ವಿಕ ಸುದ್ದಿಲೋಕ ಬೆಂಗಳೂರು
ಉಗಾಂಡಾದ ಹಾರ್ಬರ್ಟ್ ಕಿಬೆಟ್ ಮತ್ತು ಎರಡು ಬಾರಿಯ 5000 ಮೀಟರ್ ವಿಶ್ವ ಚಾಂಪಿಯನ್ ಇಥಿಯೋಪಿಯಾದ ಮುಕ್ತಾರ್ ಎಡ್ರಿಸ್ ಬೆಂಗಳೂರಿನ ಟಿಸಿಎಸ್ ವರ್ಲ್ಡ್ 10 ಕೆ ಓಟದ 18ನೇ ಆವೃತ್ತಿಯಲ್ಲಿಭಾಗವಹಿಸುತ್ತಿರುವ ಪ್ರಮುಖರಾಗಿದ್ದಾರೆ. ಏಪ್ರಿಲ್ 26ರಂದು ವಿಶ್ವ 10ಕೆ ಬೆಂಗಳೂರು ಓಟ ನಡೆಯಲಿದೆ.
ಎರಡು ವರ್ಷಗಳ ಹಿಂದೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿರನ್ನರ್ ಆಪ್ ಆಗಿದ್ದ 20 ವರ್ಷದ ಕಿಬೆಚ್ , ಈ ವರ್ಷದ ಆರಂಭದಲ್ಲಿ10 ಕೆಯಲ್ಲಿಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಸ್ಪಾ್ಯನಿಷ್ ಪಟ್ಟಣ ಕ್ಯಾಸ್ಟೆಲ್ಲನ್ ನಲ್ಲಿನಡೆದ ಸ್ಪರ್ಧೆಯಲ್ಲಿಪಾಲ್ಗೊಂಡಿದ್ದ ಅವರು ವಿಶ್ವದ ಪ್ರಮುಖ ಓಟಗಾರರ ಪೈಪೋಟಿ ಎದುರಿಸಿ 26 ನಿಮಿಷ 39 ಸೆಕೆಂಡ್ ಗಳಲ್ಲಿಗುರಿ ಮುಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವರ್ಷ 27 ನಿಮಿಷಗಳ ಅವಧಿಗೆ ಪ್ರವೇಶಿಸಿದ ಐವರು ಸ್ಪರ್ಧಿಗಳಲ್ಲಿಕಿಬೆಟ್ ಒಬ್ಬರಾಗಿದ್ದರೆ, ಬೆಂಗಳೂರು ಕೂಟ ದಾಖಲೆಗಿಂತ ವೇಗವಾಗಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿದ ಒಟ್ಟು 11 ಕ್ರೀಡಾಪಟುಗಳು ಸಹ ಕಣದಲ್ಲಿದ್ದಾರೆ.
ಹಾಲಿ ಚಾಂಪಿಯನ್ ಸಾರಾ ಚೆಲಂಗಟ್ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮರಳುತ್ತಿದ್ದಾರೆ. ಉಗಾಂಡಾದ ಓಟಗಾರ್ತಿ 2025 ರಲ್ಲಿ31ನಿಮಿಷ 07 ಸೆಕೆಂಡ್ ಗಳಲ್ಲಿಗುರಿ ತಲುಪುವ ಮೂಲಕ ಅಗ್ರಸ್ಥಾನ ಪಡೆದಿದ್ದರು. 2018 ಮತ್ತು 2019ರಲ್ಲಿ ಆಗ್ನೆಸ್ ಟಿರೋಪ್ ಪ್ರಶಸ್ತಿ ಉಳಿಸಿಕೊಂಡ ಮೊದಲ ಅಥ್ಲೀಟ್ ಎನಿಸಿದ್ದಾರೆ.

