ಕಸೂರಿ ಮೇಥಿಯ ಸೂಕ್ತ ಬಳಕೆ
ಮೆಂತ್ಯೆ ಸೊಪ್ಪಿನ ಒಣ ರೂಪವಾಗಿರುವ ಕಸೂರಿ ಮೇಥಿ ಕೆಲವು ಖಾದ್ಯಗಳಿಗೆ ವಿಶೇಷ ರುಚಿ ಮತ್ತು ಪರಿಮಳ ನೀಡುತ್ತದೆ. ಆದರೆ ಅನೇಕ ಜನರು ಇದನ್ನು ಕೇವಲ ದಾಲ್ ಅಥವಾ ಪಲ್ಯಕ್ಕೆ ಮಾತ್ರ ಬಳಸಬಹುದೆಂದು ಅಂದುಕೊಂಡಿದ್ದಾರೆ. ಇದನ್ನು ಇನ್ನಿತರ ಅಡುಗೆಗಳಿಗೂ ಬಳಸಬಹುದು.
-ಪಂಜಾಬಿ ಶೈಲಿಯ ಅಡುಗೆಗಳು ಕಸೂರಿ ಮೇಥಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅವರು ಸಸ್ಯಾಹಾರ ಮಾತ್ರವಲ್ಲದೆ, ಮಾಂಸಾಹಾರ ಖಾದ್ಯಗಳಲ್ಲೂಇದನ್ನು ಬಳಸುತ್ತಾರೆ.
-ಬಟರ್ ಚಿಕನ್ , ಚಿಕನ್ ಟಿಕ್ಕಾ ಮಸಾಲ ಇತ್ಯಾದಿಗೆ ಒಂದೇ ಚಿಟಿಕೆ ಕಸೂರಿ ಮೇಥಿ ಹಾಕಿ ಪರಿಮಳದಲ್ಲಾಗುವ ವ್ಯತ್ಯಾಸ ಗಮನಿಸಿ. ಚಿಕನ್ ಮ್ಯಾರಿನೇಟ್ ಗೆ ಕಸೂರಿ ಮೇಥಿ ಬೆರೆಸಿ ಬಳಿಕ ಗ್ರಿಲ್ ಮಾಡಿದರೆ ಆ ಖಾದ್ಯ ವಿಶಿಷ್ಟ ರುಚಿ ಬೀರುತ್ತದೆ.
-ಕುರ್ಮಾ, ಗ್ರೇವಿ ಇತ್ಯಾದಿಗೂ ಒಂದು ಚಿಟಿಕೆ ಕಸೂರಿ ಮೇಥಿ ಹಾಕಬಹುದು. ಪ್ರತಿದಿನ ಸಸ್ಯಾಹಾರ ತಿಂದು ಬೇಸರವಾಗಿದ್ದರೆ ಆಯಾ ಖಾದ್ಯಗಳಿಗೆ ಒಂದು ಚಿಟಿಕೆ ಕಸೂರಿ ಮೇಥಿ ಹಾಕಿದರೆ ಆ ಖಾದ್ಯಕ್ಕೆ ಮಾಂಸಾಹಾರದಂಥ ಪರಿಮಳ ಬರುತ್ತದೆ.
-ಒಗ್ಗರಣೆ ಹಾಕುವಾಗ ಕಸೂರಿ ಮೇಥಿಯನ್ನು ಬಿಸಿ ತುಪ್ಪ ಅಥವಾ ಎಣ್ಣೆಗೆ ಹಾಕಿ ಚಟಪಟಾಯಿಸಿ. ನಾದಿಟ್ಟ ಪರೋಟಾಗೆ ಕಸೂರಿ ಮೇಥಿ ಬೆರೆಸಿ. ಒಣ ಮೆಂತ್ಯೆ ಸೊಪ್ಪನ್ನು ಸಿರಿಧಾನ್ಯ, ಕಡಲೆಬೇಳೆ, ರಾಜ್ಮಾ, ಚೋಲೆ ಮತ್ತು ಬ್ರೆಡ್ ಮಾಡಲು ಕೂಡ ಬಳಸಬಹುದು.

