ವಿಕ ಸುದ್ದಿಲೋಕ ಶಿರಸಿ
ಪರಿಸರ, ನೆಲ, ಜಲ ಸಂರಕ್ಷಣೆ, ಸ್ವಚ್ಛತೆ ಮತ್ತು ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಸದಾ ತೊಡಗಿಕೊಳ್ಳುವ ಇಲ್ಲಿನ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಸದ್ದಿಲ್ಲದೇ ನಡೆಸಿದ ಮತ್ತೊಂದು ಜನೋಪಯೋಗಿ ಕಾರ್ಯ ಪೂರ್ಣವಾಗಿ ಸಾರ್ವಜನಿಕರಿಂದ ಮೆಚ್ಚುಗೆಗೆ ಕಾರಣವಾಗುತ್ತಿದೆ.
ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಿಂದ ಚಿಪಗಿ ಕ್ರಾಸ್ ತನಕದ ಮಾರ್ಗದಲ್ಲಿಸಾರ್ವಜನಿಕರ ಆರಾಮಕ್ಕಾಗಿ ಕಳೆದ ಮಳೆಗಾಲ ಪೂರ್ವದಲ್ಲಿಹಾಗೂ ಈಗ ಒಟ್ಟು 23 ಪಾರ್ಕ್ ಬೆಂಚ್ ಗಳನ್ನು ಅಳವಡಿಸಿ ವಾಯು ವಿಹಾರಿಗಳಿಗೆ, ಬಿಸಿಲ ಝಳದಲ್ಲಿದೊಡ್ಡ ವಾಹನಗಳ ಚಾಲಕರಿಗೆ ವಿಶ್ರಮಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಹಿಂದೆ ಇದೇ ಮಾರ್ಗದಲ್ಲಿತ್ಯಾಜ್ಯ ಎಸೆಯುವ ಸಮಸ್ಯೆ ಹೆಚ್ಚಾಗಿತ್ತು. ಸ್ವಚ್ಛತೆಗೆ ಅಡ್ಡಿಯಾಗಿತ್ತು. ನಗರದ ಪ್ರವೇಶದ ಮೊದಲೇ ತ್ಯಾಜ್ಯಗಳು ಸ್ವಾಗತಿಸುವಂತೆ ಇದ್ದವು. ಇದನ್ನು ಗಮನಿಸಿದ ಶ್ರೀನಿವಾಸ ಹೆಬ್ಬಾರ್ ಅವರು ನಿರಂತರ ಸ್ವಚ್ಛತಾ ಕಾರ್ಯ ಕೈಗೊಂಡು, ಜನರಲ್ಲಿಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಕಾಲೇಜಿನಿಂದ ಚಿಪಗಿ ರಸ್ತೆಯವರೆಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ನಿಗಾ ವಹಿಸಿದ್ದರು. ಸುರಕ್ಷತೆ ಹಾಗೂ ನಿಯಂತ್ರಣಕ್ಕಾಗಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಿದ್ದರು. ತ್ಯಾಜ್ಯ ಎಸೆಯುವ ಪ್ರಮಾಣ ಕಡಿಮೆ ಆದಂತೆ ಹೆಬ್ಬಾರ ಅವರು ಬೆಂಚ್ ಅಳವಡಿಸಿ ಬಣ್ಣ ಕೂಡ ಹಚ್ಚಿಸಿದ್ದಾರೆ.
ಸದಾ ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುತ್ತಿರುವ ಹೆಬ್ಬಾರ್ ಅವರು ಈ ಹಿಂದೆ ಅನೇಕ ಕೆರೆಗಳ ಅಭಿವೃದ್ಧಿ ಕಾರ್ಯ ನಡೆಸಿ, ಜಲಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದೂ ಉಲ್ಲೇಖನೀಯ.
ಬಾಕ್ಸ್
ಈ ಬೆಂಚ್ ಗಳಿಂದ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವವರಿಗೆ ಕೆಲಸಮಯ ಕುಳಿತು ತೆರಳಲು ಅನುಕೂಲ ಆಗುತ್ತಿದೆ. ದೂರದ ಪ್ರಯಾಣ ಮಾಡುವ ವಾಹನ ಸವಾರರು ಒಂದಿಷ್ಟು ಸಮಯ ವಿಶ್ರಾಂತಿ ಪಡೆಯಲೂ ಸಹಾಯಕವಾಗಿದೆ.
-ನವೀನ ಶೆಟ್ಟಿ, ಗ್ರಾಪಂ ಸದಸ್ಯರು ಚಿಪಗಿ
ಕೋಟ್
ಹಲವು ಬೆಂಚ್ ಗಳನ್ನು ಕಳೆದ ಮಳೆಗಾಲ ಮೊದಲೇ ಅಳವಡಿಸಿದ್ದರೂ ಈಗ ಇನ್ನಷ್ಟು ಜೋಡಿಸಿ ಬಣ್ಣ ಕೂಡ ಮಾಡಿಸಲಾಗಿದೆ. ಜನರಿಗೆ ಅನುಕೂಲ ಆದರೆ ನಮಗೂ ಸಮಾಧಾನ.
-ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷರು ಶಿರಸಿ ಜೀವಜಲ ಕಾರ್ಯಪಡೆ ಶಿರಸಿ
15ಎಸ್ಸಾರೆಸ್ 9
ಶಿರಸಿಯ ಕಾಲೇಜು ಮಾರ್ಗದಂಚಿನಲ್ಲಿಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿಬೆಂಚುಗಳನ್ನು ಅಳವಡಿಸಿ ಬಣ್ಣ ಹಚ್ಚಲಾಗಿದೆ.

