ವಿರೋಶ್ ಮದುವೆ ಗೌಪ್ಯತೆ ಕಾಯ್ದ
ಮ್ಯಾಗ್ನೆಟಿಕ್ ಮೊಬೈಲ್ ಪೌಚ್
-ಹೈಪ್ರೊಫೈಲ್ ಮದುವೆಯ ಹೊಸ ಟ್ರೆಂಡ್
ಇಂಟ್ರೊ
ಸೆಲೆಬ್ರಿಟಿ ದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅದ್ಧೂರಿ ಮದುವೆಯ ಒಂದೇ ಒಂದು ಝಲಕ್ ಸೋರಿಕೆಯಾಗದಂತೆ ನೋಡಿಕೊಂಡಿದ್ದು ಮ್ಯಾಗ್ನೆಟಿಕ್ ಮೊಬೈಲ್ ಪೌಚ್ ! ಈ ಹೊಸ ವಿಧಾನ ಮುಂಬರುವ ಸೆಲೆಬ್ರಿಟಿ ಮದುವೆಗಳಲ್ಲೂಕಮಾಲ್ ಮಾಡಲಿದೆ ಎನ್ನಲಾಗುತ್ತಿದೆ.
ಕಿರಣ್ ಚಂದ್ರ
ಈಗಿನ ಸೆಲ್ಫಿ ಯುಗದ ಮದುವೆ ಮನೆಯಲ್ಲಿಬಹುತೇಕ ಜನರು ಸಿಕ್ಕ ಸಿಕ್ಕಲ್ಲಿಸೆಲ್ಫಿ ಕ್ಲಿಕ್ಕಿಸಿ ಅಪ್ ಲೋಡ್ ಮಾಡುವ ಚಿತ್ರಣವಿದೆ. ಇದರಿಂದಾಗಿ ಹೈಪ್ರೊಫೈಲ್ ಮದುವೆಗಳು ಈ ಮೊದಲಿನಂತಿಲ್ಲ. ಎರ್ರಾಬಿರ್ರಿಯಾಗಿ ನುಗ್ಗುವ ಅಭಿಮಾನಿಗಳು ಎಲ್ಲೆಂದರಲ್ಲಿಸೆಲ್ಫಿ ಕ್ಲಿಕ್ಕಿಸಿ ಅದನ್ನು ಎಡಿಟ್ ಮಾಡದೆಯೇ ಕೆಲವೇ ಕ್ಷಣಗಳಲ್ಲಿಸೋಶಿಯಲ್ ಮೀಡಿಯಾದಲ್ಲಿಅಪ್ ಲೋಡ್ ಮಾಡುತ್ತಾರೆ. ಈ ಮೂಲಕ ವಧು, ವರನ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುತ್ತಾರೆ. ಇದನ್ನು ತಡೆಯಲು ರಶ್ಮಿಕಾ ಮತ್ತು ವಿಜಯ್ ತಮ್ಮ ಮದುವೆಯಲ್ಲಿಪರಿಚಯಿಸಿದ ಮ್ಯಾಗ್ನೆಟಿಕ್ ಮೊಬೈಲ್ ಪೌಚ್ ಸುದ್ದಿಯಲ್ಲಿದೆ.
ಟಾಪ್ ಸೀಕ್ರೆಟ್
ವಿರೋಶ್ ಜೋಡಿಯ ಪ್ರಿ ವೆಡ್ಡಿಂಗ್ ಸೇರಿದಂತೆ ಮದುವೆ ದಿನದ ಒಂದೇ ಒಂದು ಫೋಟೊ ಅಥವಾ ವಿಡಿಯೊ ಹೊರಗಡೆ ಬಂದಿಲ್ಲ. ಸಾಕಷ್ಟು ಜನರು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿಒಬ್ಬರು ಕೂಡ ಮದುಮಕ್ಕಳ ಫೋಟೊ ಶೇರ್ ಮಾಡಲಿಲ್ಲ. ರಶ್ಮಿಕಾ ಮತ್ತು ವಿಜಯ್ ಸ್ವತಃ ಅಧಿಕೃತವಾಗಿ ಮದುವೆ ಫೋಟೊ ಹಂಚಿಕೊಳ್ಳುವವರೆಗೂ ಮದುವೆ ಮನೆಯಲ್ಲಿಏನು ನಡೆಯುತ್ತಿದೆ, ಮದುಮಕ್ಕಳು ಹೇಗೆ ಕಾಣುತ್ತಾರೆ, ಯಾರೆಲ್ಲಬಂದಿದ್ದಾರೆ ಎಂಬುದು ಯಾರಿಗೂ ತಿಳಿಯಲಿಲ್ಲ. ಹಾಗಂತ ಮದುವೆಗೆ ಬರುವ ಹೈ ಪ್ರೊಫೈಲ್ ಅತಿಥಿಗಳು, ಆಪ್ತರು, ಸ್ನೇಹಿತರ ಮೊಬೈಲ್ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವಿರೋಶ್ ತಂಡ ಮಾಡಿದ ಹೊಸ ಮಾಸ್ಟರ್ ಪ್ಲ್ಯಾನ್ ಎಂದರೆ ಕ್ಯಾಮರಾ ಮುಚ್ಚುವ ವಿಶೇಷ ಮೊಬೈಲ್ ಪೌಚ್ .
ಹೊಸ ಟ್ರೆಂಡ್
ಈಗ ಬಿಗ್ ಬಜೆಟ್ ನಲ್ಲಿನಿರ್ಮಾಣವಾಗುವ ಸಿನಿಮಾ ಸೆಟ್ ಗಳಲ್ಲಿಚಿತ್ರಕ್ಕೆ ಸಂಬಂಧಿಸಿದ ಯಾವುದೇ ಲುಕ್ , ಸೆಟ್ ಅಥವಾ ದೃಶ್ಯಗಳು ಸೋರಿಕೆಯಾಗಬಾರದೆಂದು ಫೋಟೊ, ವಿಡಿಯೊ ಮಾಡಲು ಸಾಧ್ಯವಾಗದ, ಆದರೆ ಇನ್ನುಳಿದ ವಿಷಯಗಳಿಗೆ ಮೊಬೈಲ್ ಬಳಸಲು ಸಾಧ್ಯವಾಗುವ ಮ್ಯಾಗ್ನೆಟಿಕ್ ಲಾಕ್ ನ ಮೊಬೈಲ್ ಪೌಚ್ ಬಳಸಲಾಗುತ್ತದೆ. ರಶ್ಮಿಕಾ-ವಿಜಯ್ ಮದುವೆಗೆ ಬಂದಿದ್ದ ಅತಿಥಿಗಳ ಮೊಬೈಲ್ ಫೋನ್ ಗೂ ಇದನ್ನೇ ಬಳಸಲಾಗಿದೆ. ಇದು ತೀರಾ ಅತಿ ಆಯಿತು ಎಂದು ಅನಿಸಿದರೂ ಅದ್ಧೂರಿ ಮದುವೆಯನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ಕೊಟ್ಟು, ಅದರ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲು ಹತ್ತಾರು ಕ್ಯಾಮೆರಾಮನ್ ಗಳಿಗೆ ದುಡ್ಡು ಕೊಟ್ಟು ಕರೆಸಿರುವಾಗ ಮೊಬೈಲ್ ಕ್ಯಾಮೆರಾಗಳಿಗೇನು ಕೆಲಸ ಎಂಬಂತಿರುವ ಮದುವೆ ಆಯೋಜಕರ ನಡೆ ಮೆಚ್ಚುಗೆಗೂ ಪಾತ್ರವಾಗಿದೆ. ಈ ಮ್ಯಾಗ್ನೆಟಿಕ್ ಲಾಕ್ ನ ಮೊಬೈಲ್ ಪೌಚ್ ಸದ್ಯಕ್ಕೆ ವೈರಲ್ ಆಗಿದ್ದು, ಮುಂಬರುವ ಬಿಗ್ ಮದುವೆಗಳಲ್ಲಿಯೂ ಈ ಟ್ರೆಂಡ್ ಕಾಣಿಸಿಕೊಂಡರೆ ಅಚ್ಚರಿ ಇಲ್ಲ.
ಬಾಕ್ಸ್
ವಿಜಯ್ ಮತ್ತು ನಾನು ಒಂದಾಗಿ ನರ್ತಿಸಿದ ಆ ರಾತ್ರಿ
ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಸಂಗೀತ್ ಕಾರ್ಯಕ್ರಮದ ಸುಂದರ ಫೋಟೊ ಮತ್ತು ವಿಡಿಯೊಗಳನ್ನು ಶೇರ್ ಮಾಡಿದ್ದಾರೆ. ‘ಪ್ರೀತಿ, ಆನಂದಬಾಷ್ಪ, ನಗು, ಸಂಗೀತ, ಹಾಡು, ಥಳಕುಮಯವಾಗಿದ್ದ ಆ ರಾತ್ರಿಯಿಡೀ ನಾವು ನರ್ತಿಸಿದೆವು. ನಿಜವಾಗಿಯೂ ಅದು ಫನ್ ನೈಟ್ . ನಾನು ಮತ್ತು ವಿಜ್ಜು ಪ್ರತಿಯೊಬ್ಬರಿಗೂ ಸರ್ ಪ್ರೈಸ್ ಕೊಡಲು ಬಯಸಿದ್ದರೆ, ನಮ್ಮ ಕುಟುಂಬ ನಮಗೆ ಸರ್ ಪ್ರೈಸ್ ಕೊಡಲು ಕಾಯುತ್ತಿತ್ತು. ಫ್ಯಾಮಿಲಿ ಡಾನ್ಸ್ ಎಕ್ಸೈಟಿಂಗ್ ಮತ್ತು ಅಚ್ಚರಿಯಿಂದ ಕೂಡಿತ್ತು. ನಾನಂದು ಧರಿಸಿದ್ದ ಡಿಸೈನರ್ ವೇರ್ ಸೂಪರ್ ಹೆವಿ ಆಗಿತ್ತು. ಆದರೂ ಅದರಲ್ಲಿಯೇ ರಾತ್ರಿಯಿಡೀ ಸಂಭ್ರಮಿಸಿದೆ. 24.2.26! ಈ ರಾತ್ರಿಯಂದು ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿನಾನು ಮತ್ತು ವಿಜಯ್ ಒಂದಾಗಿ ಡಾನ್ಸ್ ಮಾಡಿದೆವು’ ಎಂದು ಬರೆದುಕೊಂಡಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿರಶ್ಮಿಕಾ ಹೊಳೆಯುವ ಹೆವಿ ಎಂಬ್ರಾಯ್ಡರಿ ಮಾಡಿದ್ದ ಐವರಿ ಬಣ್ಣದ ಲೆಹೆಂಗಾ ಚೋಲಿ ಧರಿಸಿದ್ದು, ವಿಜಯ್ ಹೊನ್ನಿನ ಚಿತ್ತಾರದ ಕೋಟ್ ಮತ್ತು ರಾಯಲ್ ಬ್ಲೂಬಣ್ಣದ ಶೇರ್ವಾನಿ ಧರಿಸಿ ಅದರ ಮೇಲೆ ಗ್ರೇ ಬಣ್ಣದ ಲಾಂಗ್ ಕೇಪ್ ಧರಿಸಿದ್ದು ವಿಶೇಷವಾಗಿತ್ತು.

