ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಆನಂದ ಸಿ.ಕುಂದರ್ ಆಯ್ಕೆ

Contributed by: chandrashekarbeejady@gmail.com|Vijaya Karnataka•
anand c kundar elected as president of saligrama shree gurunarasimha cooperative society
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಆನಂದ ಸಿ.ಕುಂದರ್ , ಸಂಜೀವ ಜಿ., ಮಂಜುನಾಥ ಎಸ್ .ಕೆ., ಶಂಕರ ಬಂಗೇರ, ವಸಂತ ಶೆಟ್ಟಿ, ವೈ.ಕೃಷ್ಣಮೂರ್ತಿ ಐತಾಳ್ , ಕೃಷ್ಣಪ್ಪ ಮರಕಾಲ, ಸುಂದರ ವೈ., ಗೋಪಾಲ ಭಟ್ಟ, ಶಾಂತಾ ಭಟ್ಟ, ನಾಗರತ್ನ ಬಾಯರಿ ಮತ್ತು ಸವಿತಾ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್ . ಚುನಾವಣಾಧಿಕಾರಿಯಾಗಿ ಭಾಗವಹಿಸಿ ಚುನಾವಣೆ ನಡೆಸಿಕೊಟ್ಟರು. ಇದೇ ಸಂದರ್ಭ ಸಂಘದ ಅಧ್ಯಕ್ಷ ಆನಂದ ಸಿ. ಕುಂದರ್ , ಉಪಾಧ್ಯಕ್ಷ ಸಂಜೀವ ಜಿ. ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಳ್ಳುವಲ್ಲಿಸಹಕರಿಸಿದ ಸದಸ್ಯರಿಗೆ ಆನಂದ ಸಿ.ಕುಂದರ್ ಕೃತಜ್ಞತೆ ಸಲ್ಲಿಸಿದರು.

ಫೊಟೋ: 12ಸಿಬಿ 1