ಕುವೈತ್ ವಾಯುನೆಲೆಯಲ್ಲಿಅಮೆರಿಕದ ಮೂರು ಎಫ್-15 ಯುದ್ಧ ವಿಮಾನಗಳು ಪತನಗೊಂಡಿವೆ. ಇರಾನ್ ಈ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಅಮೆರಿಕ, ಕುವೈತ್ ವಾಯು ರಕ್ಷಣಾ ವ್ಯವಸ್ಥೆಯ ಆಕಸ್ಮಿಕ ಕಾರ್ಯಾಚರಣೆಯಿಂದ ವಿಮಾನಗಳು ಪತನಗೊಂಡಿವೆ ಎಂದು ಸ್ಪಷ್ಟಪಡಿಸಿದೆ. ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕ-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಕುವೈತ್‌ನ ವಾಯುನೆಲೆಯಲ್ಲಿ ಸೋಮವಾರ ಬೆಳಗ್ಗೆ ಅಮೆರಿಕ ವಾಯುಪಡೆಯ ಮೂರು ಶಕ್ತಿಶಾಲಿ ಎಫ್-15 ಯುದ್ಧ ವಿಮಾನಗಳು ಪತನಗೊಂಡಿವೆ. ಇರಾನ್ ಈ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದೆ. ಆದರೆ ಅಮೆರಿಕ, ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯ ತಪ್ಪು ಕಾರ್ಯಾಚರಣೆಯಿಂದ ಈ ಅವಘಡ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದೆ. ಈ ದುರ್ಘಟನೆಯಲ್ಲಿ ಎಲ್ಲಾ 6 ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಜಿಗಿದಿದ್ದು, ಗಾಯಗೊಂಡಿರುವ ಇಬ್ಬರು ಪೈಲಟ್‌ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇರಾನ್, ಅಮೆರಿಕದ ಜೆಟ್‌ಗಳನ್ನು ಕ್ಷಿಪಣಿ ದಾಳಿಯಿಂದ ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದೆ. ವಿಮಾನಗಳು ಬೆಂಕಿ ಹೊತ್ತಿಕೊಂಡು ಕೆಳಗೆ ಬೀಳುತ್ತಿರುವ ವಿಡಿಯೊವನ್ನು ಇರಾನ್ ಹಂಚಿಕೊಂಡಿದೆ. ಪೈಲಟ್‌ಗಳು ಕುವೈತ್ ವಾಯುನೆಲೆ ಒಳಗೆ ಜಿಗಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಜಿಗಿದು, ಗಾಯಗೊಂಡ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೊ ಕೂಡ ಲಭ್ಯವಾಗಿದೆ.ಆದರೆ, ಅಮೆರಿಕ ಈ ಹೇಳಿಕೆಯನ್ನು ತಳ್ಳಿಹಾಕಿದೆ. "ಆಕಸ್ಮಿಕವಾಗಿ ವಾಯುಪಡೆಯು ಮೂರು ಜೆಟ್‌ಗಳು ಪತನಗೊಂಡಿವೆ. ತಪ್ಪಾಗಿ ಅಂದಾಜಿಸಿದ ಕುವೈತ್ ವಾಯು ರಕ್ಷಣಾ ವ್ಯವಸ್ಥೆಯ ಆಕಸ್ಮಿಕ ಕಾರ್ಯಾಚರಣೆಯಿಂದ ವಿಮಾನಗಳು ಪತನಗೊಂಡಿವೆ. ಎಲ್ಲಾ 6 ಪೈಲಟ್‌ಗಳು ಪ್ಯಾರಾಚೂಟ್ ಬಳಸಿಕೊಂಡು ಜಿಗಿದಿದ್ದಾರೆ. ಗಾಯಾಳು ಪೈಲಟ್‌ಗಳು ಸುರಕ್ಷಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅಮೆರಿಕ ತಿಳಿಸಿದೆ.