ಸುದ್ದಿಚೂರು 2

Contributed bytvlbdr@gmail.com|Vijaya Karnataka

ಬೀದರ್‌ನಲ್ಲಿ ಬಸವ ಸೇವಾ ಪ್ರತಿಷ್ಠಾನವು ಶರಣ ಸಂಗಮ ಮತ್ತು ನಗೆಹಬ್ಬ ಆಯೋಜಿಸಿದೆ. ಡಾ.ಎಸ್‌.ಜಿ.ಸುಶೀಲಮ್ಮ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ದಲಿತ ಸಂಘರ್ಷ ಸಮಿತಿಯು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದೆ. ಹೋಳಿ ಹಬ್ಬದ ಪ್ರಯುಕ್ತ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ನೌಬಾದ್ ಬಳಿ ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

sharana sangama nagehabba and other events in bidar 2026 protest alcohol ban

ಶರಣ ಸಂಗಮ , ಸ್ಮರಣೋತ್ಸವ - ನಗೆಹಬ್ಬ ಇಂದು ಬೀದರ್ : ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿಶರಣ ಸಂಗಮ, ನಗೆಮಾರಿ ತಂದೆಯವರ ಸ್ಮರಣೋತ್ಸವ ನಗೆಹಬ್ಬ, ನಕ್ಕು ನಗಿಸಿ ದುಃಖ ದಹಿಸಿ ಕಾರ್ಯಕ್ರವನ್ನು ಮಾ.03 ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳ ಲಾಗಿದೆ. ಮುಂಡರಗಿ ತೋಂಟದಾರ್ಯ ಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ, ಬೆಂಗಳೂರು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಹಾಗೂ 2026ರ ಪದ್ಮಶ್ರೀ ಪುರಸ್ಕೃತೆ ಡಾ.ಎಸ್ .ಜಿ.ಸುಶೀಲಮ್ಮ ಅವರಿಗೆ ಅಭಿನಂದಿಸಲಾ ಗುವುದು. ಪಾಲಿಕೆಯ ಉಪಮಹಾಪೌರ ಲಕ್ಷಿತ್ರ್ಮಬಾಯಿ ಹಂಗರಗಿ ಉದ್ಘಾಟಿಸುವರು. ನಿವೃತ್ತ ಖಜಾನೆ ಅಧಿಕಾರಿ ಅಶೋಕ ವಡಗಾಂವೆ ಅಧ್ಯಕ್ಷತೆ ವಹಿಸುವರು. ದಶಪ್ಪ ಬೊರಗೊಂಡೆ, ಮಲ್ಲಿಕಾರ್ಜುನ ಟಂಕಸಾಲೆ, ಶರಣಬಸವ ಚಕುರ್ತೆ ಇರುವರು. ಮಾ.11ಕ್ಕೆ ಬೆಂಗಳೂರಿನಲ್ಲಿಬೃಹತ್ ಪ್ರತಿಭಟನೆ ಬೀದರ್ : ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ನಿರ್ಣಯದಂತೆ, 2026-27ರ ರಾಜ್ಯ ಬಜೆಟ್ ನಲ್ಲಿದಲಿತರ ಜನಸಂಖ್ಯೆಗೆ ಅನು ಗುಣವಾಗಿ ಶೇ.24.1ರಷ್ಟು ಅನುದಾನ ಮೀಸಲಿರಿಸು Üಂತೆ ಒತ್ತಾಯಿಸಿ ಬೆಂಗಳೂರಿ ನಲ್ಲಿರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಮಾ.11ರಂದು ಹಮ್ಮಿಕೊಳ್ಳಲಾಗಿದೆ. ಎಸ್ ಸಿಎಸ್ ಪಿ, ಟಿಎಸ್ ಪಿ ಕಾಯ್ದೆಯ ಸೆಕ್ಷನ್ 7(ಸಿ) ರದ್ದುಪಡಿಸಿ ಅನುದಾನದ ದುರ್ಬಳಕೆ ತಡೆಯಬೇಕು ಸೇರಿ ಇತರೆ ನ್ಯಾಯಸಮ್ಮತ ಬೇಡಿಕೆ ಗಳನ್ನು ಈಡೇರಿಸಲು ಒತ್ತಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಸೋಮವಾರ ಬೀದರ್ ನ ಪ್ರವಾಸಿ ಮಂದಿರದಲ್ಲಿಕರಪತ್ರ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿಕರ್ನಾಟಕ ದಲಿತ ಸಂಘಷÜರ್ ಸಮಿತಿಯ ಜಿಲ್ಲಾಸಂಚಾಲಕ ಧನರಾಜ ಮುಸ್ತಾಪುರ, ಸ.ಸಂಚಾಲಕ ಗುಂಡಪ್ಪ ಜ್ಯೋತಿ, ಅನಿಲ ಕಾಂಬಳೆ, ಔರಾದ್ ತಾಲೂಕು ಸಂಚಾಲಕ ಜೈ ಪ್ರಕಾಶ ಅಷ್ಟೂರೆ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಶಿಂಧೆ ಸೇರಿ ಇತರರಿದ್ದರು. ಹೋಳಿ ಹಬ್ಬ: ಮದ್ಯ ಮಾರಾಟ ನಿಷೇಧಿಸಿ ಆದೇಶ ಬೀದರ್ : ಹೋಳಿ ಹಬ್ಬದ ನಿಮಿತ್ತ ಜಿಲ್ಲಾದ್ಯಂತ ಹೋಳಿ ಹಬ್ಬವನ್ನು ಶಾಂತಿಯುತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ-21ರಲ್ಲಿಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಯಾದ್ಯಂತ ಮಾ.3, 4ರಂದು ಮದ್ಯ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಬೀದರ್ ನಗರದಲ್ಲಿಮಾ.2ರ ರಾತ್ರಿ 11.30ರಿಂದ ಮಾ.3ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಬೀದರ್ , ಹುಮನಾಬಾದ್ , ಬಸವಕಲ್ಯಾಣ, ಔರಾದ್ (ಬಿ), ಕಮಲನಗರ, ಹುಲಸೂರ, ಚಿಟಗುಪ್ಪ ತಾಲೂಕಿ ನಾದ್ಯಂತ ಮಾ.3ರ ಸಂಜೆ 6 ಗಂಟೆಯಿಂದ ಮಾ.4ರ ಮಧ್ಯರಾತ್ರಿ 12 ಗಂಟೆಯವರೆಗೆ, ಹಾಗೂ ಭಾಲ್ಕಿಯಲ್ಲಿಮಾ.4ರ ಬೆಳಗ್ಗೆ 6ರಿಂದ ಮಾ. 5ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲನಾನಾ ಮದ್ಯ ದಂಗಡಿಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶಿಸಿದ್ದಾರೆ. ರೈಲ್ವೆ ಹಳಿಗೆ ಬಿದ್ದು ಯುವಕ ಆತ್ಮಹತ್ಯೆ ಬೀದರ್ : ಜೀವನದಲ್ಲಿಜಿಗುಪ್ಸಗೊಂಡು ಯುವಕನೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೀದರ್ ನಗರದ ನೌಬಾದ್ ಬಳಿಯ ರೈಲ್ವೆ ಹಳಿ ಬಳಿ ನಡೆದಿದೆ. ಮೃತನನ್ನು ಗೋಪಾಲ್ ಚಂದ್ರಕಾಂತ (36) ಎಂದು ಗುರುತಿಸಲಾಗಿದ್ದು, ಹಳಿ ಮೇಲೆ ವೇಗವಾಗಿ ಬರುತ್ತಿದ್ದ ರೈಲಿಗೆ ಬಿದ್ದು ಜೀವ ಬಿಟ್ಟಿದ್ದಾನೆ ಎಂದು ಸ್ಥಳೀಯರು ವಿಕಕ್ಕೆ ತಿಳಿಸಿದ್ದಾರೆ. ರೈಲು ಬರುತ್ತಿರುವುದನ್ನು ಗಮನಿಸಿದ ಮೃತ ಗೋಪಾಲ್ , ಓಡಿ ಬಂದು ರೈಲ್ವೆ ಹಳಿಗೆ ಬಿದ್ದಿದ್ದಾನೆ. ರೈಲು ಮೇಲಿಂದ ಹರಿದು, ಮುಖ ಸೇರಿ ಬಹುತೇಕ ದೇಹವು ಛಿದ್ರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೂಲತಃ ಬೀದರ್ ತಾಲೂಕಿನ ಕೊಳಾರ ಗ್ರಾಮದವನಾಗಿರುವ ಈತನ ಆತ್ಮಹತ್ಯೆಗೆ ಜಿಗುಪ್ಸೆ ಎಂದು ಹೇಳಲಾಗಿದೆ. ಆದರೆ, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.