ಸೂಳೆಕೆರೆ ಮಡಿಲಲ್ಲಿಸಂಕ್ರಾಂತಿ ಸಂಭ್ರಮ

Contributed bykogalurkumar@gmail.com|Vijaya Karnataka

ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲೆ ಹಾಗೂ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರ ದಂಡು ಹರಿದು ಬಂದಿತ್ತು. ಶ್ರೀ ಸಿದ್ದೇಶ್ವರಸ್ವಾಮಿ ಹಾಗೂ ಶಾಂತವ್ವ ದೇವಿಗೆ ಪೂಜೆ ಸಲ್ಲಿಸಲಾಯಿತು. ಪ್ರವಾಸಿಗರು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡು, ಬೋಟಿಂಗ್‌ ಸೌಲಭ್ಯವನ್ನು ಪಡೆದು ಖುಷಿಪಟ್ಟರು. ಕುಟುಂಬ ಸಮೇತರಾಗಿ ಆಗಮಿಸಿದ ಪ್ರವಾಸಿಗರು ಊಟ, ತಿಂಡಿ ಸವಿದರು.

sulekere madilalli sankranti influx of tourists natural beauty and boating attraction

ಕಿಕ್ಕರ್ : ನೈಸರ್ಗಿಕ ಸೌಂದರ್ಯ ವೀಕ್ಷಣೆಗೆ ಪ್ರವಾಸಿಗರ ದಾಂಗುಡಿ

----

ಸೂಳೆಕೆರೆ ಮಡಿಲಲ್ಲಿಸಂಕ್ರಾಂತಿ ಸಂಭ್ರಮ

ವಿಕ ಸುದ್ದಿಲೋಕ ಹಿರೇಕೋಗಲೂರು

ಏಷ್ಯಾ ಖಂಡದ ಅತೀ ದೊಡ್ಡ ಎರಡನೇ ಕೆರೆಯಾಗಿರುವ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗುರುವಾರ ಜಿಲ್ಲೆಸೇರಿ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರ ದಂಡೆ ಹರಿದು ಬಂದಿತ್ತು.

ಸಂಕ್ರಾಂತಿ ಹಬ್ಬದ ಹಿನ್ನೆಲೆ ಸೂಳೆಕೆರೆ ಶ್ರೀ ಸಿದ್ದೇಶ್ವರಸ್ವಾಮಿ ಹಾಗೂ ಶಾಂತವ್ವ ದೇವಿಗೆ ನವಗ್ರಹ ಪೂಜೆ, ಹೋಮ ಹವನಗಳೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಪ್ರವಾಸಿಗರ ದಾಂಗುಡಿ:

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಸೂಳೆಕೆರೆಗೆ ನೂರಾರು ಸಂಖ್ಯೆಯಲ್ಲಿಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿದ್ದರು. ದೇವರ ದರ್ಶನದ ನಂತರ ಜಲರಾಶಿಯ ಎದುರು ಮನೆಯಿಂದ ತಂದಿದ್ದ ಊಟ ಹಾಗೂ ತಿಂಡಿ ಸವಿದರು. ಸುತ್ತಲೂ ಹಚ್ಚಹಸಿರಿನ ಬೆಟ್ಟಗುಡ್ಡಗಳ ನೈಸರ್ಗಿಕ ಸೌಂದರ್ಯಕ್ಕೆ ಪ್ರವಾಸಿಗರು ಕಣ್ತುಂಬಿಕೊಂಡರು. ಮೊಬೈಲ್ ರೀಲ್ಸ್ , ಸೆಲ್ಫಿ ಚಿತ್ರ ಹಾಗೂ ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು.

ಬೋಟಿಂಗ್ ಆಕರ್ಷಣೆ:

ಸೂಳೆಕೆರೆ ಬೋಟಿಂಗ್ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ದಾಂಡೇಲಿ ಮಾನಸ ಅಡ್ವೆಂಚರ್ಸ್ ಸಂಸ್ಥೆ ಬೋಟಿಂಗ್ ನಿರ್ವಹಿಸುತ್ತಿದೆ. ಪ್ರತಿದಿನ 200 ರಿಂದ 500 ಜನ ಪ್ರವಾಸಿಗರು ಬರುತ್ತಿದ್ದು, ಮಕರ ಸಂಕ್ರಾಂತಿ ಪ್ರಯುಕ್ತ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗಿದೆ. 26.6 ಅಡಿ ನೀರಿನಿಂದ ತುಂಬಿ ತುಳುಕುತ್ತಿರುವ ಸೂಳೆಕೆರೆಯಲ್ಲಿಪ್ರವಾಸಿಗರು ಬೋಟಿಂಗ್ ಮಾಡಿ ಖುಷಿ ಅನುಭವಿಸಿದರು.

----

ಕೋಟ್ ...

ಕುಟುಂಬ ಸಮೇತರಾಗಿ 19 ಜನ ಬಂದಿದ್ದೇವೆ. ಜಲರಾಶಿಯಲ್ಲಿಬೋಟಿಂಗ್ ನಲ್ಲಿಕುಳಿತು ನಿಸರ್ಗ ಸವಿದೆವು. ಮುಂದಿನ ದಿನಗಳಲ್ಲಿಮನೆಯಲ್ಲಿನಡೆಯುವ ಯಾವುದೇ ಶುಭ ಸಮಾರಂಭಗಳಿದ್ದರೂ ಸೂಳೆಕೆರೆಯಲ್ಲಿಆಚರಿಸಲು ತಿರ್ಮಾನಿಸಿದ್ದೇವೆ .

- ಸುಶಿಲಮ್ಮ ಕುಟುಂಬ, ದಾವಣಗೆರೆ.

----

15 ಎಚ್ಕೆಜಿಎಲ್ 1

ಸೂಳೆಕೆರೆಗೆ ಗುರುವಾರ ಮಕರ ಸಂಕ್ರಾಂತಿ ಹಬ್ಬಕ್ಕೆ ನೂರಾರು ಸಂಖ್ಯೆಯಲ್ಲಿಪ್ರವಾಸಿಗರು ಆಗಮಿಸಿದ್ದರು.

---

15 ಎಚ್ಕೆಜಿಎಲ್

ಶ್ರೀ ಸಿದ್ದೇಶ್ವರಸ್ವಾಮಿ ಹಾಗೂ ಶಾಂತವ್ವದೇವಿಗೆ ಅಲಂಕಾರ.

---

15 ಎಚ್ಕೆಜಿಎಲ್ 3

ಸೂಳೆಕೆರೆಯಲ್ಲಿಬೋಟಿಂಗ್ ನಡೆಸಿ ಸಂಭ್ರಮಿಸಿದ ಪ್ರವಾಸಿಗರು.

--

15 ಎಚ್ಕೆಜಿಎಲ್ 4

ಸಳೆಕೆರೆ ಜಲರಾಶಿ ಎದುರಿನ ತೋಟದಲ್ಲಿಪ್ರವಾಸಿಗರು ಊಟ ಸವಿದರು.