ.ಪಾಟೀಲ್ ಇಂದು ಆಯೋಜಿಸಿದ ಕಾರ್ಯಕ್ರಮ ಕುರಿತು ಜಿಲ್ಲಾಉಸ್ತುವಾರಿ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದರೆ ಬಹಿರಂಗ ಪಡೆಸಲಿ ಎಂದರು. ನನ್ನ ಕ್ಷೇತ್ರವನ್ನು ಆಯೋಜಿಸಿದ ಕಾರ್ಯಕ್ರಮದಲ್ಲಿನನ್ನನ್ನು ಕರೆದು ನನಗೆ ಬರದಂತೆ ತಡೆದು ಕಾರ್ಯಕ್ರಮ ನಡೆಸಿದ್ದು, ಜಿಲ್ಲಾಉಸ್ತುವಾರಿ ಸಚಿವರಿಗೆ ಶೋಭೆ ತರುವಂತಹದ್ದಲ್ಲಎಂದ ಶಾಸಕ ಡಾ.ಪಾಟೀಲ್ , ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಇದೆ ಕಾಂಗ್ರೆಸ್ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದಾಗ ಉಸ್ತುವಾರಿ ಸಚಿವರನ್ನು ಮತ್ತು ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಮಾತೆತ್ತರೆ ಸಂವಿಧಾನದ ಬಗ್ಗೆ ಮಾತನಾಡುವವರು ಜನರಿಂದ ಆಯ್ಕೆಯಾದ ನನ್ನನ್ನು ಹೊರಗಿಟ್ಟಿ ಕಾರ್ಯಕ್ರಮ ಆಯೋಜಿಸಿದ್ದು ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸದನದಲ್ಲಿಪ್ರಸ್ತಾಪಿಸುವ ಜತೆ ಕ್ರೈಸ್ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಷ್ಟಾಚಾರ ಉಲ್ಲಂಘನೆಯ ಕುರಿತು ದೂರು ಸಲ್ಲಿಸುವುದಾಗಿ ತಿಳಿಸಿದರು. ಭೂಮಿ ಪೂಜೆ ಮಾಡಿದ ಕಾರ್ಯಕ್ರಮಕ್ಕೆ ಮತ್ತೊಮ್ಮೆ ಭೂಮಿ ಪೂಜೆ ಮಾಡಬೇಡಿ ಎಂದು ಜಿಲ್ಲಾಉಸ್ತುವಾರಿ ಸಚಿವರನ್ನು ಕೈಮುಗಿದು ಕೇಳಿಕೊಂಡರು. ಭಾಲ್ಕಿ ಕ್ಷೇತ್ರದಿಂದ ಗೆದ್ದು ಸಚಿವರಾದ, ಜಿಲ್ಲಾಉಸ್ತುವಾರಿಗಳ ನಡೆ ಖಂಡನೀಯವಾಗಿದೆ ಎಂದರು. ಮುಖಂಡರಾದ ವಿಶ್ವನಾಥ ಪಾಟೀಲ್ ಮಾಡಗೋಳ, ಮಲ್ಲಿಕಾರ್ಜುನ ಪಾಟೀಲ್ , ಕೆಎಮ್ ಗಜೇಂದ್ರ, ಅನೀಲ ಪರ್ಸಗಿ, ರವಿ ಹೋಸಳ್ಳಿ ಸೇರಿದಂತೆ ಪ್ರಮುಖರು ಇದ್ದರು.

